: ಕೆಪಿಎಸ್‌ಸಿ ಅವಾಂತರದ ತನಿಖೆಯಾಗಲಿ
ಗೆಜೆಟೆಡ್ ಪ್ರೊಬೇಷನರಿ ಹುzಗಳ ನೇಮಕಕ್ಕೆ ನಡೆಸಲಾದ ಪೂರ್ವ ಭಾವಿ ಪರೀಕ್ಷೆಯ ಕೀ ಉತ್ತರಗಳನ್ನು ಬಿಡುಗಡೆ ಮಾಡಲಾಗಿದ್ದು, ಆಕ್ಷೇಪ ಸಲ್ಲಿಸಲು ಪ್ರತಿ ಪ್ರಶ್ನೆಗೆ ? ೫೦ ಶುಲ್ಕ ನಿಗದಿ ಮಾಡಲಾಗಿದೆ. ಅನೇಕ ಬಡ ವಿದ್ಯಾರ್ಥಿಗಳು ತಮ್ಮ ಕನಸಿನ ಹುzಯನ್ನು ಪಡೆಯುವುದಕ್ಕಾಗಿ ದೂರದ ಊರಿಗೆ ಹೋಗಿ ಕೋಚಿಂಗ್ ಸೆಂಟರ್‌ಗಳಿಗೆ ಸೇರಿ, ಬಾಡಿಗೆ ಕೋಣೆಗಳಲ್ಲಿ ಇದ್ದು ಅಧ್ಯಯನ ನಡೆಸಿರುತ್ತಾರೆ. ಪರೀಕ್ಷೆ ಬರೆಯುವುದಕ್ಕೆ ಬೇರೆ ಊರುಗಳಿಗೆ ಹೋಗುವುದಕ್ಕೂ ಹಣ ಖರ್ಚು ಮಾಡಿರುತ್ತಾರೆ. ಜತೆಗೆ ಅವರು ಮೊನ್ನೆ ಪರೀಕ್ಷೆಯಲ್ಲಿ ಬಂದಂಥ ಪ್ರಶ್ನೆಗಳಿಂದ ಆಘಾತಕ್ಕೆ ಒಳಗಾಗಿದ್ದಾರೆ. ಹೀಗಿರುವಾಗ, ಆಕ್ಷೇಪ ಸಲ್ಲಿಸಲು ಪ್ರತಿ ಪ್ರಶ್ನೆಗೆ ? ೫೦ ಶುಲ್ಕ ನಿಗದಿ ಮಾಡಿರುವುದು ಸರಿಯಲ್ಲ.
ಹಾಗಾಗಿ, ಆಯೋಗವು ಶುಲ್ಕವನ್ನು ಕಡಿಮೆ ಮಾಡುವುದು ಸೂಕ್ತ. ಅಲ್ಲದೆ ಆಡಳಿತ ಸೇವಾಽಕಾರಿಗಳ ಆಯ್ಕೆಗಾಗಿ ಕೆಪಿಎಸ್‌ಸಿಯಿಂದ ನಡೆದ ಪರೀಕ್ಷೆಯಲ್ಲಿ ಭಾಷಾಂತರದಲ್ಲಿನ ತಪ್ಪುಗಳ ಕಾರಣದಿಂದ ಕನ್ನಡ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಇದು ಬೇಜವಾಬ್ದಾರಿತನದ ಪರಮಾವಧಿ. ಆದರೆ ಪ್ರಶ್ನೆಗಳನ್ನು ಗೂಗಲ್ ಅಥವಾ ಕೃತಕ ಬುದ್ಧಿಮತ್ತೆ ನೆರವಿನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ ಎಂಬ ಟೀಕೆಗಳನ್ನು ತಳ್ಳಿಹಾಕಿರು ವುದು ಕೆಪಿಎಸ್‌ಸಿಯ ಮೊಂಡುತನ. ನಾಡಿನ ಪ್ರತಿಷ್ಠಿತ ಸಂಸ್ಥೆ ಯು ಭಾಷಾಂತರಕಾರರ ನೆರವು ಪಡೆಯದೆ ಬೇಕಾಬಿಟ್ಟಿ ನಡೆದುಕೊಂಡಿರುವುದು ಸರಕಾರಕ್ಕೂ ಕೆಟ್ಟ ಹೆಸರು ತರುತ್ತದೆ. ಆದ್ದರಿಂದ ಸರಕಾರವು ಕೂಡಲೇ ಸೂಕ್ತ ತನಿಖೆಗೆ ಆದೇಶಿಸಿ ಇಂಥ ಅನಾಹುತಕ್ಕೆ ಕಾರಣರಾದವರ ಮೇಲೆ ಕ್ರಮಕೈಗೊಳ್ಳಬೇಕು. ಮರುಪರೀಕ್ಷೆ ಮಾಡುವುದು ಮೊದಲ ಆದ್ಯತೆಯಾಗಬೇಕು. ಕಡೇಪಕ್ಷ, ಭಾಷಾಂತರದಲ್ಲಿನ ಎಡವಟ್ಟಿನಿಂದಾಗಿ ಗೊಂದಲಕಾರಿಯಾಗಿರುವ ಪ್ರಶ್ನೆಗಳನ್ನು ಸೂಕ್ತ ಭಾಷಾತಜ್ಞರಿಂದ ಪತ್ತೆಹಚ್ಚಿಸಿ, ಅವಕ್ಕೆ ಉತ್ತರಿಸಿದ ಎಲ್ಲ ಅಭ್ಯರ್ಥಿಗಳಿಗೂ ಸರಿ-ತಪ್ಪುಗಳನ್ನು ಎಣಿಸದೆ ಪೂರ್ಣಾಂಕ ನೀಡಬೇಕು.
ಒಟ್ಟಾರೆ ಇಡೀ ಪ್ರಕರಣದ ತನಿಖೆಗೆ ಸೂಕ್ತ ಸಮಿತಿ ರಚಿಸಿ ಕೂಡಲೇ ಪರ್ಯಾಯ ಕ್ರಮಕ್ಕೆ ಸರಕಾರ ಮುಂದಾಗಿ ಕನ್ನಡ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು.