ಬ್ರಿಟೀಷರನ್ನು ಆಳುವ ದಿನ ಬರಲಿ
ಅತೀವ ರಾಜಕೀಯ ಬಿಕ್ಕಟ್ಟು ಹಾಗೂ ಸಚಿವರ ಸರಣಿ ರಾಜಿನಾಮೆ ಬೆನ್ನ ಪ್ರಧಾನಿ ಹುದ್ದೆಗೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ಕೊನೆಗೂ ರಾಜಿನಾಮೆ ನೀಡಿದ್ದಾರೆ. ಅದರ ಬೆನ್ನಲ್ಲೇ ಜಗತ್ತಿನ ಪ್ರಬಲ ರಾಷ್ಟ್ರವೊಂದರ ಮುಂದಿನ ಪ್ರಧಾನಿ ಹುದ್ದೆ ರೇಸ್‌ನಲ್ಲಿ ಭಾರತೀಯಮೂಲದ ರಿಷಿ ಸುನಕ್ ಹೆಸರು ಮುಂಚೂಣಿಯಲ್ಲಿರುವುದು ಅತ್ಯಂತ ಹೆಮ್ಮೆಯ ಸಂಗತಿ.
ಅದರಲ್ಲೂ ಸುನಕ್ ಕರ್ನಾಟಕದ ಅಳಿಯ ಎಂಬುದು ಇನ್ನಷ್ಟು ಕೋಡು ಮೂಡಿಸುವ ವಿಚಾರ. ಅಕ್ಟೋಬರ್‌ನಲ್ಲಿ ನಿಗದಿಯಾಗಿರುವ ಕನ್ಸರ್ವೇಟಿವ್ ಪಕ್ಷದ ಸಮಾವೇಶದ ವೇಳೆಗೆ ಹೊಸ ನಾಯಕನನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ಪೂರ್ಣಗೊಳ್ಳುವವರೆಗೆ ೫೮ ವರ್ಷದ ಜಾನ್ಸನ್ ಉಸ್ತುವಾರಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಜಾನ್ಸನ್ ರಾಜಿನಾಮೆ ಬೆನ್ನ ಹಲವು ಪ್ರಮುಖ ಸಂಭಾವ್ಯ ಉತ್ತರಾಧಿಕಾರಿಗಳನ್ನು ಸೂಚಿಸಲಾಗಿದೆ ಯಾದರೂ, ಯಾವುದೇ ಸ್ಪಷ್ಟವಾದ ಹೆಸರುಗಳು ಅಂತಿಮವಾಗಿಲ್ಲ.
ಬ್ರಿಟನ್‌ನ ಮೊದಲ ಹಿಂದೂ ವೈಸ್ ಚಾನ್ಸಲರ್ ಆಗಿದ್ದ ರಿಷಿ ಸುನಕ್ ಪ್ರಧಾನಿ ಹುದ್ದೆಗೆ ಎಲ್ಲ ರೀತಿಯಿಂದಲೂ ಅರ್ಹರು. ಖಾಸಗಿ ಸಂಪತ್ತು ಮತ್ತು ಕುಟುಂಬದ ತೆರಿಗೆ ವ್ಯವಸ್ಥೆ ವಿವಾದ ವಿಚಾರವಾಗಿ ಒಂದಷ್ಟು ಸುದ್ದಿಗೆ ಗ್ರಾಸವಾಗಿದ್ದರಾದರೂ ಸಾಮಾಜಿಕ ಮಾಧ್ಯಮ ದಲ್ಲಿ ಉನ್ನತ ಪ್ರೊ-ಲ್ ಹೊಂದಿದ್ದಾರೆ. ಹೀಗಾಗಿ ಒಂದು ಕಾಲದಲ್ಲಿ ಭಾರತವನ್ನು ಆಳಿದ್ದ ಬ್ರಿಟಿಷ್ ಸಾಮ್ರಾಜ್ಯವನ್ನು ಭಾರತೀಯರೊಬ್ಬರು ಆಳುವ ದಿನಗಳು ಬಂದಿವೆಯೇ ಎಂಬುದು ಕುತೂಹಲದ ಸಂಗತಿ.
೧೪೫೩ರಲ್ಲಿ ಆಟೋಮನ್ ಟರ್ಕಿಸ್ತಾನದವರು ಕಾನ್‌ಸ್ಟಾಂಟಿನೋಪಲ್ ಅನ್ನು ವಶಪಡಿಸಿಕೊಳ್ಳುವ ಮೂಲಕ ಐರೋಪ್ಯ ದೇಶಗಳು ಮತ್ತು ಏಷ್ಯಾದ ದೇಶಗಳ ನಡುವಿನ ವ್ಯಾಪಾರಕ್ಕೆ ದೊಡ್ಡ ಪೆಟ್ಟು ಬಿತ್ತು. ಹೀಗಾಗಿ ಭೂ ಮಾರ್ಗದ ಅನ್ವೇಷಣೆಗೆ ವಾಸ್ಕೋಡಗಾಮ ಹೊರಟಿದ್ದು, ೧೪೯೮ರಲ್ಲಿ ಕೇರಳದ ಕಲ್ಲಿಕೋಟೆ ತಲುಪಿದ್ದು ಜಗತ್ತಿನಲ್ಲಿ ವಸಾಹತುಶಾಹಿಯ ಹೊಸ ಯುಗ ಆರಂಭವಾಗಿದ್ದು ಇತಿಹಾಸ.ನಂತರ ಭಾರತ ಸೇರಿದಂತೆ ಹಲವಾರು ರಾಷ್ಟಗಳನ್ನು ಬ್ರಿಟನ್ ವಸಾಹತುಗಳನ್ನಾಗಿ ಶತಮಾನಗಳ ಕಾಲ ಆಳ್ವಿಕೆ ಮಾಡಿತು.
ಭಾರತವನ್ನು ೨೦೦ ವರ್ಷಗಳ ಕಾಲ ಆಳಿದ ಬ್ರಿಟನ್ ಅನ್ನು ಇದೀಗ ಭಾರತ ಆಳುವ ದಿನಗಳು ಬಂದಿದೆಯೇ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಆರಂಭವಾಗಿದೆ. ಭಾರತೀಯರೊಬ್ಬರು ಬ್ರಿಟನ್ ಪ್ರಧಾನಿಯಾಗಿ ಭಾರತದ ಮಾಲ್ಯ, ಸಾಮರ್ಥ್ಯವನ್ನು ಜಗತ್ತಿಗೆ ತಿಳಿಸುವಂತಾಗಲಿ.