ನೀರಿನ ದಾಹ ತೀರಿಸಿ
ಫೆಬ್ರವರಿಯ ಆರಂಭದಲ್ಲೇ ಸೂರ್ಯ ನಿಗಿ ನಿಗಿ ಬೆಂಕಿ ಕಾರುತ್ತಿದ್ದಾನೆ. ಮನೆಯಿಂದ ಹೊರಗೆ ಕಾಲಿಟ್ಟರೂ ಕಷ್ಟ, ಮನೆಯಲ್ಲಿದ್ದರೂ ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಸುಡುವ ಬಿಸಿಲಿನ ಬೇಗೆಯಿಂದ ರಾಜ್ಯದ ಜನ ಈಗಾಗಲೇ ತತ್ತರಿಸಿಹೋಗಿzರೆ. ಈ ವರ್ಷ ಸರಿಯಾಗಿ ಮಳೆಯಾಗದೆ ಇದ್ದುದ್ದರಿಂದ ಜಲಾಶಯಗಳು, ಕೆರೆಗಳು ಬಹುಪಾಲು ಖಾಲಿಯಾಗಿವೆ.
ಅಂತರ್ಜಲ ಬತ್ತಿ ಹೋಗಿ ಬೋರ್‌ವೆಲ್‌ಗಳಲ್ಲಿ ನೀರು ಬರುತ್ತಿಲ್ಲ. ಹೀಗಾಗಿ ರಾಜ್ಯದ ಎಲ್ಲ ಕಡೆ ಕುಡಿಯುವ ನೀರಿಗಾಗಿ ಜನ ಪರದಾಡುವಂತಾಗಿದೆ. ನಗರ ಪ್ರದೇಶಗಳನ್ನು ಬಿಡಿ, ಗ್ರಾಮೀಣ ಪ್ರದೇಶಗಳಲ್ಲಿಯೂ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಸಬೇಕಾದ ಪರಿಸ್ಥಿತಿ ಬಂದಿದೆ. ಇನ್ನು ಜಾನುವಾರುಗಳ ಗತಿ ಹೇಳತೀರದಂತಾಗಿದೆ. ಇನ್ನೂ ಮಾರ್ಚ್ ತಿಂಗಳು ಮುಗಿದಿಲ್ಲ. ಈಗಾಗಲೇ ಪರಿಸ್ಥಿತಿ ಹದಗೆಟ್ಟಿದೆ. ಇನ್ನು ಏಪ್ರಿಲ್, ಮೇ ತಿಂಗಳಲ್ಲಿ ಪರಿಸ್ಥಿತಿ ಇನ್ನಷ್ಟು ಭೀಕರವಾಗಲಿದೆ. ಆದ್ದರಿಂದ ಆಡಳಿತ ಯಂತ್ರ ಈಗಲೇ ಚುರುಕುಗೊಳ್ಳಬೇಕಿದೆ. ಹಳ್ಳಿಗಳ ಮಟ್ಟದಲ್ಲಿ ಜಾನುವಾರುಗಳಿಗೆ ಮೇವು, ಪ್ರತಿ ತಾಲೂಕಿನಲ್ಲಿ ಕನಿಷ್ಠ ಎರಡು ಗೋಶಾಲೆಗಳ ನಿರ್ಮಾಣ ಮತ್ತು ನಿಗದಿತ ಅವಽಯಲ್ಲಿ ಕುಡಿಯುವ ನೀರು ಒದಗಿಸಬೇಕಿದೆ.
ಅದಕ್ಕಾಗಿ ಅಧಿಕಾರಿಗಳ ಪ್ರತ್ಯೇಕ ಸಮಿತಿಗಳನ್ನು ನೇಮಿಸಬೇಕು. ಈ ಕಾರ್ಯಕ್ರಮ ಹೇಗೆ ಜಾರಿಯಾಗುತ್ತಿದೆ ಎನ್ನುವುದರ ಮೇಲೆ ಉನ್ನತ ಅಧಿಕಾರಿಗಳುಕಣ್ಣಿಡಬೇಕು. ನಗರಗಳಲ್ಲಿನ ಜನರು ಬಾಟಲಿಗಳಿಂದಲೋ, ಟ್ಯಾಂಕರುಗಳಿಂದಲೋ ನೀರು ಪಡೆದು ದಾಹ ನೀಗಿಸಿಕೊಳ್ಳುತ್ತಾರೆ. ಆದರೆ ಅದೇ ಗ್ರಾಮೀಣ ಪ್ರದೇಶದ ಜನರಿಗೆ ಇಂಥ ಸೌಲಭ್ಯಗಳಿಲ್ಲ. ಅಂಥವರ ನೆರವಿಗೆ ಸರಕಾರ ಹೋಗಲೇಬೇಕಾಗುತ್ತದೆ. ಈಗಾಗಲೇ ಟ್ಯಾಂಕರುಗಳ ಮೂಲಕ ನೀರು ಪೂರೈಸ ಲಾಗುತ್ತಿದೆ ಎಂದು ಸರಕಾರ ಮಾಹಿತಿ ನೀಡಿರುವುದಾದರೂ ಇದು ಬೇಡಿಕೆಗೆ ಹೊಂದಾಣಿಕೆಯಾಗುತ್ತಿಲ್ಲ. ಬೋರ್‌ವೆಲ್‌ಗಳನ್ನು ಕೊರೆಸಿದ ಕಡೆಯ ನೀರು ಸಿಗುತ್ತಿಲ್ಲ. ಸಿಕ್ಕ ಕಡೆಯಿಂದ ಕೊಡುವ ನೀರು ಏನೇನೂ ಸಾಲದಂತಾಗಿದೆ.
ಅಲ್ಲದೆ, ನಗರಗಳಲ್ಲಿ ಟ್ಯಾಂಕರ್ ನೀರಿನ ದರವನ್ನು ಎರಡರಿಂದ ಮೂರು ಪಟ್ಟು ಹೆಚ್ಚಿಗೆ ಮಾರಲಾಗುತ್ತಿದೆ. ಇವರ ಮೇಲೆ ಯಾರ ನಿಯಂತ್ರಣವೂ ಇಲ್ಲದಂತಾ ಗಿದೆ. ಆದ್ದರಿಂದ ಅಧಿಕಾರಿಗಳು ಟ್ಯಾಂಕರ್ ನೀರು ಪೂರೈಕೆದಾರರ ಮೇಲೆ ನಿಯಂತ್ರಣ ಸಾಧಿಸಿ, ಸೂಕ್ತ ದರಕ್ಕೆ ಮಾರುವಂತೆ ನಿರ್ದೇಶಿಸಬೇಕಿದೆ.