ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿ
ಶಿಕ್ಷಣದಲ್ಲಿ ಸುಧಾರಣೆಗಳಾಗಬೇಕು ಎಂಬ ಬೇಡಿಕೆ ಮತ್ತು ಸುಧಾರಣೆಯ ಪ್ರಕ್ರಿಯೆ ನಿರಂತರ. ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ ಕೂಡ ಇದೇ ಆಶಯದ ಮೇಲೆ ಜಾರಿಗೆ ಬಂದಿದೆ. ವಿದ್ಯಾರ್ಥಿ ಗಳಲ್ಲಿ ಬರೇ ಅಂಕ ಆಧರಿತ ಬಾಯಿಪಾಠದ ಶಿಕ್ಷಣಕ್ಕಿಂತ ಜೀವನದಲ್ಲಿ ಯಾವುದಾದರೊಂದುಉತ್ತಮ ಹಾದಿ ಹಿಡಿದು ಉತ್ತಮ ನಾಗರಿಕರನ್ನು ಸೃಷ್ಟಿಸುವಂತಹ ಶಿಕ್ಷಣಕ್ಕೆ, ಅದಕ್ಕೆ ಪೂರಕ ವಾಗುವ ಕೌಶಲ್ಯಾಭಿವೃದ್ಧಿಗೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಒತ್ತು ನೀಡಲಾಗಿದೆ.
ಆದರೆ ಅದು ಕೇವಲ ನೀತಿ ಪುಸ್ತಕದಲ್ಲಿ ಇರದೆ, ಪ್ರಾಯೋಗಿಕ ನೆಲೆಯಲ್ಲಿ ಅನುಷ್ಠಾನಗೊಳ್ಳ ಬೇಕಿದೆ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಆಯೋಜಿಸಲಾದ ವಿಜ್ಞಾನ ಮೇಳ ೨೦೨೩ ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗುಣಮಟ್ಟದ ಶಿಕ್ಷಣ ನೀಡುವು ದಕ್ಕಾಗಿ ಯಾವ್ಯಾವ ಶಾಲೆಗಳಲ್ಲಿ ಏನೇನು ಕೆಲಸವಾಗಬೇಕು ಎಂಬುದರ ಪಟ್ಟಿಕೊಡಿ, ಶಾಲೆಗಳ ಸಮಗ್ರ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುತ್ತೇವೆ ಎಂಬ ಭರವಸೆ ನೀಡಿದ್ದಾರೆ. ಅದು ಕೇವಲ ಭರವಸೆಯಾಗಿ ಉಳಿಯದಿರಲಿ.
ಶಾಲೆಗಳಿಗೆ ಕೊಡುವ ಅನುದಾನ ಹೆಚ್ಚುತ್ತಿದ್ದರೂ ಅಭಿವೃದ್ಧಿ ಮಾತ್ರ ಸರಿಯಾಗಿ ಆಗುತ್ತಿಲ್ಲ. ಮಕ್ಕಳಿಗೆ ಬೇಕಾಗುವ ಎಲ್ಲ ಮೂಲ ಸೌಕರ್ಯ ಕೊಡಬೇಕು. ಮೊದಲು ಮಕ್ಕಳ ಭವಿಷ್ಯ, ಆ ನಂತರ ಗುತ್ತಿಗೆದಾರರ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು. ವಸತಿ ಶಾಲೆಗಳಲ್ಲಿ ಕೇವಲ ಕಟ್ಟಡ ಹೆಚ್ಚಾಗುತ್ತಿದೆ. ಕಟ್ಟಡ ಕಟ್ಟುವುದು ಬಿಟ್ಟು ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕು ಎಂಬ ಅವರ ಸಲಹೆ ಚಿಂತನಾರ್ಹ. ಒಂದು ಶಾಲೆಗೆ ೩೦ ಕೋಟಿ ರು. ವೆಚ್ಚವಾಗುತ್ತದೆ. ಆದರೆ, ಅಷ್ಟು ಖರ್ಚು ಮಾಡಿದರೂ ಮಕ್ಕಳಿಗೆ ಯಾವ ವ್ಯವಸ್ಥೆಯಾಗಬೇಕೋ ಅದು ಆಗುತ್ತಿಲ್ಲ.
ವಸತಿ ಶಿಕ್ಷಣ ಸಂಸ್ಥೆಗಳ ಸಂಘ ವಿeನ ಮೇಳ ಆಯೋಜಿಸಿರುವುದು ಸಂತೋಷದ ಸಂಗತಿ. ಈ ವಸತಿ ಶಾಲೆಗಳು ಪ್ರಾರಂಭವಾಗಿರುವುದೇ ಎಸ್.ಸಿ/ ಎಸ್.ಟಿ, ಹಿಂದುಳಿದ ವರ್ಗಗಳ ಮಕ್ಕಳಿಗೆ ಉನ್ನತ ಶಿಕ್ಷಣ, ಗುಣಾತ್ಮಕ ಶಿಕ್ಷಣ, ಎಲ್ಲಾ ವ್ಯವಸ್ಥೆಗಳಿರುವ ವಸತಿ ಶಾಲೆಗಳನ್ನು ನೀಡಬೇಕೆನ್ನುವಉದ್ದೇಶದಿಂದ. ಈ ಬಾರಿಯ ವಿಜ್ಞಾನ ಮೇಳದಲ್ಲಿ ಸಾವಿರಕ್ಕೂ ಹೆಚ್ಚು ಶಾಲೆಗಳು ಭಾಗವಹಿಸಿವೆ. ಈ ಶಾಲೆಗಳ ಮೌಲ್ಯ ಮಾಪನ ಮಾಡಿದಾಗಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಗುಣಮಟ್ಟವನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದಾರೆ.