ಸಾರ್ಥಕವಾದ ಎಂಟು ವರ್ಷ
ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶದ ಆಡಳಿತದ ಚುಕ್ಕಾಣಿ ಹಿಡಿದು ಎಂಟು ವರ್ಷಗಳು ಕಳೆದವು. ಈ ಎಂಟು ವರ್ಷಗಳಲ್ಲಿ ಸಾಧಿಸಿದ್ದು ಸಾಕಷ್ಟಿದೆ. ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ದಾಗ ಭಾರತದ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ದೊರೆತಿರಲಿಲ್ಲ.
ಕೇವಲ 1 ಸಾವಿರ ದಿನಗಳಲ್ಲಿ 18 ಸಾವಿರ ಹಳ್ಳಿಗಳನ್ನು ವಿದ್ಯುದೀಕರಣಗೊಳಿಸಲಾಯಿತು. ಪ್ರತಿವರ್ಷ ಹತ್ತಾರು ಸಾವಿರ ಮಹಿಳೆಯರು ಶ್ವಾಸಕೋಶದ ಕ್ಯಾನ್ಸರ್‌ ನಿಂದ ಸಾಯುತ್ತಿದ್ದರು. ಹೊಗೆಯುಕ್ತ ವಾತಾವರಣದಲ್ಲಿ ಕೆಲಸ ನಿರ್ವಹಿಸುವ ಅನಿವಾರ್ಯವು ಕ್ಯಾನ್ಸರ್‌ಗೆ ಕಾರಣ ವಾಗುತ್ತಿತ್ತು. ಹೊಗೆಮುಕ್ತ ಅಡುಗೆ ಮನೆಯ ಕನಸು ಕಂಡ ಮೋದಿಯವರು ಉಜ್ವಲ ಯೋಜನೆ ಮೂಲಕ ತಲುಪಿದ್ದು ಬರೋಬ್ಬರಿ ೯ ಕೋಟಿ ಕುಟುಂಬಗಳನ್ನು. ಆರ್ಥಿಕ ಚಟುವಟಿಕೆಗಳಲ್ಲಿ ಜನಸಾ ಮಾನ್ಯನೂ ತೊಡಗಿಕೊಳ್ಳುವಂತೆ ಮಾಡಿದ ಪ್ರಧಾನ ಮಂತ್ರಿ ಜನ್‌ಧನ್ ಯೋಜನೆ, ಉತ್ಪಾದನೆಯನ್ನು ಹೆಚ್ಚಿಸಿ ರಫ್ತು ಕೈಗೊಳ್ಳುವ ಮೇಕ್ ಇನ್ ಇಂಡಿಯಾ ಯೋಜನೆ, ಕಾರ್ಮಿಕ ನೀತಿ ಹಾಗೂ ಶ್ರಮಿಕರ ಘನತೆಯನ್ನು ಉತ್ತೇಜಿಸುವ ಶ್ರಮ ಏವ ಜಯತೆ, ಅಟಲ್ ಪಿಂಚಣಿಯಿಂದ ಹಿಡಿದು ಹೊಸ ಯೋಜನೆ ಗಳೆಲ್ಲವನ್ನೂ ತಂತ್ರಜ್ಞಾನ ಅಳವಡಿಕೆಗೆ ಹೊಂದಿಸಲಾಯಿತು.
ಡಿಜಿಟಲ್ ಇಂಡಿಯಾ ಮಿಷನ್  ನರಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಯಿತು. ದೇಶದ ಬಹುಪಾಲು ಆದಾಯ ವಿದೇಶಗಳಿಂದ ಆಮದು ಮಾಡಿಕೊಳ್ಳುವ ಇಂಧನ ಹಾಗೂ ಯುದ್ಧ ಸಾಮಗ್ರಿಗಳ ಖರೀದಿಗೆ ವ್ಯಯವಾಗುತ್ತಿದೆ. ೨೦೫೦ರ ಹೊತ್ತಿಗೆ ಭಾರತವು ಇಂಧನ ಸ್ವಾವಲಂಬನೆ ಸಾಧಿಸಬೇಕು ಎಂದು ಮೋದಿ ಯವರು ಕರೆ ನೀಡಿದ್ದಾರೆ. ೧೦೦ ಗಿಗಾವ್ಯಾಟ್ ಸೌರ ವಿದ್ಯುತ್ ಹಾಗೂ ೭೫ ಗಿಗಾವ್ಯಾಟ್ ಪವನ ವಿದ್ಯುತ್ ಉತ್ಪಾದಿಸುವ ಯೋಜನೆಗೆ ನೀಲನಕ್ಷೆ ಸಿದ್ಧವಾಗಿದೆ. ರಕ್ಷಣಾ ಸಾಮಗ್ರಿಗಳಿಗೆ ವಿದೇಶಗಳನ್ನೇ ಆಶ್ರಯಿಸಿ ಅಪಾರ ಪ್ರಮಾಣದ ಹಣವನ್ನು ವ್ಯಯಿಸಬೇಕಾಗಿತ್ತು. ಭಾರತಕ್ಕೆಶಸ್ತ್ರಾಸ್ತ್ರಗಳನ್ನು ಪೂರೈಸುವ ರಾಷ್ಟ್ರಗಳೇ ಶತ್ರು ರಾಷ್ಟ್ರಗಳಿಗೂ ಶಸಾಸಗಳನ್ನು ಪೂರೈಸುತ್ತಿದ್ದವು.
ರಕ್ಷಣಾ ವೆಚ್ಚದ ಶೇ.೮೦ರಷ್ಟು ಹಣವನ್ನು ಸ್ವದೇಶಿ ನಿರ್ಮಿತ ಉತ್ಪನ್ನಗಳ ಖರೀದಿಗೆ ಮೀಸಲಿಡುವುದರೊಂದಿಗೆ ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ರಾಷ್ಟ್ರ ನಿರ್ಮಾಣದ ಧ್ಯೇಯೋದ್ದೇಶದೊಂದಿಗೆ ಸಾಗುತ್ತಿರುವ ಮೋದಿಯವರ ನೇತೃತ್ವದ ಸರಕಾರ ಎಂಟು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಮುಂದಿನ ಕನಸುಗಳೂ ಸಾಕಾರವಾಗಲಿ.