ಕೆಎಂಎಫ್-ಮನ್‌ಮುಲ್ ವಿಲೀನ: ರಾಜ್ಯದ ಹೆಗ್ಗುರುತಿಗೆ ಧಕ್ಕೆ
ಮಂಡ್ಯಜಿಲ್ಲೆಯಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿರುವ ಜಿಲ್ಲಾ ಹಾಲು ಒಕ್ಕೂಟದ (ಮನ್ ಮುಲ್) ಆವರಣದಲ್ಲಿ ಮೆಗಾ ಡೇರಿ ಉದ್ಘಾಟಿಸಿ ಶುಕ್ರವಾರ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್‌ನ ಅಮುಲ ಜತೆಗೆ ಕರ್ನಾಟಕ ಹಾಲು ಮಹಾಮಂಡಳವನ್ನು (ಕೆಎಂಎಫ್ -ನಂದಿನಿ) ಒಂದುಗೂಡಿಸುವ ಶಾ ಹೇಳಿಕೆಗೆ ರಾಜ್ಯಾದ್ಯಂತ ತೀವ್ರ ಆಕ್ಷೇಪವ್ಯಕ್ತ ವಾಗಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೇಶಕ್ಕೇ ಮಾದರಿಯಾಗಿದ್ದ ಕರ್ನಾಟಕವನ್ನು ಉತ್ತರ ಭಾರತದ ಬ್ಯಾಂಕ್‌ಗಳ ಜತೆ ವಿಲೀನ ಮಾಡಿದ್ದರ ಪರಿಣಾಮ, ಅನೇಕ ಕನ್ನಡಿಗರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗದಿಂದ ವಂಚಿತರಾಗಿದ್ದಾರೆ. ಈ ತಾಜಾ ಉದಾಹರಣೆ ನಮ್ಮ ಮುಂದಿ ರುವಾಗಲೇ ಇದೀಗ ಕೆಎಂಎಫ್ ಜತೆ ಮನ್ ಮುಲ್ ಅನ್ನು ವಿಲೀನಗೊಳಿಸಿದರೆ ಏನಾಗ ಬಹುದು ಎಂಬುದನ್ನು ಯಾರಾದರೂ ಊಹಿಸಬಹುದು. ನಂದಿನಿ ಎಂಬುದು ಕೇವಲ ಬ್ರಾಂಡ್ ಅಲ್ಲ.
ಅದು ಕರ್ನಾಟಕದ ಹೆಗ್ಗುರುತು. ಹಾಲು ಉತ್ಪಾದಕರ ಹೆಮ್ಮೆಯ ಸಂಸ್ಥೆ. ಕರ್ನಾಟಕದ ರೈತರಿಗೆ ನಂದಿನಿ ಎನ್ನುವುದು ಮರಳುಗಾಡಿ ನಲ್ಲಿ ಓಯಸಿಸ್ ಇರುವಂತೆ.
ನಂದಿನಿ, ಕೆಎಂಎಫ್ ಕರ್ನಾಟಕದ ಲಕ್ಷಾಂತರ ರೈತರಿಗೆ ನೆರವಾಗಿದೆ. ರಾಜ್ಯದ ೨೫ ಲಕ್ಷ ರೈತ ಕುಟುಂಬಗಳು ಕೆಎಂಎಫ್ ಮೇಲೆ ಅವಲಂಬನೆ ಆಗಿವೆ. ಕೋಟ್ಯಂತರ ರೈತ ಮಹಿಳೆಯರಿಗೆ ಕೆಎಂಎಫ್ ಬದುಕು ನೀಡಿದೆ. ರಾಜ್ಯದ ಹಾಲು ಉತ್ಪಾದಕ ರೈತರು ಸುಮಾರು ? ೨೦ ಸಾವಿರ ಕೋಟಿವರೆಗೆ ಹಾಲಿನ ವಹಿವಾಟು ಮಾಡುತ್ತಾರೆ. ಈ ಕುಟುಂಬಗಳ ಮನೆಯಲ್ಲಿ ದೀಪ ಬೆಳಗುವುದೇ ಹಾಲಿನಿಂದ. ಮಕ್ಕಳ ಶಿಕ್ಷಣ, ಆಸ್ಪತ್ರೆ ಖರ್ಚಿನಿಂದ ಹಿಡಿದು, ಅಕ್ಕಿ, ಬೇಳೆ, ಬಟ್ಟೆ- ಬರೆ ಮುಂತಾದವುಗಳೆಲ್ಲ ಹಾಲಿನಿಂದಲೇ ಬರಬೇಕು. ಈಗ ಅದನ್ನು ಅಮುಲ್ ಜತೆ ವಿಲೀನ ಮಾಡಿದರೆ ಅದರ ಆಡಳಿತದ ಚುಕ್ಕಾಣಿ ಕನ್ನಡಿಗರ ಕೈಯಿಂದ ತಪ್ಪುವ ಸಾಧ್ಯತೆ ಬಹಳಷ್ಟಿದೆ.
ಅಮುಲ್ ಅನ್ನು ನಂದಿನಿಯೊಂದಿಗೆ ವಿಲೀನಗೊಳಿಸಿದರೆ ಬೆಳವಣಿಗೆಯಾಗುವುದಿಲ್ಲ. ಆದರೆ, ನಮ್ಮದೇ ಹೆಗ್ಗುರುತಿಗೆ ತೀವ್ರ ಧಕ್ಕೆ ಯಾಗಲಿದೆ. ಕರ್ನಾಟಕದ ರೈತರ ಪಾಲಿನ ಕಾಮಧೇನುವಂತಿರುವ ಕೆಎಂಎಫ್ ವಿಲೀನ ಪ್ರಕ್ರಿಯೆಯನ್ನು ರಾಜ್ಯ ಬಿಜೆಪಿ ನಾಯಕ ರು ವಿರೋಧಿಸಲು ಸಜ್ಜಾಗಬೇಕಿದೆ.
 - 