ಪಾವತಿ ನಿಲುಗಡೆ: ನಿಲ್ಲಲಿ ಶೋಷಣೆ
ಬಿಬಿಎಂಪಿ ವ್ಯಾಪ್ತಿಯ ೮೫ ರಸ್ತೆಗಳಲ್ಲಿ ಜಾರಿಗೊಳಿಸಿರುವ ‘ಪಾವತಿ ನಿಲುಗಡೆ’ ವ್ಯವಸ್ಥೆಯ ಕುರಿತು ಸಾರ್ವಜನಿಕರಿಂದ ಅನೇಕ ದೂರುಗಳು ಕೇಳಿಬರುತ್ತಿವೆ. ಇದರ ನಿರ್ವಹಣೆಯ ಗುತ್ತಿಗೆ ಪಡೆದಿರುವ ಖಾಸಗಿ ವ್ಯಕ್ತಿ ಗಳು ವಾಹನ ಸವಾರರಿಂದ ದುಬಾರಿ ದಂಡ ವಸೂಲಿ ಮಾಡುತ್ತಿದ್ದಾರೆ.
ಪ್ರಮುಖ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲುಗಡೆ ಮಾಡುವುದನ್ನು ತಪ್ಪಿಸಲು ಜಾರಿಗೊಳಿಸಿದ ಈ ಯೋಜನೆ ಯಿಂದ ವಾಹನ ನಿಲುಗಡೆಯಲ್ಲಿ ಕೊಂಚ ಶಿಸ್ತು ಬಂದಿದೆ. ಆದರೆ, ಅದೇ ಉದ್ದೇಶವನ್ನು ಅತಿಯಾದ ದಂಡ ಹೇರಿಕೆಗೆ ಬಳಸಿ ಕೊಂಡು ವಾಹನ ಸವಾರರನ್ನು ಶೋಷಣೆ ಮಾಡುತ್ತಿರುವ ಕ್ರಮದ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾ ಧಾನ ವ್ಯಕ್ತಪಡಿಸಿದ್ದಾರೆ. ಪಾವತಿ ನಿಲುಗಡೆ ವ್ಯವಸ್ಥೆ ಇರುವ ರಸ್ತೆಗಳಲ್ಲಿ ವಾಹನ ಸವಾರರು ತಾವು ವಾಹನವನ್ನು ನಿಲುಗಡೆ ಮಾಡುವ ಸಮಯಕ್ಕೆ ತಕ್ಕಂತೆ ಮುಂಗಡವಾಗಿ ಶುಲ್ಕ ಪಾವತಿಸಬೇಕಿದೆ.
ಆದರೆ, ಪಾವತಿಸಿದ ಅವಧಿಯನ್ನು ಮೀರಿ ವಾಹನವನ್ನು ಹೊರ ತೆಗೆಯುವುದು ಒಂದು ನಿಮಿಷ ವಿಳಂಬವಾದರೂ ದ್ವಿಚಕ್ರ ವಾಹನಗಳಿಗೆ ? ೨೫೦ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ? ೫೦೦ ದಂಡ ವಿಽಸಲಾಗುತ್ತಿದೆ. ವಾಹನ ನಿಲುಗಡೆಯ ಹೆಚ್ಚುವರಿ ಅವಧಿಗೆ ಸಮನಾದ ಶುಲ್ಕ ಪಡೆಯುವುದು ನ್ಯಾಯ. ಆದರೆ ಶುಲ್ಕದ ಐದರಿಂದ ಹತ್ತು ಪಟ್ಟು ಹಣವನ್ನು ದಂಡದ ಹೆಸರಿನಲ್ಲಿ ವಸೂಲಿ ಮಾಡುತ್ತಿರುವುದು ಸರಿಯಲ್ಲ.
ಪಾವತಿ ನಿಲುಗಡೆ ಕುರಿತು ಮಾಹಿತಿ ಇಲ್ಲದೆ ಅಂತಹ ಸ್ಥಳಗಳಲ್ಲಿ ನಿಲುಗಡೆ ಮಾಡಿದ ಅಥವಾ ಶುಲ್ಕ ಪಾವತಿಸಿದ ಅವಽಗಿಂತಹೆಚ್ಚು ಸಮಯ ನಿಲ್ಲಿಸಿದ ವಾಹನಗಳ ಚಕ್ರಗಳಿಗೆ ಕ್ಲ್ಯಾಂಪ್ ಹಾಕಿ ಜನರನ್ನು ಪೇಚಿಗೆ ಸಿಲುಕುವಂತೆ ಮಾಡಲಾಗುತ್ತಿದೆ. ದಂಡದ ಹೆಸರಿನಲ್ಲಿ ಸಾರ್ವಜನಿಕರ ಸುಲಿಗೆ ಮಾಡುವುದನ್ನು ತಡೆಯಲು ವಾಹನ ನಿಲುಗಡೆಗೂ ಮುನ್ನ ಶುಲ್ಕ ಸಂಗ್ರಹಿಸುವ ಬದಲಿಗೆ ವಾಹನವನ್ನು ಹೊರ ತೆಗೆಯುವ ಸಮಯದಲ್ಲಿ ನಿಲುಗಡೆಯ ಅವಽಯನ್ನು ಲೆಕ್ಕಹಾಕಿ ಶುಲ್ಕ ಪಡೆಯುವ ಕ್ರಮ ಜಾರಿಗೊಳಿಸಬೇಕು. ವಾಹನ ನಿಲುಗಡೆಯಲ್ಲಿ ಶಿಸ್ತು ತರುವುರ ಜತೆಗೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ಬಿಬಿಎಂಪಿ ಕ್ರಮ ಕೈಗೊಳ್ಳಬೇಕು.