ಅಗ್ನಿ ಅವಘಡ; ಎಚ್ಚರಿಕೆ ಅಗತ್ಯ
ಪ್ರತಿ ವರ್ಷ ಬೇಸಿಗೆ ಆರಂಭವಾಗುತ್ತಿದ್ದಂತೆ ಅನೇಕ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಬೆಂಕಿ ಅವಘಡಗಳು ತೀವ್ರವಾಗಿ ಏರಿಕೆಯಾಗುತ್ತವೆ. ಈ ವರ್ಷವೂ ಫೆಬ್ರವರಿಯಲ್ಲೇ ಅನೇಕ ಅಗ್ನಿ ಅವಘಡಗಳು ನಡೆದಿದ್ದು, ಅನೇಕರ ಜೀವ ಬಲಿಯಾಗಿವೆ.
ಅಗ್ನಿ ಅವಘಡಗಳಲ್ಲಿ ಸಂಭವಿಸಬಹುದಾದ ಸಾವು-ನೋವು, ಆಸ್ತಿಪಾಸ್ತಿಗಳ ನಷ್ಟದ ಕುರಿತು ಮತ್ತು ಅಗ್ನಿ ಮುನ್ನೆಚ್ಚರಿಕೆ ಮತ್ತು ನಿಯಂತ್ರಣದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅಗ್ನಿಶಾಮಕ ಇಲಾಖೆಯು ಆಗಾಗ ಅಣಕು ಪ್ರದರ್ಶನ, ಉಪನ್ಯಾಸ ಹಾಗೂ ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುತ್ತಲೇ ಇದ್ದರೂ ಪ್ರತಿ ವರ್ಷ ಅಗ್ನಿ ಅವಘಡಗಳು ಸಂಭವಿಸುತ್ತಿರುವುದು ಮಾತ್ರ ನಿಲ್ಲುತ್ತಿಲ್ಲ. ಬೆಂಕಿ ಅವಘಡಗಳಿಗೆ ಕಾರಣಗಳು ಅನೇಕವಿದ್ದರೂ ಜಾಗರೂಕತೆಯನ್ನು ಪಾಲಿಸಿದರೆ ಮಾತ್ರ ನಿಯಂತ್ರಣ ಸಾಧ್ಯವಿದೆ. ಅಗ್ನಿ ಅವಘಡ ಸಂಭವಿಸಿದಾಗ ಏನು ಮಾಡಬೇಕು, ಎಂಬ ಅರಿವು ಜನರಲ್ಲಿದ್ದರೆ ಸಣ್ಣ ಪುಟ್ಟ ಬೆಂಕಿಯನ್ನು ಸ್ವತಃ ನಿಯಂತ್ರಿಸಲು ಸಾಧ್ಯ.
ಒಣಗಿರುವ ಹುಲ್ಲು, ಎಲೆಗಳಿಂದ ಬೆಂಕಿ ಶೀಘ್ರ ಪಸರಿಸುವ ಸಾಧ್ಯತೆ ಇರುತ್ತದೆ. ಮನೆ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಂಡರೆ ಅಪಾಯ ತಪ್ಪುತ್ತದೆ. ಸಣ್ಣಪುಟ್ಟ ಅಂಗಡಿಗಳು ಕೂಡ ಫಾರ್ ಎಕ್ಸ್‌ಟ್ಟಿಂಗ್ವಿಶರ್ ಇಟ್ಟುಕೊಳ್ಳಬೇಕು. ಮನೆ ಗಳಲ್ಲಿ ಅಡುಗೆ ಅನಿಲದ ಕೊಳವೆಯನ್ನು ೨ ವರ್ಷಕ್ಕೊಮ್ಮೆ ಬದಲಾಯಿಸ ಬೇಕು. ರಾತ್ರಿ ರೆಗ್ಯುಲೇಟರ್ ಆ- ಮಾಡಬೇಕು. ಟ್ಯೂಬ್ ಮೇಲೆ ಬಿದ್ದಿರುವ ಆಹಾರ ಪದಾರ್ಥಗಳನ್ನು ಬಟ್ಟೆಯಿಂದ ಸ್ವಚ್ಛಗೊಳಿಸಬೇಕು.
ಎಕ್ಸಾ ಪೈಪ್‌ಗಳನ್ನು ಸ್ವಚ್ಛಗೊಳಿಸದೆ ಇರುವುದರಿಂದ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಬಾಟಲ, ಪೇಪರ್‌ಗಳ ಅಸಮರ್ಪಕ ನಿರ್ವಹಣೆಯಿಂದ ಬೆಂಕಿ ಅವಘಡ ಗಳು ಉಂಟಾಗುತ್ತದೆ. ಮಾಲ್‌ಗಳಲ್ಲಿ ಸುಲಭ ವಾಗಿ ಬೆಂಕಿ ಹೊತ್ತಿಕೊಳ್ಳುವ ಥರ್ಮಾಕೋಲ, ಪ್ಲೆವುಡ್ ಇತ್ಯಾದಿಗಳು ಇಂಟೀರಿಯರ್ ಡಿಸೈನ್‌ಗಳಿಗೆ ಬಳಕೆಯಾಗುತ್ತವೆ. ಇದರಿಂದಲೂ ಸಮಸ್ಯೆಯಾಗುತ್ತದೆ. ಮಾಲ್ ನಿರ್ಮಾಣ ಸಂದರ್ಭದಲ್ಲಿ ಮುಖ್ಯ ಅಗ್ನಿಶಾಮಕ ಅಧಿಕಾರಿಗಳು ಎನ್‌ಒಸಿ ಕೊಡುತ್ತಾರೆ. ನ್ಯಾಷನಲ್ ಬಿಲ್ಡಿಂಗ್ ಕೋಡ್ ಪ್ರಕಾರ ಕಟ್ಟಡಗಳು ಸೂಕ್ತ ಮುನ್ನೆಚ್ಚರಿಕೆ ಸಲಕರಣೆ ಗಳನ್ನು ಇರಿಸಿಕೊಳ್ಳುವುದು ಕಡ್ಡಾಯ.
ಬೆಂಕಿಯನ್ನು ನಂದಿಸುವ ಎಲ್ಲ ಪರಿಕರಗಳು ಇರಬೇಕು. ನಿರ್ಗಮನ ದಾರಿಯ ಸೂಚನೆ ಸಹಿತ ಪ್ರತಿಯೊಂದು ವ್ಯವಸ್ಥೆ ಇರಬೇಕಾಗುತ್ತದೆ. ಆದರೆ ಕೆಲವು ಮಾಲ್‌ಗಳು ಎನ್‌ಒಸಿ ಪಡೆದರೂ ಕ್ಲಿಯರೆ ತೆಗೆದುಕೊಳ್ಳುತ್ತಿಲ್ಲ. ಇದು ಸಮಸ್ಯೆಗೆ ಮೂಲ ಕಾರಣವಾಗಿದೆ.