   : ರಸ್ತೆ ನಿರ್ಮಾಣಕ್ಕೆ ಡಿಜೆ ಹಣ
ಶರಣಬಸವ ಹುಲಿಹೈದರ, ಕೊಪ್ಪಳ
ಫಲ ನೀಡದ ಹೋರಾಟ
ಕಿನ್ನಾಳ ಗ್ರಾಮದ ಹಿಂದೂ ಮಹಾಗಣಪತಿ ಗೆಳಯರ ಬಳಗ ನಿರ್ಧಾರ
ಕೊಪ್ಪಳ:ಜನರಿಂದ.. ಜನರಿಗಾಗಿ…ಜನರಿಗೋಸ್ಕರ..ಇರುವುದೇ ಪ್ರಜಾಪ್ರಭುತ್ವ ಎಂಬ ಘೋಷ ವಾಕ್ಯ ನಾವು ಕೇಳಿದ್ದೇವೆ. ಇದೀಗ ಅದೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸಲು ಜನಹಿತಕ್ಕಾಗಿ, ಜನರಿಂದಲೇ ರಸ್ತೆ ನಿರ್ಮಾಣ ಎಂದು ಬದಲಾಗಿದೆ.
ಹೌದು, ಕೊಪ್ಪಳ ತಾಲೂಕು ಕೇಂದ್ರದಿಂದ ಕಿನ್ನಾಳ ಗ್ರಾಪಂ ಕೇಂದ್ರ ಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಸುಮಾರು೧೧ ಕಿ.ಮೀ. ರಸ್ತೆ ಸಂಪೂರ್ಣ ಹಾಳಾಗಿದೆ. ಕಳೆದ ೧೦ ವರ್ಷದಿಂದ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಗ್ರಾಮಸ್ಥರುಮಾಡಿದ ಯಾವುದೇ ಹೋರಾಟ ಫಲ ನೀಡಿಲ್ಲ. ಇದರಿಂದ ಬೇಸತ್ತು, ಇದೀಗ ಗಣೇಶ ಪ್ರತಿಷ್ಠಾನ ಸಮೀತಿ ನೇತೃತ್ವದಲ್ಲಿ ಸಾರ್ವಜನಿಕರೇ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ.
ಕಿನ್ನಾಳ ಗ್ರಾಮದ ’ಹಿಂದೂ ಮಹಾಗಣಪತಿ ಕಾಮನಕಟ್ಟೆ ಗೆಳೆಯರ ಬಳಗ’ ಹೆಸರಿನ ಗಣೇಶ ಪ್ರತಿಷ್ಠಾನ ಸಮಿತಿ ನೇತೃತ್ವದಲ್ಲಿ ಜನರೇ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಗಣೇಶ ವಿಸರ್ಜನೆ ವೇಳೆ ನಡೆಯುವ ಮೆರವಣಿಯಲ್ಲಿಡಿಜೆ ಗೆ ಖರ್ಚು ಮಾಡುವ ಹಣವನ್ನೇ ರಸ್ತೆ ದುರಸ್ತಿಗೆ ಬಳಕೆ ಮಾಡಿಕೊಳ್ಳಲು ಗಣೇಶ ಪ್ರತಿಷ್ಠಾನ ಸಮಿತಿಯಯುವಕರು ನಿರ್ಧರಿಸಿದ್ದಾರೆ. ಈ ಮೂಲಕ ಸರಕಾರ ಮತ್ತು ಜನಪ್ರತಿನಿಧಿಗಳಿಗೆ ಮುಜುಗರ ಮಾಡುವ ಜೊತೆಗೆ, ಇತರೇ ಗಣೇಶ ಪ್ರತಿಷ್ಠಾನ ಸಮಿತಿಗೆ ಹೀಗೂ ಹಣ ಬಳಕೆ ಮಾಡಬಹುದು ಎಂಬ ಸಂದೇಶ ನೀಡಿದ್ದಾರೆ.
ಸಂಪೂರ್ಣ ಹಾಳು:ಗಣೇಶ ಪ್ರತಿಷ್ಠಾನ ಸಮಿತಿ ನಿರ್ಮಾಣಕ್ಕೆ ಮುಂದಾಗಿರುವ ಕೊಪ್ಪಳ ದಿಂದ ಕಿನ್ನಾಳಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುಂಡಿಗಳಿಲ್ಲ. ರಸ್ತೆಯುದ್ದಕ್ಕೂ ಸಮತಟ್ಟು ಜಾಗಕ್ಕಿಂದ ಹೆಚ್ಚು ತಗ್ಗು-ಗುಂಡಿ ಇವೆ. ಕೇವಲ ೧೧ ಕಿ.ಮೀ ರಸ್ತೆಯನ್ನು ಕಾರಿನಲ್ಲಿ ಕ್ರಮಿಸಲು ಕನಿಷ್ಠ ೧ ಗಂಟೆ ಸಮಯ ಬೇಕು. ರಸ್ತೆ ರಿಪೇರಿಮಾಡಲು ಹಾಗೂ ನೂತನ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಗ್ರಾಮಸ್ಥರು ಸಾಕಷ್ಟು ರೀತಿಯಲ್ಲಿ ಹೋರಾಟ ಮಾಡಿ ದರೂ ಪ್ರಯೋಜನ ಆಗಿಲ್ಲ. ಕನಿಷ್ಠ ಗುಂಡಿ ಮುಚ್ಚುವುದಕ್ಕೂ ಈ ವ್ಯವಸ್ಥೆಗೆ ಸಾಧ್ಯವಾಗಿಲ್ಲ.
ಕಳೆದ ೧೦ ವರ್ಷದಿಂದಲೂ ಈ ರಸ್ತೆ ಸ್ಥಿತಿ ಹೀಗೆಯೇ ಇದೆ. ಜೊತೆಗೆ ೧೦ ವರ್ಷದಿಂದ ಈ ರಸ್ತೆಯಲ್ಲಿ ಭಾರಿಬಾರದ ಮರಳು ತುಂಬಿದ ವಾಹನ ಓಡಾಡುತ್ತವೆ. ಇದರಿಂದ ರಸ್ತೆ ಮತ್ತಷ್ಟು ಹಾಳಾಗಿದ್ದು, ಪ್ರತಿ ದಿನವೂಒಂದಿಲ್ಲೊಂದು ರಸ್ತೆ ಅಪಘಾತ ಇಲ್ಲಿ ನಡೆಯುತ್ತವೆ ಇರುತ್ತವೆ ಎಂಬುದು ಗಮನಾರ್ಹ.
ಕಳೆದ ೨ ವರ್ಷದಲ್ಲಿ ೧೦ ಸಾವು!ಕೊಪ್ಪಳದಿಂದ ಕಿನ್ನಾಳ ವರೆಗಿನ ಒಟ್ಟು ೧೧ ಕಿ.ಮೀ ರಸ್ತೆ ವ್ಯಾಪ್ತಿಯಲ್ಲಿ ಕಳೆದ ೨ ವರ್ಷದಲ್ಲಿ ನಡೆದ ರಸ್ತೆ ಅಪಘಾತ ದಲ್ಲಿ ಸುಮಾರು ೧೦ ಜನ ಮೃತಪಟ್ಟಿದ್ದಾರೆ. ಇನ್ನು ಕೈ-ಕಾಲು ಮುರಿತ, ಸಣ್ಣ- ಪುಟ್ಟ ಗಾಯಗೊಂಡವರ ಸಂಖ್ಯೆ ದೊಡ್ಡದಿದೆ. ಕಳೆದ ೨ ವರ್ಷದಲ್ಲಿ ೧೦೦ಕ್ಕೂ ಹೆಚ್ಚು ರಸ್ತೆ ಅಪಘಾತ ಸಂಭವಿಸಿವೆ ಎಂದು ಸಾರ್ವಜನಿಕರು ದೂರಿ ದ್ದಾರೆ. ಒಟ್ಟು ೧೧ ಕಿ.ಮೀ ರಸ್ತೆ ಪೈಕಿ ೩ ಕಿ.ಮೀ ರಸ್ತೆ ಗಂಗಾವತಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿದ್ದು, ಉಳಿದ ೮ ಕಿ.ಮೀ ರಸ್ತೆ ಕೊಪ್ಪಳ ವಿಧಾನಸಭೆ ಕ್ಷೇತ್ರಕ್ಕೆ ಸಂಬಂಧಿಸಿದೆ.
*
ಬಾಲಗಂಗಾಧರ ತಿಲಕರು ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಪ್ರೇರೇಪಿಸಲು ಸಾರ್ವಜನಿಕ ಗಣೇಶೋತ್ಸವ ಆರಂಭಿಸಿದರು ಎಂದು ನಾವೆಲ್ಲ ಕೇಳಿದ್ದೇವೆ. ಅದರಂತೆಯೇ ನಾವು ಗಣೇಶೋತ್ಸವವನ್ನು ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ ಧೋರಣೆಯನ್ನು ಜನರಿಗೆ ತಿಳಿಸಲು, ರಸ್ತೆಯ ತಾತ್ಕಾಲಿಕ ರಿಪೇರಿ ಮಾಡುತ್ತಿದ್ದೇವೆ. ಈ ಮೂಲಕ ಕೈಲಾದಷ್ಟು ಸಮಸ್ಯೆ ಪರಿಹಾರ ಮಾಡುವ ನಿಟ್ಟಿನಲ್ಲಿ ಗಣೇಶೋತ್ಸವ ಮಾಡುತ್ತಿದ್ದೇವೆ. ನಮ್ಮ ನಡೆಯಿಂದ ಇಡೀ ಸರಕಾರ ಮತ್ತು ಜನಪ್ರತಿನಿಧಿಗಳಿಗೆ ನಾಚಿಕೆ ಆಗಬೇಕು.-ಮೌನೇಶ ಕಿನ್ನಾಳ, ಗಣಪತಿ ಕಾಮನಕಟ್ಟೆ ಗೆಳೆಯರಬಳಗದ ಸದಸ್ಯ