ಅಗ್ನಿ ಅವಘಡ; ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ
ಅಕ್ಟೋಬರ್ ೭ರಂದು ನಡೆದ ಅತ್ತಿಬೆಲೆ ಪಟಾಕಿ ದುರಂತದಲ್ಲಿ ಈವರೆಗೂ ೧೭ ಜನ ಮೃತಪಟ್ಟಿದ್ದಾರೆ. ಈ ಘಟನೆ ಮಾಸುವ ಮುನ್ನವೇ ಕೋರ ಮಂಗಲದ ತಾವರೆಕೆರೆ ಜಂಕ್ಷನ್‌ನ ಹೊಸೂರು ರಸ್ತೆಯಲ್ಲಿರುವ ಮಡ್‌ಪೈಪ್ ಕೆಫೆಯಲ್ಲಿ ಭಾರೀ ಅಗ್ನಿ ದುರಂತ ಸಂಭವಿಸಿದೆ. ನಗರದಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ಅಗ್ನಿ ಅವಘಡಗಳು ಜನರಲ್ಲಿ ಭೀತಿ ಹೆಚ್ಚಿದೆ. ಅತ್ತಿಬೆಲೆ ಪಟಾಕಿ ದುರಂತದಲ್ಲಿ ಕಂದಾಯ, ಪೊಲೀಸ್, ಅಗ್ನಿಶಾಮಕ ಮತ್ತು ಸಾರಿಗೆ ಇಲಾಖೆ ವೈಫಲ್ಯ ಕಂಡು ಬಂದಿದೆ.
ಪಟಾಕಿಗಳನ್ನು ಹೊರ ರಾಜ್ಯದಿಂದ ತರುವ ಸಂದರ್ಭದಲ್ಲಿ ಗಡಿಯಲ್ಲಿ ಸಾರಿಗೆ ಇಲಾಖೆ ಚೆಕ್‌ಪೋಸ್ಟ್‌ಗಳಲ್ಲಿ ಪರಿಶೀಲನೆ ನಡೆಸಬೇಕಾಗಿತ್ತು. ಅವರ ಬಳಿ ಸೋಟಕಗಳ ಸಾಗಾಣಿಕೆಗೆ ಸಂಬಂಧಿಸಿದಂತೆ ಎಲಇ ೭ ಪರವಾನಗಿ ಇರಲಿಲ್ಲ. ಆದರೆ, ರಾಜಾರೋಷವಾಗಿ ಸಾಗಣಿಕೆ ಮಾಡಿದ್ದಾರೆ. ಅಂಗಡಿಗೆ ಪರವಾನಗಿ ನೀಡುವಾಗ ಒಂದು ಸಾವಿರ ಕೆ.ಜಿ ಪಟಾಕಿ ಸಂಗ್ರಹಕ್ಕೆ ಪರವಾನಗಿ ನೀಡಲಾಗಿದೆ. ಆದರೆ, ೫೦ ಸಾವಿರ ಕೆಜಿ ಪಟಾಕಿ ಸಂಗ್ರಹಿಸಲಾಗಿತ್ತು ಎಂದು ತಿಳಿದು ಬಂದಿದೆ. ಈ ಬಗ್ಗೆ ಯಾರೊಬ್ಬರೂ ಪರಿಶೀಲನೆ ನಡೆಸಿಲ್ಲ.
ಹಾಗಾಗಿ ನಾಲ್ಕು ಇಲಾಖೆಗಳು ಪರವಾನಗಿ, ಪರಿಶೀಲನೆ ಮಾಡುವಲ್ಲಿ ವಿಫಲವಾಗಿವೆ. ಇದರಿಂದಾಗಿ ೧೭ ಮಂದಿ ಮೃತಪಟ್ಟಿzರೆ. ಪಟಾಕಿ ಪರವಾನಗಿ ಪಡೆದಿದ್ದ ರಾಮಸ್ವಾಮಿರೆಡ್ಡಿ ಅವರ ಪರವಾನಗಿ ಅಕ್ಟೋಬರ್ ೨೦೨೨ಕ್ಕೆ ಮುಗಿದಿದೆ. ಮತ್ತೆ ಪರವಾನಗಿ ೨೦೨೩ರ ಸೆಪ್ಟೆಂಬನರ್‌ಲ್ಲಿ ಪಡೆದಿದ್ದಾರೆ. ಸುಮಾರು ೧೧ ತಿಂಗಳ ಅವಧಿಯಲ್ಲಿ ಪರವಾನಗಿ ಇಲ್ಲದೇ ನಕಲಿ ಪರವಾನಗಿ ಬಳಸಿ ಕಾರ್ಯನಿರ್ವಹಿಸಿರುವುದು ಕಂಡು ಬಂದಿದೆ. ಈ ಎಲ್ಲ ಘಟನೆಗಳಿಗೆ ಸಂಬಂಽಸಿದಂತೆ ಈಗಾಗಲೇ ಸಿಐಡಿ ತನಿಖೆ ನಡೆಯುತ್ತಿದೆ. ವರದಿ ಕೈ ಸೇರಿದ ನಂತರ ಸೂಕ್ತ ಕ್ರಮ ಕೈಗೊಳ್ಳಬೇಕು. ಇನ್ನು ಕೋರಮಂಗಲದ ಕೆಫೆಯಲ್ಲಿ ಅಗ್ನಿ ನಂದಿಸುವ ಉಪಕರಣಗಳು ಇರಲಿಲ್ಲ.
ಕಟ್ಟಡದ ಹೊರಭಾಗದಲ್ಲಿ ಸಿಲಿಂಡರ್ ದಾಸ್ತಾನು ಮಾಡುವ ಬದಲಿಗೆ ಅಡುಗೆ ಕೋಣೆಯಲ್ಲೇ ಎಲ್ಲ ಸಿಲಿಂಡರ್ ಗಳನ್ನು ಇಡಲಾಗಿತ್ತು ಎಂದು ತಿಳಿದುಬಂದಿದೆ. ಈ ಕುರಿತೂ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕಿದೆ.