ತಪ್ಪಿಸಬೇಕಿದೆ ಮತ್ತೊಂದು ಅಲೆ
ಕಳದ ಒಂದು ವರ್ಷದದಿಂದ ನಿಧಾನವಾಗಿ ಜನರ ಮನಸ್ಸಿನಿಂದ ದೂರವಾಗಿದ್ದ ಕರೋನಾ ಸೋಂಕು ಮತ್ತೆ ಸ್ಫೋಟಗೊಳ್ಳು ತ್ತಿದೆ. ದೇಶಾದ್ಯಂತ ಪ್ರತಿದಿನ 15 ಸಾವಿರಕ್ಕೂ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು ದಾಖಲಾಗುತ್ತಿರುವುದು ಆತಂಕಕಾರಿ.
ದೇಶಾದ್ಯಂತ ಶೇ.100ರಷ್ಟು ಎರಡನೇ ಡೋಸ್ ಲಸಿಕಾಕರಣವಾಗಿದೆ. ಆದರೆ ಬೂಸ್ಟರ್ ಡೋಸ್ ಪಡೆಯಲು ಜನರು ಆಸಕ್ತಿ ವಹಿಸದಿರುವುದಕ್ಕೇ ಮತ್ತೆ ಕೋವಿಡ್ ಸೋಂಕು ಹೆಚ್ಚಾಗಲು ಕಾರಣ ಎನ್ನಲಾಗಿದೆ. ರಾಜ್ಯದಲ್ಲಿ ಕೋವಿಡ್ ಮೂರನೇ ಡೋಸ್ ಲಸಿಕೆಯನ್ನು 17% ರಷ್ಟು ಮಂದಿ ಮಾತ್ರ ಪಡೆದಿzರೆ. ಸರಕಾರ ಉಚಿತವಾಗಿ ಲಸಿಕೆ ನೀಡುತ್ತಿದ್ದರೂ ಜನರು ಮುಂದೆ ಬಾರದಿ ರುವುದು ಬೇಸರದ ಸಂಗತಿ.
ಬಹುತೇಕರಲ್ಲಿ ಎರಡು ಡೋಸ್ ಪಡೆದಿದ್ದೇವೆ ಸಾಕು ಎಂಬ ಮನೋಭಾವನೆ ಇದೆ. ಎರಡನೇ ಡೋಸ್ ಲಸಿಕೆ ಪಡೆದವರಲ್ಲಿ 6-7 ತಿಂಗಳ ನಂತರ ರೋಗ ನಿರೋಧಕ ಶಕ್ತಿ ಕ್ಷೀಣಿಸುತ್ತದೆ. ಹಾಗಾಗಿ ಮೂರನೇ ಡೋಸ್ ಅಗತ್ಯವಾಗಿದೆ. ಮೂರನೇ ಡೋಸ್ ಪಡೆದರೆ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತದೆ. ಆಸ್ಪತ್ರೆಗೆ ದಾಖಲಾದರೂ ಸಾವು ಸಂಭವಿಸುವ ಸ್ಥಿತಿ ಸೃಷ್ಟಿಯಾಗುವುದಿಲ್ಲ.
ಹಾಗಾಗಿ ಮೂರನೇ ಡೋಸ್ ಪಡೆಯಲು ಜನರು ಆಸಕ್ತಿ ತೋರಬೇಕಿದೆ. ಇನ್ನು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ಜನರು ಗುಂಪು ಗುಂಪು ಸೇರುವ ಸಾಧ್ಯತೆ ಇದೆ. ಇದರಿಂದ ಮತ್ತಷ್ಟು ಕೋವಿಡ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಜನರು ಸ್ವಾತಂತ್ರ್ಯೋತ್ಸವ ಆಚರಣೆಗೆ ಮುಂದಾ ಗಬೇಕು.
ಅಲ್ಲದೇ ಪ್ರತಿಯೊಬ್ಬರೂ ಮಾಸ್ಕ್ ಹಾಕಿಕೊಳ್ಳುವುದು ಸೇರಿದಂತೆ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಅಲ್ಲದೆ, ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳನ್ನು ದಾಖಲಿಸಿಕೊಳ್ಳುತ್ತಿಲ್ಲ ಎಂಬ ದೂರುಗಳು ಹೆಚ್ಚಾಗಿವೆ. ಆರೋಗ್ಯಾಧಿಕಾರಿಗಳು ಖಾಸಗಿ ಆಸ್ಪತ್ರೆಗಳಿ ಈ ಕುರಿತು ಸೂಚನೆ ನೀಡಿ, ಯಾವುದೇ ರೋಗಿಗಳನ್ನು ವಾಪಾಸ್ ಕಳಿಸುವಂತಿಲ್ಲ ಎಂದು ಸೂಚಿಸಬೇಕಿದೆ.ಈಗಾಗಲೇ ಕರೋನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡವರು ಸಾರ್ವಜನಿಕ ಸ್ಥಳದಲ್ಲಿ ಸುತ್ತಾಡದೇ ಸ್ವಯಂಪ್ರೇರಿ ತವಾಗಿ ಹೋಂ ಕ್ವಾರಂಟೈನ್‌ಗೆ ಒಳಗಾಗುವ ಮೂಲಕ ತಾವೂ ಆರೋಗ್ಯವಾಗಿದ್ದು, ಸಮಾಜನವನ್ನೂ ಆರೋಗ್ಯವಾಗಿಡಲು ಪ್ರಯತ್ನಿಸಬೇಕು. ಆ ಮೂಲಕ ಕೋವಿಡ್ ಮತ್ತೊಂದು ಅಲೆಯ ದಾಳಿಯಿಂದ ತಪ್ಪಿಸಬೇಕಿದೆ.
