ಸಕಾಲಕ್ಕೆ ಬೀಜ, ಗೊಬ್ಬರ ಪೂರೈಸಿ
ರಾಜ್ಯಾದ್ಯಂತ ಉತ್ತಮ ಮಳೆಯಾಗಿದ್ದು, ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಗರಿಗೆದರಿವೆ. ರೈತರು ಭೂಮಿ ಹದಗೊಳಿಸಲು ಉಳುಮೆ ಮಾಡು ತ್ತಿದ್ದಾರೆ.
ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕಗಳನ್ನು ಖರೀದಿಸಲು ಮಳಿಗೆಗಳ ಮುಂದೆ ರೈತರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಆದರೆ ರಾಜ್ಯದ ಅನೇಕ ಕಡೆ ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿ ನಾಶಕದ ಪೂರೈಕೆ ಇನ್ನೂ ಆರಂಭವಾಗಿಲ್ಲ. ಮಾರಾಟಗಾರರು ಗೊಬ್ಬರವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಕೃತಕ ಅಭಾವ ಸೃಷ್ಟಿ ಮಾಡುತ್ತಿದ್ದಾರೆ. ಹೆಚ್ಚಿನ ದರಕ್ಕೆ ಕದ್ದು ಮುಚ್ಚಿ ಮಾರಾಟವನ್ನೂ ಮಾಡುತ್ತಿದ್ದಾರೆ. ಅವಧಿ ಮುಗಿದ ಕ್ರಿಮಿನಾಶಕ ಗಳನ್ನು ಮಾರುತ್ತಿzರೆ ಎಂಬ ದೂರುಗಳು ಕೇಳಿಬರುತ್ತಿವೆ.
ಕಳಪೆ ಬಿತ್ತನೆ ಬೀಜದ ಹಾವಳಿ ಈ ವರ್ಷವೂ ಮುಂದುವರಿದಿದೆ. ಕಳೆದ ವರ್ಷ ರಾಜ್ಯದ ಅನೇಕ ಭಾಗಗಳಲ್ಲಿ ಕಳಪೆ ಬೀಜ ಬಿತ್ತಿ ಕಂಗಾಲಾದ ರೈತರು, ವರ್ಷ ವಿಡೀ ಕೊರಗುವಂತಾಯಿತು. ಬಿತ್ತಿದ ಬೀಜ ಮೊಳಕೆ ಯೊಡೆಯದಿದ್ದರೆ, ರೈತನ ಕುಟುಂಬ ಬೀದಿಗೆ ಬೀಳುವ ಪರಿಸ್ಥಿತಿ ಬರುತ್ತದೆ. ಕಳಪೆ ಬೀಜ ಮಾರಾಟದಿಂದ ರೈತರು ಮೋಸ ಹೋಗಿ, ಇಳುವರಿ ಸಿಗದೆ ಸಾಲದ ಸುಳಿಗೆ ಸಿಕ್ಕು ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾರೆ. ಕೃಷಿ ಇಲಾಖೆ ಅಽಕಾರಿಗಳು ಕಳಪೆ ಬಿತ್ತನೆ ಬೀಜ, ಕ್ರಿಮಿನಾಶಕ ಮಾರಾಟ ಮಾಡುವ ಅಂಗಡಿಗಳ ಪರವಾನಗಿ ರದ್ದು ಮಾಡಿ ಸುಮ್ಮನೆ ಕೂರಬಾರದು.
ಇಂತಹವುಗಳ ವಿತರಣೆ ಮತ್ತು ಪೂರೈಕೆಯ ಜಾಲದ ಮೂಲವನ್ನು ಪತ್ತೆ ಹಚ್ಚಬೇಕು. ಇಲ್ಲವಾದರೆ ಪ್ರತಿವರ್ಷ ಇದು ಪುನರಾವರ್ತನೆ ಆಗುತ್ತಲೇ ಇರುತ್ತದೆ. ಗೊಬ್ಬರ ಮಾರಾಟ ಮಾಡುವ ವರ್ತಕರು ಮನಸ್ಸಿಗೆ ಬಂದ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ವರ್ತಕರು ಅಂಗಡಿಗಳಲ್ಲಿ ದರಪಟ್ಟಿ ಹಾಕಿ, ಆ ಪ್ರಕಾರವೇ ಮಾರಾಟ ಮಾಡುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕಿದೆ. ಜತೆಗೆ ಕೃಷಿ ಇಲಾಖೆಯಿಂದ ಸಾವಯವ ಗೊಬ್ಬರವನ್ನು ಸಹಾಯಧನದಡಿ ವಿತರಿಸಿ ಸಾವಯವ ಕೃಷಿಗೆ ಪ್ರೋತ್ಸಾಹಿಸಬೇಕಿದೆ.
ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ರಸಗೊಬ್ಬರ, ಬಿತ್ತನೆ ಬೀಜ, ಕೀಟನಾಶಕಗಳು ರಾಜ್ಯದ ಯಾವುದೇ ಭಾಗದಲ್ಲಿ ಕೊರತೆಯಾಗದಂತೆ ನೋಡಿ ಕೊಳ್ಳಬೇಕು. ಪಾಯಿಂಟ್ ಆಫ್ ಸೇಲ್ (ಪಿಒಎಸ್) ವ್ಯವಸ್ಥೆಯ ಮುಖಾಂತರವೇ ರಸಗೊಬ್ಬರ ವಿತರಣೆಯಾದರೆ ಭೌತಿಕ ದಾಸ್ತಾನು ಹಾಗೂ ಮಾರಾಟಇನ್ನಿತರ ಮಾಹಿತಿಗಳು ಪಾರದರ್ಶಕವಾಗಿ ಇರಲಿವೆ.