ಉಚಿತಗಳ ಕೊಡುಗೆ, ಹೂವಿಡುವ ಕೆಲಸ ಜನರ ಕಿವಿಗೆ
ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಜನರ ಮನಗೆಲ್ಲಲು (ಜನರನ್ನು ಮರುಳು ಮಾಡಲು ಎನ್ನುವುದೇಸೂಕ್ತ) ನಾನಾ ವರಸೆಗಳನ್ನು ಶುರುವಿಟ್ಟುಕೊಂಡಿವೆ.
ಅಽಕಾರವಿಲ್ಲದೆ ಕಂಗೆಟ್ಟಿರುವ ಕಾಂಗ್ರೆಸ್ ತನ್ನ ಹಳೆಯ ಚಾಳಿಯಂತೆ ಈ ಬಾರಿಯೂ ಮತದಾರರಿಗೆ ಉಚಿತ ಕೊಡುಗೆಗಳ ಭರವಸೆಯ ಮಳೆ ಸುರಿಸಲು ಆರಂಭಿಸಿದೆ. ಮಹತ್ವಾಕಾಂಕ್ಷೆಯ ಪ್ರಜಾಧ್ವನಿ ಬಸ್ ಯಾತ್ರೆಯ ಆರಂಭದಲ್ಲೇ, ತಾನು ಅಽಕಾರಕ್ಕೆ ಬಂದಲ್ಲಿ ರಾಜ್ಯದ ಜನತೆಗೆ ೨೦೦ ಯುನಿಟ್ ವಿದ್ಯುತ್ ಉಚಿತ ನೀಡುವುದಾಗಿ ಘೋಷಿಸಿದೆ. ಆದರೆ ವಾಸ್ತವ ದಲ್ಲಿ ಕಾಂಗ್ರೆಸ್ ಅಽಕಾರಕ್ಕೆ ಬಂದರೂ ಈ ಭರವಸೆಯನ್ನು ಈಡೇರಿಸು ವುದು ಸಾಧ್ಯವೇ ಎಂಬ ಬಗ್ಗೆ ಈಗಲೇ ಪರಿಶೀಲನೆ ಮಾಡಿಕೊಳ್ಳುವುದು ಒಳಿತು.
ವಿದ್ಯುತ್, ಪೆಟ್ರೋಲ್, ಅಡುಗೆ ಅನಿಲ ಇಂತಹ ಅಗತ್ಯ ಸೌಲಭ್ಯಗಳ ಬೆಲೆಗಳು ಮಾರುಕಟ್ಟೆಯ ಏರಿಳಿತಕ್ಕೆ ಅನುಗುಣವಾಗಿ ನಿರ್ಧಾರವಾಗಲು ಶುರುವಾಗಿ ದಶಕಗಳೇ ಕಳೆದಿವೆ. ಹಾಗಿದ್ದರೂ ಆ ವ್ಯವಸ್ಥೆಯನ್ನು ಬಲವಂತದಿಂದ ತಡೆದು ನಿಲ್ಲಿಸಿ ‘ಉಚಿತ’ ಭರವಸೆಗಳನ್ನು ಈಡೇರಿಸಲು ಹೊರಟರೆ ಆರ್ಥಿಕ ವ್ಯವಸ್ಥೆ ಹಳಿ ತಪ್ಪುವುದು ಖಚಿತ ಎಂಬುದು ಕಾಂಗ್ರೆಸ್ ಮುಖಂಡರಿಗೂ ತಿಳಿಯದ ವಿಷಯವೇನಲ್ಲ. ಆದರೂ ಜನರ ಕಿವಿಗೆ ‘ಹೂ’ ಇಡಲು ಇಂತಹ ಭರವಸೆಗಳನ್ನು ಮುಂದಿಡಲು ಆರಂಭಿಸಿದೆ.
ತಾನು ಅಽಕಾರದಲ್ಲಿದ್ದಾಗ ರೈತರ ಕೃಷಿ ಪಂಪು ಸೆಟ್‌ಗಳಿಗೆ ವಿದ್ಯುತ್ ನೀಡದೇ ಸತಾಯಿಸಿದವರು ಈಗ ೨೦೦ ಯುನಿಟ್ ವರೆಗೆ ಉಚಿತ ವಿದ್ಯುತ್ ಕೊಡುವ ಡಂಗುರ ಸಾರುತ್ತಿದ್ದಾರೆ; ಇದು ಶತಮಾನದಲ್ಲೇ ಅತಿದೊಡ್ಡ ಸುಳ್ಳಾಗಬಹುದು ಎಂದು ರಾಜ್ಯದ ವಿದ್ಯುತ್ ಸಚಿವ ವಿ. ಸುನಿಲ್ ಕುಮಾರ್ ವ್ಯಂಗ್ಯವಾಡಿರುವುದರಲ್ಲಿ ಹುರುಳಿಲ್ಲದೇ ಇಲ್ಲ. ಕಾಂಗ್ರೆಸ್ ಪಾಲಿಗೆ ಅಸ್ತಿತ್ವದ ಭರವಸೆ ಸ್ವಲ್ಪ ವಾದರೂ ಉಳಿದಿರುವುದು ಕರ್ನಾಟಕದಲ್ಲಿ ಮಾತ್ರ. ಹೀಗಿರುವಾಗ ಅಸಾಧ್ಯವಾದ ಭರವಸೆಗಳನ್ನು ನೀಡಿ ಮಾತು ತಪ್ಪುವುದಕ್ಕಿಂತ ಅನುಷ್ಠಾನಯೋಗ್ಯ ಭರವಸೆಗಳನ್ನಷ್ಟೇ ನೀಡಿದರೆ ಜನರ ವಿಶ್ವಾಸ ಉಳಿಸಿಕೊಳ್ಳಬಹುದು.
ಇಲ್ಲವಾದರೆ ಮತ್ತೆ ವನವಾಸವೇ ಗತಿಯಾಗಬಹುದು. ಎಲ್ಲ ಪಕ್ಷಗಳೂ ಅಽಕಾರಕ್ಕೆ ಬರುವ ಮೊದಲು ಆಡುವ ರೀತಿಗೂ, ಅಽಕಾರ ಕೈಗೆಟುಕಿದ ಬಳಿಕ ಮಾಡುವ ಕೆಲಸಕ್ಕೂ (ತೋರುವ ಬದ್ಧತೆಗೂ) ಬಹಳ ವ್ಯತ್ಯಾಸಗಳಿವೆ. ಇದನ್ನು ಅರ್ಥ ಮಾಡಿಕೊಳ್ಳಲಾಗದಷ್ಟು ಮತದಾರರು ದಡ್ಡರಲ್ಲ. ಅಂತಹ ಸೂಕ್ಷ್ಮಗಳನ್ನು ಮನವರಿಕೆ ಮಾಡಿಕೊಂಡು ಮುಂದಡಿಯಿಟ್ಟರೆ ಕಾಂಗ್ರೆಸ್‌ಗೆ ಒಳಿತಾಗಬಹುದು.