ಸಿಎಂ ಸಿದ್ದು ರಾಜೀನಾಮೆ ಸದ್ಯಕ್ಕೆ ಸುಲಭ ಸಾಧ್ಯವಲ್ಲ
ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ತನಿಖಾ ಸಂಸ್ಥೆಗಾಗಿ ಕೋರ್ಟ್ ಆದೇಶ ನಿರೀಕ್ಷೆ
ಕಾನೂನು ಕದನ ಕುತೂಹಲ
ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲವೆಂದ ಸಿಎಂ
ಮುಡಾ ನಿವೇಶನ ಹಂಚಿಕೆ ಅಕ್ರಮದ ಆರೋಪ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಿಸುವುದು ಅಷ್ಟು ಸುಲಭ ವಲ್ಲ. ಸದ್ಯಕ್ಕೆಅದು ಸಾಧ್ಯವೂ ಇಲ್ಲ ಎಂಬ ಮಾಹಿತಿ ಕಾನೂನು ತಜ್ಞರ ವಲಯದಿಂದ ಲಭ್ಯವಾಗಿದೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ವಿರುದ್ಧ ವಿಚಾರಣೆಗೆ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಅನುಮತಿ ನೀಡಿದ ಮಾತ್ರಕ್ಕೆ ಸಿಎಂಸ್ಥಾನಕ್ಕೆ ರಾಜೀನಾಮೆ ನೀಡಬೇಕೆನ್ನುವ ನಿಯಮ ಎಲ್ಲಿಯೂ ಇಲ್ಲ. ಸದ್ಯಕ್ಕೆ ಆ ಪ್ರಶ್ನೆ ಉದ್ಭವಿಸುವುದೂ ಇಲ್ಲ ಎಂದು ಕಾನೂನು ತಜ್ಞರೇ ಹೇಳಿದ್ದಾರೆ. ಇದನ್ನಾಧರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ, ಸುದ್ದಿಗೋಷ್ಠಿ ನಡೆಸಿ, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಅಬ್ಬರಿಸಿದ್ದಾರೆ.
ಕೂಡ. ಆಡಳಿತರೂಢ ಕಾಂಗ್ರೆಸ್ ವಾದಿಸುವ ಪ್ರಕಾರ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಮುಖ್ಯಮಂತ್ರಿ ವಿರುದ್ಧ ವಿಚಾರಣೆಗೆ ರಾಜ್ಯಪಾಲರುಅನುಮತಿ ನೀಡಬೇಕಾದರೆ, ಆ ಬಗ್ಗೆ ಯಾವುದಾದರೂ ಸಂಸ್ಥೆ ತನಿಖೆ ನಡೆಸಿ ಆರೋಪಿ ಪಟ್ಟಿ ಸಲ್ಲಿಸಬೇಕು. ಆದರೆ ಇಲ್ಲಿ ಅಂಥ ಯಾವುದೇ ಪ್ರಸಂಗಎದುರಾಗಿಲ್ಲದಿರುವಾಗ ರಾಜ್ಯಪಾಲರು ಅನುಮತಿ ನೀಡಿರುವುದೇ ತಪ್ಪು. ಅವರು ಕಾನೂನು ಮೀರಿದ್ದಾರೆ ಎನ್ನುವುದಾಗಿದೆ. ಕಾಂಗ್ರೆಸ್‌ನ ಈ ಪ್ರಶ್ನೆಗಳಿಗೆ ಮೌನವಾಗಿಯೇ ಉತ್ತರ ನೀಡಿರುವ ರಾಜ್ಯಪಾಲರು, ಟಿ. ಜೆ.ಅಬ್ರಾಹಾಂ ಎಂಬುವರ ಖಾಸಗಿ ದೂರನ್ನಾಧರಿಸಿ ವಿಚಾರಣೆಗೆ ಅನುಮತಿ ನೀಡಿದ್ದಾರೆ.
ರಾಜ್ಯಪಾಲರ ಬಳಿ ಉತ್ತರವಿಲ್ಲ:ಆದರೆ ಇದೇರೀತಿ ವಿಚಾರಣೆಗೆ ಅನುಮತಿ ಕೇಳಿರುವ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ, ಮಾಜಿ ಮಂತ್ರಿಗಳಾದಜನಾರ್ದನ ರೆಡ್ಡಿ, ಶಶಿಕಲಾ ಜೊ ಹಾಗೂ ಮುರುಗೇಶ್ ನಿರಾಣೆ ಅವರ ವಿರುದ್ಧ ವಿಚಾರಣೆಗೆ ಏಕೆ ಅನುಮತಿ ನೀಡಿಲ್ಲ ಎನ್ನುವುದಕ್ಕೆ ರಾಜ್ಯಪಾಲರುಬಳಿ ಉತ್ತರ ಇಲ್ಲ. ಅದಕ್ಕೆ ಯಾವುದೂ ಬಿಜೆಪಿ ನಾಯಕರೂ ಉತ್ತರ ನೀಡುವ ಗೋಜಿಗೆ ಹೋಗಿಲ್ಲ. ಅಷ್ಟೇ ಏಕೆ, ಹಿಂದಿನ ಎಲ್ಲಾ ಆರೋಪಿಗಳ ವಿರುದ್ಧಕೇಸು ದಾಖಲಾಗಿ, ತನಿಖೆ ನಡೆದು ಆರೋಪಿ ಪಟ್ಟಿಗಳೂ ಸಲ್ಲಿಕೆಯಾಗಿತ್ತು. ಆದರೂ ರಾಜ್ಯಪಾಲರು ಏಕೆ ರಾಜ್ಯಪಾಲರು ಹೀಗೆ ಮಾಡಿದರು ಎನ್ನುವುದುಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.
ಇಂಥ ಅನೇಕ ಪ್ರಶ್ನೆಗಳ ಮಧ್ಯೆ, ರಾಜ್ಯ ಸರಕಾರ ಶನಿವಾರ ತುರ್ತು ಸಚಿವ ಸಂಪುಟ ಸಭೆ ನಡೆಸಿ ರಾಜ್ಯಪಾಲರ ನಡೆ ವಿರುದ್ಧ ಹೈಕೋರ್ಟ್ ನಲ್ಲಿ ಕಾನೂನು ಹೋರಾಟ ನಡೆಸಲು ತೀರ್ಮಾನಿಸಿದೆ. ಅಂದರೆ ಈ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ನಡುವೆ ಅಥವಾ ರಾಜ್ಯ ಸರಕಾರ ಮತ್ತು ರಾಜ ಭವನ ನಡುವೆ ನೇರ ಕಾನೂನು ಹೋರಾಟಕ್ಕೆ ಮಹೂರ್ಥ ನಿಗದಿಯಾದಂತಾಗಿದೆ. ಇದು ಮುಂದೆ ಯಾವೆ ತಿರುವುಗಳನ್ನು ತೆಗೆದುಕೊಳ್ಳುವುದೇ ಎನ್ನುವುದು ಕೂತೂಹಲಕಾರಿ ಯಾಗಿದೆ. ಆದರೆ ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿ ಸ್ಥಾನಕ್ಕೆರಾಜೀನಾಮೆ ಸಲ್ಲಿಸುವುವ ಯಾವುದೇ ಸನ್ನಿವೇಶ ಸದ್ಯಕ್ಕೆ ಇಲ್ಲ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಸೇರಿದಂತೆ ಕೆಲವು ಹಿರಿಯ ನ್ಯಾಯವಾದಿಗಳು ಹೇಳಿದ್ದಾರೆ.
ಹಾಗಾದರೆ ಮುಂದೆ ಏನಾಗುತ್ತೆ ?ರಾಜ್ಯಪಾಲರ ಅನುಮತಿಯೊಂದಿಗೆ ಮುಖ್ಯಮಂತ್ರಿ ವಿರುದ್ಧ ವಿಚಾರಣೆಗೆ ಎದುರಾಗಿದ್ದ ಅಡ್ಡಿ ನಿವಾರಣೆಯಾಗಿದೆ. ಹೀಗಾಗಿ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಾಗಬೇಕಾಗುತ್ತದೆ. ಆದರೆ ಇದಕ್ಕೆ ಕೋರ್ಟ್ ನಿರ್ದೇಶನ ನೀಡಬೇಕು. ಅಂದರೆ, ಸಿದ್ದರಾಯಯ್ಯ ವಿರುದ್ಧ ಆಗಾಗಲೇ ಮೂರು ದೂರುಗಳು ದಾಖಲಾಗಿವೆ. ದೂರುಗಳು ಎಷ್ಟೇ ಬಂದರೂ ಪೊಲೀಸರು ಒಂದೇ ಎಫ್ಐಆರ್ ಮತ್ತು ಒಂದೇ ತನಿಖೆಯನ್ನು ನಡೆಸಬೇಕಾಗುತ್ತದೆ. ಹೀಗಾಗಿ ತನಿಖೆಗೆ ಅನುಮತಿ ಸಿಕ್ಕಿರುವುದು ಇಲ್ಲಿ ಗಮನಾರ್ಹ ಎಂದು ಹಿರಿಯ ಕಾನೂನು ತಜ್ಞ ಬಿ.ವಿ.ಆಚಾರ್ಯ ಮಾಧ್ಯಮಗಳಿಗೆ ಹೇಳಿದ್ದಾರೆ.
ಅಂದರೆ, ಸಿದ್ದರಾಮಯ್ಯ ವಿರುದ್ಧ ಸಿಬಿಐ ಹಾಗೂ ಉನ್ನತ ಮಟ್ಟದ ತನಿಖೆ ನಡೆಸಲು ಆದೇಶಿಸಬೇಕೆಂದು ಜನಪ್ರತಿನಿಽಗಳ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಯಾವ ರೀತಿಯ ತನಿಖೆಗೆ ಸೂಚಿಸುತ್ತದೆ ಎನ್ನುವುದನ್ನು ನೋಡಬೇಕು. ಕಾನೂನು ತಜ್ಞರ ಪ್ರಕಾರ, ಅಽನ ನ್ಯಾಯಾಲಯಗಳು ಇಂಥ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಿರುವ ಉದಾಹರಣೆಗಳು ಇಲ್ಲ. ಹೀಗಾಗಿ ರಾಜ್ಯ ಸರಕಾರ ವ್ಯಾಪ್ತಿಯ ತನಿಖಾ ಸಂಸ್ಥೆಗೆ ವಹಿಸಬಹುದು ಎಂದು ಕಾನೂನು ಪಂಡಿತರು ವಿಶ್ಲೇಷಿಸುತ್ತಾರೆ.
**