ಹೆದ್ದಾರಿಗಳ ಅಭಿವೃದ್ಧಿಗೆ ವೇಗ ಬರಲಿ
ರಾಜ್ಯದ ಆಡಳಿತಾತ್ಮಕ ರಾಜಧಾನಿ ಬೆಂಗಳೂರು ಮತ್ತು ಸಾಂಸ್ಕೃತಿಕ ರಾಜಧಾನಿ ಮೈಸೂರಿನ ನಡುವೆ ನಿರ್ಮಿಸಲಾಗುತ್ತಿರುವದಶಪಥ ಹೆದ್ದಾರಿ ಫೆಬ್ರವರಿ ವೇಳೆಗೆ ಲೋಕಾರ್ಪಣೆ ಆಗಲಿದೆ ಎಂಬ ಸುದ್ದಿ ಬಂದಿದೆ.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಹೆದ್ದಾರಿಯನ್ನು ಸಮೀಕ್ಷೆ ನಡೆಸಿರುವ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೇ ಈ ವಿಷಯ ಬಹಿರಂಗಪಡಿಸಿದ್ದಾರೆ. ಈ ಬಹು ನಿರೀಕ್ಷಿತ ದಶಪಥ ಹೆದ್ದಾರಿಯನ್ನು ಮುಂದಿನ ತಿಂಗಳು ರಾಷ್ಟ್ರಪತಿ ಅಥವಾ ಪ್ರಧಾನಿ ಯವರೇ ಉದ್ಘಾಟನೆ ಮಾಡಲಿದ್ದಾರೆ ಎಂಬುದು ಸಚಿವರು ನೀಡಿದ ಮಾಹಿತಿ. ಈ ಹೆದ್ದಾರಿ ಯಲ್ಲಿ ಕೇವಲ ೧ ಗಂಟೆ ೧೦ ನಿಮಿಷದಲ್ಲಿ ಎರಡು ನಗರಗಳ ನಡುವೆ ಸಂಚರಿಸಬಹುದು. ಇದರಿಂದ ಸಮಯ ಮತ್ತು ಮಾನವ ಶಕ್ತಿ ಉಳಿತಾಯವಾಗಲಿದೆ.
ಬೆಂಗಳೂರು ಸಂಚಾರ ದಟ್ಟಣೆ ನಿಭಾಯಿಸಲು ಸಬ ಅರ್ಬನ್ ರಸ್ತೆ ನಿರ್ಮಿಸಿ ನಗರ ಹೊರ ವಲಯದ ಹೊಸಕೋಟೆ, ರಾಮನಗರ, ದೊಡ್ಡಬಳ್ಳಾಪುರ, ದೇವನಹಳ್ಳಿ, ಆನೇಕಲ್‌ಗೆ ಸಂಪರ್ಕ ಕಲ್ಪಿಸುವುದು ಕೂಡ ಮುಂದಿನ ಹಂತದ ಅಭಿವೃದ್ಧಿ ಯೋಜನೆಯಲ್ಲಿ ಸೇರಿದೆ. ರಾಜ್ಯದ ಪಾಲಿಗೆ ಇದೊಂದು ಮಹತ್ವದ ಕೊಡುಗೆ ಎಂಬುದರಲ್ಲಿ ಸಂದೇಹವಿಲ್ಲ. ಈ ಹೆದ್ದಾರಿ ನಿರ್ಮಾಣಕ್ಕೆ ಒಟ್ಟು ೫೧೦೦ ಕೋಟಿ ವೆಚ್ಚ ವಾಗಿದೆ. ಬಹುತೇಕ ಕಾಮಗಾರಿ ಪೂರ್ಣಗೊಂಡು ಸಣ್ಣಪುಟ್ಟ ಕೆಲಸಗಳಷ್ಟೇ ಈಗ ನಡೆಯುತ್ತಿವೆ. ಎರಡು ನಗರಗಳ ನಡುವೆ ಎಕ್ಸ್‌ಪ್ರೆಸ್ ಹೈವೇ ನಿರ್ಮಾಣವಾಗಿ ರುವುದರಿಂದ ಸಂಚಾರ ದಟ್ಟಣೆ ಬಹುತೇಕ ಕಡಿಮೆಯಾಗಲಿದೆ.
ಕೆಲವು ತಾಂತ್ರಿಕ ಕಾರಣಗಳಿಂದ ನಿರೀಕ್ಷಿತ ಸಮಯದಲ್ಲಿ ಇದು ಪೂರ್ಣಗೊಳ್ಳಲಿಲ್ಲ. ಆದರೂ, ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇಲ್ಲಿ ಹೆಲಿಪ್ಯಾಡ್ ಕೂಡ ನಿರ್ಮಾಣವಾಗಿದೆ. ತುರ್ತು ಸಂದರ್ಭಗಳಲ್ಲಿ ಇದನ್ನು ಬಳಸ ಬಹುದು. ನೂತನ ಹೆದ್ದಾರಿಗೆ ಕಾವೇರಿ-ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ನಾಮಕರಣ ಮಾಡಬೇಕೆಂಬ ಬೇಡಿಕೆ ಬಂದಿದೆ. ಈ ಎರಡು ಹೆಸರುಗಳಲ್ಲಿ ಯಾವುದನ್ನು ಇರಿಸಿದರೂ ಸೂಕ್ತವೇ ಆಗುತ್ತದೆ. ನಿರ್ಮಾಣ ಹಂತದಲ್ಲಿ ಸುಗಮ ಸಂಚಾರಕ್ಕೆ ಕೆಲ ವೊಂದು ಅಡಚಣೆಗಳು ಉಂಟಾಗಿದ್ದರೂ ಯೋಜನೆ ಪೂರ್ಣಗೊಂಡ ನಂತರ ಆಗುವ ಅನುಕೂಲವನ್ನು ಪರಿಗಣಿಸಿದರೆ ತೊಂದರೆಗಳು ಸಹನೀಯ ಎನ್ನಬಹುದು.
 - 