ಪಠ್ಯಕ್ಕಿಂತ ರೋಹಿತ್ ತೇಜೋವಧೆಯೇ ಮುಖ್ಯವೇ?
ಪಠ್ಯಪುಸ್ತಕ ಪರಿಷ್ಕರಣೆ ವಿಚಾರವೀಗ ರಾಜ್ಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ರಾಜಕೀಯ ಪಕ್ಷಗಳ ನಡುವೆ ವಾದ- ಪ್ರತಿವಾದಗಳು ನಡೆಯುತ್ತಿವೆ. ಪಠ್ಯಪುಸ್ತಕ ಪರಿಷ್ಕರಣೆಗೆ ಅನರ್ಹ ಸಮಿತಿ ರಚಿಸಿ ಮಕ್ಕಳ ಭವಿಷ್ಯ ಹಾಳು ಮಾಡಲಾಗುತ್ತಿದೆ.
ಶಿಕ್ಷಣವನ್ನು ಕೇಸರೀಕರಣಗೊಳಿಸಲಾಗಿದೆ ಎಂಬ ಮಾತುಗಳೂ ಕೇಳಿಬಂದಿವೆ. ಇದರ ಬೆನ್ನ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥರ ಹಳೆಯ ಫೇಸ್‌ಬುಕ್ ಪೋಸ್ಟ್‌ಗಳನ್ನು ಪೋಸ್ಟ್ ಮಾಡಿ, ಅವರ ವಿರುದ್ಧ ಮುಗಿಬಿದ್ದಿದ್ದಾರೆ. ಅನೇಕರು ಪಠ್ಯದಲ್ಲಿ ಏನು ದೋಷವಾಗಿದೆ ಎಂಬುದನ್ನು ಹೇಳುವುದನ್ನು ಬಿಟ್ಟು ರೋಹಿತ್ ಚಕ್ರತೀರ್ಥರ ತೇಜೋವಧೆಗೇ ಮುಂದಾಗಿದ್ದಾರೆ. ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಸೇರಿ ದಂತೆ ಅನೇಕ ನಾಯಕರಿಗೆ ಮಕ್ಕಳ ಭವಿಷ್ಯಕ್ಕಿಂತ ಚಕ್ರತೀರ್ಥರ ಬೆಳವಣಿಗೆಯೇ ನುಂಗಲಾರದ ತುತ್ತಾದಂತೆ ಕಾಣುತ್ತಿದೆ.
ರೋಹಿತ್ ಚಕ್ರತೀರ್ಥರು ಕುವೆಂಪು ಅವರಿಗೆ ಅವಮಾನಿಸಿದ್ದಾರೆ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸುಮಾರು ಐದಾರು ವರ್ಷಗಳ ಹಿಂದೆ ರೋಹಿತ್ ಅವರು ಹಂಚಿಕೊಂಡಿದ್ದ ವಾಟ್ಸ್‌ಆಪ್ ಫಾರ್ವರ್ಡ್ ಒಂದರಲ್ಲಿ ನಾಡಗೀತೆಗೆ ಅವಮಾನ ಎಸಗಲಾಗಿದೆ ಎಂದು ರೋಹಿತ್ ಮೇಲೆ ಕೇಸ್ ಕೂಡ ಹಾಕಲಾಗಿತ್ತು. ಇನ್ನೂ ಆ ಕೇಸ್ ಸಕ್ರಿಯವಾಗಿಯೇ ಇದೆ. ಆ ಕುರಿತು ರೋಹಿತ್ ಅವರು ಕಾನೂನುರೀತಿ ಹೋರಾಟವನ್ನೂ ನಡೆಸುತ್ತಿದ್ದಾರೆ. ವಾಸ್ತವವಾಗಿ ರೋಹಿತ್ ಅವರು ಅಣಕ ವಾಡಿದ್ದು ನಾಡಗೀತೆಯನ್ನಲ್ಲ, ಕಾಂಗ್ರೆಸ್ ಸರಕಾರವನ್ನು ಹಾಗೂ ಬೆಂಬಲಿತ ಪುಡಾರಿಗಳನ್ನು. ಆದರೆ ನಾಡಗೀತೆಗೇ ಅವಮಾನ ಆಯಿತು ಎಂಬಂತೆ ತಿರುಚಲಾಗಿದೆ.
ಅಷ್ಟಕ್ಕೂ ಅದೊಂದು ಫಾರ್ವರ್ಡ್ ಮೆಸೇಜ್ ಎಂದು ಕೆಳಗೆ ಬರೆದಿದ್ದರೂ ಮೂಲ ಬರಹಗಾರನನ್ನು ಹುಡುಕುವ ಬದಲು ರೋಹಿತ್ ಅವರನ್ನೇ ಟಾರ್ಗೆಟ್ ಮಾಡಲಾಯಿತು. ಈ ಘಟನೆ ನಡೆದು ಆರೇಳು ವರ್ಷ ಕಳೆದ ಮೇಲೂ ರೋಹಿತ್ ವಿರುದ್ಧ ದಾಳಿ ಮಾಡುವವರಿಗೆಲ್ಲ ಇದೊಂದು ಅಸವಾಗಿದೆ. ಹಾಗಾದರೆ ರೋಹಿತ್ ಚಕ್ರತೀರ್ಥ ಅವರು ಒಂದು ಫಾರ್ವರ್ಡ್ ಮೆಸೇಜನ್ನು ಹಂಚಿಕೊಂಡಿದ್ದು ಅಪರಾಧವೆಂದಮೇಲೆ, ಆ ಪದ್ಯವನ್ನು ಇತರರು ಪೋ ಮಾಡುವುದೂಅಪರಾಧವೇ ಅಲ್ವಾ? ಅದನ್ನು ಮತ್ತೆ ಮತ್ತೆ ಪ್ರಚಲಿತಗೊಳಿಸುತ್ತಿರುವವರ ಮೇಲೆ ಏಕೆ ಕೇಸ್ ಹಾಕುತ್ತಿಲ್ಲ? ಇಲ್ಲಿ ಪಠ್ಯಕ್ಕಿಂತ ರೋಹಿತ್ ಚಕ್ರತೀರ್ಥ ಅವರೇ ಮುಖ್ಯವಾಗಿದ್ದಾರೆ. ಪ್ರತಿಪಕ್ಷಗಳ ಇಂತಹ ಮನಸ್ಥಿತಿ ಸರಿಯಲ್ಲ.