ಗೃಹಲಕ್ಷ್ಮೀ ಯೋಜನೆ: ನಿಯಮಾವಳಿ ಮರುಪರಿಶೀಲಿಸಿ
ಗೃಹಲಕ್ಷ್ಮೀ ಯೋಜನೆಯಡಿ ಪ್ರಸ್ತುತ ರೂಪಿಸಿರುವ ನಿಯಮಗಳಲ್ಲಿ, ಫಲಾನುಭವಿಯ ಪತಿ ಅಥವಾ ಪುತ್ರ ತೆರಿಗೆ ಪಾವತಿದಾರರಾಗಿದ್ದರೆ ಮಹಿಳೆಗೆಯೋಜನೆಯ ಲಾಭ ಸಿಗುವುದಿಲ್ಲ. ಅಂತಹ ಕುಟುಂಬ ಆರ್ಥಿಕವಾಗಿ ಸದೃಢವಾಗಿರುತ್ತದೆ, ಹಾಗಾಗಿ ಅಂಥವರಿಗೆ ಪ್ರತಿ ತಿಂಗಳು ? ೨,೦೦೦ ಕೊಡುವ ಅಗತ್ಯವಿಲ್ಲ ಎಂಬುದು ಸರಕಾರದ ತರ್ಕ. ಈ ಯೋಜನೆಯ ಉದ್ದೇಶವೇ ಮಹಿಳೆಯೊಬ್ಬಳು ತನ್ನ ಕುಟುಂಬದ ಪುರುಷನ ಮೇಲೆ ಆರ್ಥಿಕವಾಗಿ ಅವಲಂಬನೆ ಆಗಬಾರದು ಎಂಬುದು.
ಆದರೆ ಕುಟುಂಬದ ಮಹಿಳೆಯೊಬ್ಬಳನ್ನು ಪತಿಯ ಅಥವಾ ಮಗನ ಆದಾಯದ ಜತೆ ತಳಕು ಹಾಕಿ, ಅವಳನ್ನು ಗೃಹಲಕ್ಷ್ಮೀ ಯೋಜನೆಯಿಂದ  ಹೊರಗಿಡುವ ಕ್ರಮ ಸರಿಯಲ್ಲ. ಗಂಡ ಅಥವಾ ಮಗ ಆದಾಯ ತೆರಿಗೆ ಪಾವತಿಸು ತ್ತಿದ್ದರೆ ಅಂತಹವರು ಸ್ವಂತಿಕೆಯನ್ನು ಬಿಟ್ಟು ಗಂಡ ಅಥವಾ ಮಗನ ದುಡಿಮೆಯಲ್ಲಿ ತಮಗೂ ಪಾಲು ಬೇಕೆಂದು ಅಂಗಲಾಚಬೇಕೇ? ಅಥವಾ ದುಡಿಯುವ ಗಂಡನನ್ನು ಅವಲಂಬಿಸಿ ಅವನ ಹಂಗಿನಲ್ಲಿ ಅಸಹಾಯಕರಾಗಿ  ಬಾಳಬೇಕೇ? ಸರಕಾರದ ಈ ನಿಯಮಾವಳಿಯ ಹಿಂದೆ ಕುಟುಂಬದ ಪುರುಷರು ತಾವು ದುಡಿವ ಮೊತ್ತದಲ್ಲಿ ಅರ್ಧಪಾಲನ್ನು ಗೃಹಿಣಿಗೆ ನೀಡುತ್ತಾರೆ ಎಂದು ಭಾವಿಸಿದಂತಿದೆ.
ಆದರೆ ಬಹುತೇಕ ಕುಟುಂಬಗಳಲ್ಲಿ ಮಹಿಳೆಯರು ಅಡುಗೆ ಮನೆಗೆ ಮಾತ್ರ ಸೀಮಿತವಾಗಿರುತ್ತಾರೆ ಎಂಬುದನ್ನು ಪರಿಗಣಿಸಿದಂತಿಲ್ಲ. ಅಲ್ಲದೆ, ಸರಕಾರದಲ್ಲಿ ಕೆಲಸ ಮಾಡುತ್ತಿರುವ ಬಹುತೇಕ ನಾಲ್ಕನೇ ದರ್ಜೆ ನೌಕರರು ಆದಾಯ ತೆರಿಗೆಯನ್ನು ಕಟ್ಟುತ್ತಾರೆ. ಏಕೆಂದರೆ ಅವರ ವಾರ್ಷಿಕ ಆದಾಯಕ್ಕೆ ಸ್ಪಷ್ಟವಾಗಿ ಲೆಕ್ಕ ಸಿಕ್ಕುತ್ತದೆ. ಆದರೆ ಇವರೆ ಲ್ಲರೂ ಆರ್ಥಿಕವಾಗಿ ಮುಂದುವರಿದಿರುವುದಿಲ್ಲ. ಅದೇ ವ್ಯಾಪಾರ- ವ್ಯವಹಾರ ಮಾಡುವ ಜನರ ವಾರ್ಷಿಕ ಆದಾಯದ ಲೆಕ್ಕ ನಿಖರವಾಗಿ ಸಿಗುವುದಿಲ್ಲ.
ಆದ್ದರಿಂದ ಅವರು ತೆರಿಗೆ ಕುಣಿಕೆಯಿಂದ ಬಚಾವಾಗುತ್ತಾರೆ. ಅಂದಮಾತ್ರಕ್ಕೆ ಇವರು ಆರ್ಥಿಕವಾಗಿ ಹಿಂದುಳಿದವರಲ್ಲ. ಹೀಗಾಗಿ, ಮಹಿಳೆಯ ಮಗ ಅಥವಾ ಗಂಡ ತೆರಿಗೆ ಪಾವತಿದಾರರಾದ ಮಾತ್ರಕ್ಕೆ ಆಕೆಯನ್ನು ಗೃಹಲಕ್ಷ್ಮೀ ಯೋಜನೆಯಿಂದ ಹೊರಗಿಡುವುದು ಆಕೆಗೆ ಅನ್ಯಾಯ ಮಾಡಿದಂತಾಗು ತ್ತದೆ. ಸ್ವತಃ ಆಕೆಯೇ ತೆರಿಗೆ ಪಾವತಿದಾರಳಾದರೆ, ಆಗ ಈ ಯೋಜನೆಯ ಲಾಭ ಆಕೆಗೆ ದೊರೆಯದಂತೆ ನಿಯಮ ರೂಪಿಸಬಹುದು. ಆದ್ದರಿಂದ ಸರಕಾರ ಗೃಹಲಕ್ಷ್ಮೀ ಯೋಜನೆಯ -ಲಾನುಭವಿಗಳ ನಿಯಮಾವಳಿ ಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕಿದೆ.