ದರ ಏರಿಕೆಗೆ ಬೀಳಲಿ ಕಡಿವಾಣ
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿರುವ ಈ ಹೊತ್ತಿನಲ್ಲೇ ರಾಜ್ಯದಲ್ಲಿ ವಿದ್ಯುತ್ ದರ ಒಂದೇ ವರ್ಷದ ಅವಧಿಯಲ್ಲಿಎರಡು ಬಾರಿ ಹೆಚ್ಚಳ ಮಾಡಲಾಗಿದೆ. ಪ್ರತಿಪಕ್ಷದಲ್ಲಿದ್ದಾಗ ಬೆಲೆ ಏರಿಕೆ ವಿರುದ್ಧ ಹೋರಾಟ ನಡೆಸುತ್ತಿದ್ದ ಬಿಜೆಪಿ ನಾಯಕರೇ ಈಗ ಅಧಿಕಾರದಲ್ಲಿದ್ದರೂ ಬೆಲೆ ಏರಿಕೆ ಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ.
ಜನರು ಕೋವಿಡ್ ನ ಹೊಡೆತದಿಂದ ಇನ್ನೂ ಸುಧಾರಿಸಿಕೊಂಡಿಲ್ಲ. ಇಂತಹ ಸಂದರ್ಭದಲ್ಲೇ ವಿದ್ಯುತ್ ದರ ಏರಿಕೆ ಮಾಡಲಾಗಿದೆ. ಕಳೆದ ಏಪ್ರಿಲ್‌ನಲ್ಲೇ ಪ್ರತೀ ಯೂನಿಟ್ ಗೆ ೩೫ ಪೈಸೆ ಏರಿಸಲಾಗಿತ್ತು. ಈಗ ಪುನಃ ವಿದ್ಯುತ್ ದರ ಏರಿಕೆ ಮಾಡ ಲಾಗಿದ್ದು, ೧೦೦ ಯೂನಿಟ್‌ಗೂ ಹೆಚ್ಚು ವಿದ್ಯುತ್ ಬಳಸುವವರು ಹೆಚ್ಚುವರಿ ಯಾಗಿ ? ೧೯ರಿಂದ ? ೩೧ರವರೆಗೆ ಪಾವತಿಸಬೇಕಾಗುತ್ತದೆ. ‘ಕಲ್ಲಿದ್ದಲು ದರ ಏರಿಕೆಯಿಂದಾಗಿ ವಿದ್ಯುತ್ ಉತ್ಪಾದನಾ ವೆಚ್ಚ ಹೆಚ್ಚಾಗಿದ್ದು, ಅದನ್ನು ಸರಿದೂಗಿಸಲು ಗ್ರಾಹಕರ ಮೇಲೆ ಹೊರೆಹಾಕುವ ಅನಿವಾರ್ಯ ಸೃಷ್ಟಿಯಾಗಿದೆ’ ಎಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಸಮಜಾಯಿಷಿ ನೀಡಿದೆ.
ಕಲ್ಲಿದ್ದಲು ದರ ಏರಿಕೆಗೆ ಕಲ್ಲಿದ್ದಲು ಕೊರತೆಯೇ ಕಾರಣ. ಕಲ್ಲಿದ್ದಲು ಕೊರತೆ ಕಾರಣಕ್ಕೆ ಕಲ್ಲಿದ್ದಲು ಬೆಲೆ ಏರಿಕೆಯಾಗುವ ಸಂಭವವನ್ನು ಅರಿತು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾಗಿರುವು ಸರಕಾರ ಮತ್ತು ಸಂಬಂಧಿಸಿದ ಇಲಾಖೆಯಲ್ಲವೇ? ಸರಕಾರ ತನ್ನ ಹೊಣೆಗಾರಿಕೆ ಯನ್ನು ಸಮರ್ಪಕವಾಗಿ ನಿಭಾಯಿಸದೇ ದರ ಏರಿಕೆಯ ಭಾರವನ್ನು ಜನರ ಮೇಲೆ ಹೇರಿದರೆ ಹೇಗೆ? ವಿದ್ಯುತ್ ದರ ಏರಿಕೆಗೆ ವಿದ್ಯುತ್ ಸೋರಿಕೆಯಿಂದ ಆಗುತ್ತಿರುವ ನಷ್ಟವೂ ಪ್ರಮುಖ ಕಾರಣ ಎನ್ನಲಾಗಿದೆ. ಆದರೆ ಸೋರಿಕೆ ತಡೆಗಟ್ಟಲು ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ? ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಿದೆ.
ದರ ಏರಿಕೆಯನ್ನು ಸಮರ್ಥನೆ ಮಾಡಿಕೊಳ್ಳುವ ಬದಲು ವೆಚ್ಚ-ಸೋರಿಕೆ ಕಡಿಮೆ ಮಾಡುವ ಪರ್ಯಾಯ ಮಾರ್ಗಗಳನ್ನು ಶೋಽಸುವತ್ತ ಮತ್ತು ಜನರಿಗೆ ಕಡಿಮೆ ದರದಲ್ಲಿ ವಿದ್ಯುತ್ ಒದಗಿಸುವತ್ತ ಸರಕಾರ ಗಂಭೀರವಾಗಿ ಯೋಚಿಸಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರ ಇದ್ದರೆ ಎಲ್ಲವೂ ಅನುಕೂಲ ಎಂದು ಆಡಳಿತ ಪಕ್ಷದ ಮುಖಂಡರು ಚುನಾವಣೆ ವೇಳೆ ಪದೇ ಪದೆ ಹೇಳಿದ್ದರು. ಆದರೆ ಇದೀಗ ಕೇಂದ್ರ ಸರಕಾರ ಮೊಸರಿನ ಮೇಲೂ ಜಿಎಸ್‌ಟಿ ವಿಽಸುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗುತ್ತಿದೆ.