: ಶ್ರಾವಣದಲ್ಲಿ ಗಾಡು, ಈಗ ಬೇಕು ಬಾಡು !
ಹೂವಪ್ಪ ಐ.ಎಚ್. ಬೆಂಗಳೂರು
ಮಾಂಸಕ್ಕೆ ಹೆಚ್ಚಿದ ಬೇಡಿಕೆ
ದಿಢೀರನೇ ಹೆಚ್ಚಾದ ದರ
ಶ್ರವಣ ಮುಗಿಯುತ್ತಿದ್ದಂತೆ ಚಿಕನ್, ಮಟನ್ ಗೆ ಗ್ರಾಹಕರು ಮುಗಿದು ಬೀಳುತ್ತಿದ್ದಾರೆ. ಶೇ. 70 ರಷ್ಟು ಮಾಂಸಪ್ರಿಯರು ಇದ್ದು. ಹಿಂದುಗಳಿಗೆ ಶ್ರಾವಣ ಮಾಸ ಪವಿತ್ರವಾದದು. ಈ ವೇಳೆ ಬಹುತೇಕರು ಮಾಂಸಾಹಾರ ತ್ಯಜಿಸಿ ಸಸ್ಯಾಹಾರಿ ಗಳಾಗುತ್ತಾರೆ. ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ತರಕಾರಿಗೆ ಬಾರೀ ಬೇಡಿಯೊಂದಿಗೆ ಬೆಲೆ ಏರಿಯಾಗಿತ್ತು. ಈ ಮಾಸ ದಲ್ಲಿ ಚಿಕನ್ ಮಟನ್ ಮೀನು ವಹಿವಾಟು ಮಂದಗತಿಯಲ್ಲಿತ್ತು. ಆದರೆ ಈಗ ತರಕಾರಿ ಮಾರಾಟ ನಿಧಾನವಾಗಿದೆ. ಚಿಕನ್, ಮಟನ್, ಮೀನು ವ್ಯಾಪಾರ ಜೋರಾಗಿ ನಡೆಯುತ್ತಿದೆ.
ರಾಜ್ಯದಲ್ಲಿ ಅಂದಾಜು 35 ಸಾವಿರದಿಂದ 40 ಸಾವಿರ ಮಂದಿ ಕೋಳಿ ಸಾಕಣೆದಾರರಿದ್ದು, ಅಂದಾಜು ಬೆಂಗಳೂರಿ ನಲ್ಲಿ ಪ್ರತಿ ದಿನ 5 ಲಕ್ಷ ಕೆಜಿ ಮಾಂಸ ಉತ್ಪಾದನೆಯಾಗುತ್ತದೆ. ತಿಂಗಳಿಗೆ 1.50 ಕೋಟಿ ಕೆಜಿ ಉತ್ಪಾದನೆಯಾಗುತ್ತಿದ್ದು, ಒಟ್ಟು ಕರ್ನಾಟಕದಲ್ಲಿ 4 ರಿಂದ 4.50 ಕೋಟಿ ಉತ್ಪಾದನೆಯಾಗುತ್ತಿದೆ ಹೇಳಲಾಗುತ್ತಿದೆ. ಈಗ ಮಾಂಸಾಹಾರಿ ಹೋಟೆಲ್ ಡಾಬಾಗಳ ವಹಿವಾಟು ಹಂತ ಹಂತವಾಗಿ ಚುರುಕುಗೊಳ್ಳುವದರಿಂದ ಕೋಳಿ ಮಾಂಸ ಗಳಿಗೆ ಬೇಡಿಕೆ ಹೆಚ್ಚಲಿದೆ.
ಹೀಗಾಗಿ ಮುಂದಿನ ಕೆಜಿಗೆ ಅಂದಾಜು ಕೆಜಿಗೆ ಇನ್ನೂ ಶೇ.೩೦ ರಷ್ಟು ಹೆಚ್ಚಾಗಲಿದೆ ಎನ್ನುತ್ತಾರೆ ಚಿಕನ್ ಅಂಗಡಿವ್ಯಾಪಾರಿಗಳು. ಈಗ ಮಟನ್ ದರ ಮಟನ್ ೮೦೦-೮೫೦ ರು. ಗೆ ಮಾರಟವಾಗುತ್ತಿದೆ. ಮುಂದಿನ ತಿಂಗಳು ಪಿತೃಪಕ್ಷಆರಂಭವಾಗುತ್ತಿದ್ದು, ಹಿರಿಯರ ನೆನಪಿನಲ್ಲಿ ಮಾಂಸಹಾರ ಅಡುಗೆಳನ್ನು ಮಾಡಿ ಎಡೆ ಹಾಕಿ ಪೂಜೆ ಸಲ್ಲಿಸುತ್ತಾರೆ. ಹೀಗಾಗಿ ಮಾಂಸಕ್ಕೆ ಇನ್ನು ಬೇಡಿಕೆಯಾಗಲಿದೆ ಎಂಬುದು ವ್ಯಾಪಾರಸ್ಥರ ಅಭಿಪ್ರಾಯವಾಗಿದೆ.
ಕುಕ್ಕುಟೋದ್ಯಮದಲ್ಲಿನ ಬಹಳ ದೊಡ್ಡ ಸಮಸ್ಯೆ ಎಂದರೆ ಕಚ್ಚಾಸಾಮಗ್ರಿಗಳ ದರ ಹೆಚ್ಚಳವಾಗಿದ್ದು. ಇದು ವರ್ಷ ದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಸರಕಾರ ಹೊರ ದೇಶಗಳಿಂದ ಕಚ್ಚಾ ಸಾಮಗ್ರಿ ತರುವಾಗ ತೆರಿಗೆ ವಿನಾಯಿತಿ ನೀಡಿದರೆ ಉದ್ಯಮ ಉಳಿಯಬಹುದು. ಇದರಿಂದ ಉದ್ಯಮದ ಬಹಳಷ್ಟು ನಷ್ಟ ಸರಿದೂಗಿಸಬಹುದುಎನ್ನುತ್ತಾರೆ ಉದ್ಯಮದಾರರು.
*
ಶ್ರಾವಣದಲ್ಲಿ ಹಿಂದೂಗಳು ಯಾವದೇ ಮಾಂಸ ಸೇವಿಸದೇ ವ್ರತ ಆಚರಣೆ ಮಾಡುತ್ತಾರೆ. ಶ್ರಾವಣ ಮುಕ್ತಾಯದ ನಂತರ ಚಿಕನ್, ಮಟನ್‌ಗೆ ಬೇಡಿಕೆ ಹೆಚ್ಚುತ್ತಾದೆ. ಈ ಹಿನ್ನೆಲೆಯಲ್ಲಿ ಬೆಲೆ ಏರಿಕೆಯಾಗಿದೆ.-ಕೆ.ಎನ್.ನಾಗರಾಜು
ಇದನ್ನೂ ಓದಿ:ಬಡವನಾಗಿ ಹುಟ್ಟುವುದು ತಪ್ಪಲ್ಲ, ಬಡವನಾಗಿ ಸತ್ತರೆ ಅದು ತಪ್ಪು