ಸಂತಸದ ಸಂದರ್ಭದಲ್ಲಿ ಆಘಾತಕಾರಿ ಅಂಶ
ಕರೋನಾ ಸಂಕಷ್ಟದ ಸಂದರ್ಭದಲ್ಲಿ150ಕ್ಕೂ ಹೆಚ್ಚಿನ ರಾಷ್ಟ್ರಗಳಿಗೆ ಭಾರತವು ಆರೋಗ್ಯ ನೆರವು ನೀಡಿತ್ತು ಎಂಬುದು ಶ್ಲಾಘನಾರ್ಹ ಸಂಗತಿ.
ಇದೀಗ ನಾನಾ ದೇಶಗಳಿಗೆ ಲಸಿಕೆ ಪೂರೈಸುವಂತೆ ಬೇಡಿಕೆ ಹೆಚ್ಚುತ್ತಿದೆ.20ಕ್ಕೂ ಅಧಿಕ ರಾಷ್ಟ್ರಗಳಿಗೆ ಲಸಿಕೆ ವಿತರಿಸಿರುವ ಭಾರತಕ್ಕೀಗ ಕೆನಡಾ ದೇಶಕ್ಕೂ ಲಸಿಕೆ ಪೂರೈಸುವಂತೆ ಕೋರಲಾಗಿದೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಕರೆಗೆ ಪ್ರಧಾನಿ ಮೋದಿಯವರೂ ಒಪ್ಪಿಗೆ ಸೂಚಿಸಿದ್ದಾರೆ.
ಮೆಕ್ಸಿಕೋಗೆ1ದಶಲಕ್ಷ ಡೋಸ್ ಲಸಿಕೆಯನ್ನು ಭಾರತದಿಂದ ಕಳುಹಿಸಲಾಗಿದೆ. ಈ ಬೆಳವಣಿಗೆಯಿಂದ ಭಾರತದ ಸಾಧನೆ, ಇತರರಾಷ್ಟ್ರಗಳಿಗೆ ನೆರವಾಗುವ ಮನೋಭಾವ ಗುರುತಿಸಬಹುದು. ಕರೋನಾ ನಿಯಂತ್ರಣ, ನಿವಾರಣೆ ಹಾಗೂ ಲಸಿಕೆ ವಿಚಾರದಲ್ಲಿ ಮಹತ್ವದನ್ನು ಸಾಧಿಸಿದ ಭಾರತಕ್ಕೆ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಹಲವು ದೇಶಗಳಲ್ಲಿ ಕರೋನಾದಿಂದ ಮೃತಪಟ್ಟಿರುವ ಭಾರತೀಯರ ಸಂಖ್ಯೆ2ಸಾವಿರವನ್ನೂ ಮೀರಿದೆ.
ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್) ರಾಷ್ಟ್ರವೊಂದರಲ್ಲಿಯೇ375ಭಾರತೀಯರು ಮೃತಪಟ್ಟಿದ್ದಾರೆ. ಪಶ್ಚಿಮ ಏಷ್ಯ ದೇಶಗಳಲ್ಲಿಯೇ ಹೆಚ್ಚಿನ ಭಾರತೀಯರು ಮೃತಪಟ್ಟಿದ್ದು, ಕುವೈತ್ ನಲ್ಲಿ369, ಒಮಾನ್‌ನಲ್ಲಿ166, ಬಹ್ರೈನ್‌ನಲ್ಲಿ48ಭಾರತೀಯರು ಮೃತಪಟ್ಟಿದ್ದಾರೆ.
ಹಲವು ರಾಷ್ಟ್ರಗಳಿಗೆ ಆಸರೆಯಾಗಿ ನಿಂತಿರುವ ಭಾರತವು ಇದೀಗ ಕರೋನಾದಿಂದಾಗಿ ಎರಡು ಸಾವಿರಕ್ಕೂ ಅಽಕ ಭಾರತೀಯ ರನ್ನು ಕಳೆದುಕೊಂಡಿರುವುದು ಆಘಾತಕಾರಿ ಬೆಳವಣಿಗೆ.