ಖಾಲಿ ಹುದ್ದೆಗಳು ಭರ್ತಿಯಾಗಲಿ
ಕೇಂದ್ರ ಸರಕಾರಗಳ ವಿವಿಧ ಇಲಾಖೆಗಳಲ್ಲಿ ಸುಮಾರು ೯.೭೯ ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ಸರಕಾರ ಬುಧವಾರಲೋಕಸಭೆಗೆ ಮಾಹಿತಿ ನೀಡಿದೆ.
ಭಾರತೀಯ ಆಡಳಿತ ಸೇವೆಯಲ್ಲಿಯೇ (ಐಎಎಸ್) ೧,೪೭೨ ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿದೆ. ಮುಂದಿನ ಒಂದು ವರ್ಷ ದಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಹುzಗಳು ಖಾಲಿ ಇರುವುದರಿಂದ ಸರಕಾರಿ ಕೆಲಸ ಸರಿಯಾದ ಸಮಯಕ್ಕೆ ಆಗುವುದಿಲ್ಲ. ಸಾರ್ವಜನಿಕ ಕೆಲಸ ಮತ್ತು ಅಭಿವೃದ್ಧಿಗೂ ಹೊಡೆತ ಬೀಳುತ್ತದೆ. ಒಟ್ಟಾರೆ ಇದು ಆಡಳಿತದ ಮೇಲೆ ಒತ್ತಡ ಬೀರುತ್ತದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹುದ್ದೆಗಳು ಖಾಲಿ ಇದ್ದರೂ ಗುತ್ತಿಗೆಯ ಒಪ್ಪಂದದ ಮೂಲಕ ಅನೇಕ ಹುದ್ದೆಗಳಿಗೆ ನೇಮಕ ಮಾಡುವ ಪ್ರಕ್ರಿಯೆ ಮಾತ್ರ ನಿಂತಿಲ್ಲ.
ದೇಶಾದ್ಯಂತ ಕೋಟ್ಯಂತರ ಅಭ್ಯರ್ಥಿಗಳು ಸರಕಾರಿ ಸೇವೆಯ ಕನಸನ್ನು ಈಡೇರಿಸಿ ಕೊಳ್ಳಲು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ. ಗುತ್ತಿಗೆ ಆಧಾರದ ಒಪ್ಪಂದದ ಮೂಲಕ ಹುದ್ದೆಗಳಿಗೆ ತಾತ್ಕಾಲಿಕವಾಗಿ ಭರ್ತಿ ಮಾಡಿದರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುವ ಅಭ್ಯರ್ಥಿಗಳಿಗೆ ಅವಕಾಶ ಸಿಗುವುದಿಲ್ಲ. ಅಲ್ಲದೆ, ಉದ್ಯೋಗ ಆಕಾಂಕ್ಷಿಗಳ ವಯೋಮಿತಿ ಸಹ ಮೀರುತ್ತದೆ. ಅನೇಕ ಪ್ರತಿಭಾವಂತ ಅಭ್ಯರ್ಥಿಗಳು ಉನ್ನತ ಹುದ್ದೆಗಳಿಗೆ ಹೋಗುವ ಸಾಮರ್ಥ್ಯವಿದ್ದರೂ ಬಾರ್ ರೆಸ್ಟೋರೆಂಟ, ಹೊಟೇಲ್ ಮುಂತಾದ ಕಡೆಗಳಲ್ಲಿ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗುತ್ತದೆ.
ಸರಕಾರದ ಈ ವಿಳಂಬ ಧೋರಣೆಯಿಂದ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತದೆ. ಆದ್ದರಿಂದ ಸರಕಾರಿ ಹುದ್ದೆಗಳಿಗೆ ನೇಮಕ ಪ್ರಕ್ರಿಯೆಯು ಕಾಲಕಾಲಕ್ಕೆ ಆಗಲೇಬೇಕು. ಪ್ರತಿವರ್ಷ ಎರಡು ಕೋಟಿ ಉದ್ಯೊಗ ಸೃಷ್ಟಿಸುವುದಾಗಿ ಬಿಜೆಪಿ ಸರಕಾರವು ಸರಕಾರಿ ಹುದ್ದೆಗಳನ್ನೇ ಭರ್ತಿ ಮಾಡಿದಿರುವುದು ಸರಿಯಲ್ಲ. ಉದ್ಯೊಗಗಳು ಆರ್ಥಿಕತೆಯ ಪ್ರಮುಖ ಭಾಗ. ಪ್ರತಿಯೊಬ್ಬರಿಗೂ ಪ್ರತಿ ಯೊಬ್ಬರಿಗೂ ಐಎಎಸ್, ಐಪಿಎಸ್ ಹುದ್ದೆಗಳು ಸಿಗಲು ಸಾಧ್ಯವಿಲ್ಲ. ಆದರೆ, ಅರ್ಹತೆಗೆ ತಕ್ಕ ಉದ್ಯೋಗವಾದರೂ ಸಿಗುವಂತಾಗ ಬೇಕು.
ಪ್ರತಿಯೊಬ್ಬರೂ ಸರಕಾರಿ ಹುದ್ದೆಗಳೇ ಸಿಗಲಿ ಎಂದು ಕಾಯುವ ಬದಲು ಕೌಶಲ್ಯಯುತ ಶಿಕ್ಷಣವನ್ನು ಪಡೆದು, ಸ್ವಯಂ ಉದ್ಯೊಗ ಕಂಡುಕೊಳ್ಳುವತ್ತಲೂ ಗಮನ ಹರಿಸಬೇಕು.