: ಕೃಷಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ, ಅಧಿಕಾರಿಗಳು ಮೌನ
ವಿಶೇಷ ವರದಿ : ಶ್ರೀಕಾಂತ್ ಗುತ್ತೇದಾರ್
ಲಿಂಗಸುಗೂರು :ತಾಲೂಕಿನ ಕೃಷಿ ಇಲಾಖೆಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ(ನರೇಗಾ)ದ ಉದ್ಯೋಗ ಖಾತ್ರಿ ಕಾರ್ಡ(ಜಾಬ್ ಕಾರ್ಡ್) ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಠಿಸಿ ಯೋಜನೆಯ ಮೂಲ ಆಶಯಕ್ಕೆ ಧಕ್ಕೆ ಉಂಟು ಮಾಡಿ ಕೋಟ್ಯಾಂತರ ರೂಪಾಯಿ ಹಣ ಲೂಟಿ ಮಾಡಿರುವ ಲಿಂಗಸೂಗೂರು ಸಹಾಯಕ ಕೃಷಿ ನಿರ್ದೇಶಕ ಇಲಾಖೆ ಅಧಿಕಾರಿಗಳು.
ಸರಕಾರವು ಗ್ರಾಮೀಣ ಭಾಗದ ಜನ ಗುಳೆ ಹೋಗದಂತೆ ತಮ್ಮ ತಮ್ಮ ಹಳ್ಳಿಗಳಲ್ಲಿ ಕೆಲಸ ಮಾಡಿ ಗುಳೆ ತಪ್ಪಿಸುವ ಉದ್ದೇಶದಿಂದ ಮಹಾತ್ತರವಾದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ(ನರೇಗಾ)ಯೋಜನೆಯನ್ನು ಜಾರಿ ತಂದಿದೆ. ಆದರೆ ಲಿಂಗಸುಗೂರು ತಾಲೂಕಿನಲ್ಲಿ ಕೃಷಿ ಇಲಾಖೆಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ (ನೆರೇಗಾ)ಯಲ್ಲಿ ಭಾರಿ ಪ್ರಮಾಣ ಭ್ರಷ್ಟಾಚಾರವಾಗಿದ್ದು. ಕೃಷಿ ಇಲಾಖೆಯ ಅಧಿಕಾರಿಗಳು ಯಾವ ಫಲಾನುಭವಿ ಕೆಲಸ ಮಾಡಿದ್ದಾರೆ ಎಂಬುದನ್ನು ಸಹ ನೋಡದೆ ಕೆಲಸ ಮಾಡದೆ ಇರುವ ಜನರಿಗೆ ಹಣ ಜಮಾ ಮಾಡಿದ್ದಾರೆ. ಸರ್ಕಾರದ ಹಣವನ್ನು ಲಪಟಾಹಿಸಲು ಲೆಕ್ಕಿಸಲಾಗದಷ್ಟು ಜನ ಸುಳ್ಳು ಫಲಾನುಭವಿಗಳನ್ನು ಅಂದರೆ ತಮಗೆ ಬೇಕಿರುವ ಜನರನ್ನು ಖೊಟ್ಟಿ ದಾಖಲೆಗಳ ಮೂಲಕ ಸೃಷ್ಟಿ ಮಾಡಿ ಕೆಲಸವೇ ಮಾಡದ ವ್ಯಕ್ತಿಗಳ ಹೆಸರಲ್ಲಿ ಸಾವಿರಾರು ರೂಪಾಯಿ ಹಣ ಜಮಾ ಮಾಡಿದ್ದಾರೆ.
ತಮಗೆ ಬೇಕಿರುವ ಮತ್ತು ಪಲಾನುಭವಿಗಳಲ್ಲದ ವ್ಯಕ್ತಿಗಳ ಹೆಸರಿನಲ್ಲಿ ಜಾಬ್ ಕಾರ್ಡುಗಳನ್ನು ಮಾಡಿ ಅವರಿಗೆ ಸರ್ಕಾರದ ಹಣ ಜಮಾ ಮಾಡಿ ನಂತರ ಅಧಿಕಾರಿಗಳು ಆ ಹಣವನ್ನು ತಾವುಗಳು ಡ್ರಾ ಮಾಡಿಕೊಳ್ಳುತ್ತಿದ್ದಾರೆ. ಈ ರೀತಿಯಾಗಿ ಸರ್ಕಾರಕ್ಕೆ ಮೋಸ ಮಾಡಿ ಸಾರ್ವಜನಿಕರ ಹಣವನ್ನು ಕೃಷಿ ಇಲಾಖೆಯ ಅಧಿಕಾರಿಗಳು ಲಪಟಾಯಿ ಸುತಿದ್ದಾರೆ.
ಈ ಬಗ್ಗೆ ತಾಲೂಕಾ ಸಹಾಯಕ ಕೃಷಿ ಅಧಿಕಾರಿಗಳ ಗಮನಕ್ಕೆ ಇದ್ದರು ಸಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಇವರನ್ನು ಈ ಬಗ್ಗೆ ಮಾಹಿತಿ ಕೇಳಿದರೆ ನಮ್ಮ ಸಿಬ್ಬಂದಿಗೆ ಮಾತನಾಡಿ ಹೇಳುತ್ತೇನೆ ಎಂಬ ಉತ್ತರ ಇವರ ಕಡೆ ಯಿಂದ ಬರುತ್ತದೆ.
ರೈತಾಪಿ ಜನರ ಕೈಗೆ ಸಿಗದ ಸಹಾಯಕ ಕೃಷಿ ಅಧಿಕಾರಿಗಳು:ಕೃಷಿಗೆ ಸಂಬಂಧ ಪಟ್ಟ ಯಾವುದೇ ಸಮಸ್ಯೆಗಳು ಇದ್ದರು ಮತ್ತು ತಮ್ಮ ಕಾರ್ಯಾಲಯದಲ್ಲಿ ನಡೆಯುತ್ತಿರುವ ಭೃಷ್ಟಚಾರದ ಬಗ್ಗೆ ಮಾತನಾಡಲು ಕಾರ್ಯಾಲಯಕ್ಕೆ ಹೋದರೆ ಸಹಾಯಕ ಕೃಷಿ ಅಧಿಕಾರಿಗಳು ಕಾರ್ಯಾಲಯದಲ್ಲಿ ಸಿಗುವುದಿಲ್ಲ. ಫೋನ್ ಕರೆ ಮಾಡಿದರು ಸ್ವೀಕರಿಸು ವುದಿಲ್ಲ, ಒಂದು ವೇಳೆ ಪೋನ್ ಕರೆ ಸ್ವೀಕರಿಸಿದರೆ ನಾನು ಮೀಟಿಂಗ್‌ನಲ್ಲಿ ಇದ್ದೇನೆ ಎಂದು ಸರಿಯಾದ ಉತ್ತರ ನೀಡದೆ ಫೋನ್ ಕಟ್ ಮಾಡುತ್ತಾರೆ ಎಂದು ಸಾರ್ವಜನಿಕರು ಅಸಮಾನ ವ್ಯಕ್ತ ಪಡಿಸುತ್ತಿದ್ದಾರೆ.
2024-25 ನೇ ಸಾಲಿನಲ್ಲಿ ಇಂತಹ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದ್ದರು ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎನ್ನುವಂತೆ ವರ್ತಿಸುತ್ತಿರವ ತಾಲೂಕ ಕೃಷಿ ಅಧಿಕಾರಿಗಳ ನಡೆ ನೋಡಿದರೆ. ಈ ಎಲ್ಲಾ ಭ್ರಷ್ಟತನಕ್ಕೆ ಮೂಲ ಕಾರಣ ಇವರೇ ಇರಬಹುದು ಎಂಬುದು ಮೇಲ್ನೊಟಕ್ಕೆ ಕಂಡು ಬರುತ್ತಿದೆ.
ಸರ್ಕಾರದ ಮಹಾತ್ತರವಾದ ಯೋಜನೆಯನ್ನು ಸರಿಯಾಗಿ ಜಾರಿ ಗೊಳಿಸಿ ಕೂಲಿ ಕಾರ್ಮೀಕರಿಗೆ ದೊರಕಿಸಬೇಕಾದ ಹಣವನ್ನು ಭ್ರಷ್ಟ ಅಧಿಕಾರಿಗಳು ತಮ್ಮ ಜೇಬಿಗೆ ತುಂಬಿಕೊಳ್ಳುತ್ತಿರುವುದು ವಿಪಾರ್ಯಸವೆ ಸರಿ. ಈ ಭ್ರಷ್ಟಾಚಾರ ವನ್ನು ಬಯಲಿಗೆಳೆದು ಸಂಬಂಧ ಪಟ್ಟ ಅಧಿಕಾರಳ ವಿರುದ್ದ ಮೇಲಾಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ.
*
ಜಾಬ್ ಕಾರ್ಡುಗಳಿಗೆ ಹಣ ಜಮಾ ಆಗಿದೆ ನಾವುಗಳು ಯಾವುದೇ ಕೆಲಸಕ್ಕೆ ಹೋಗಿಲ್ಲ, ಇದು ನಮಗಷ್ಟೆ ಅಲ್ಲ ನಮಗೆ ಗೊತ್ತಿರುವ ಪ್ರಕಾರ ಸುಮಾರು 100 ಕ್ಕೂ ಅಧಿಕ ಜನರಿಗೆ ಹಣ ಜಮಾ ಆಗಿದೆ. ತಾಲೂಕಿನಲ್ಲಿ ಎಷ್ಟಾಗಿದೆಯೋ ತನಿಖೆಯಿಂದ ಗೊತ್ತಾಗಬೇಕಿದೆ.ಹೆಸರು ಹೇಳಲು ಇಚ್ಚಿಸದ ಕೂಲಿ ಕಾರ್ಮಿಕ
ಕೃಷಿ ಇಲಾಖೆಯಲ್ಲಿ ನಡೆದಿರುವ ಕೆಲಸಗಳ ಬಗ್ಗೆ ಮಾಹಿತಿ ಕೊಡಿ ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಹೇಳಿದ್ದೇನೆ ಇಲ್ಲಿಯವರೆಗೂ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ ಜಿಲ್ಲಾ ಪಂಚಾಯಿತಿಗೆ ರಿಪೋರ್ಟ್ ಮಾಡಿದ್ದೇನೆ.
ಉಮೇಶಕಾರ್ಯನಿರ್ವಾಹಕ ಅಧಿಕಾರಿಗಳುತಾಲೂಕು ಪಂಚಾಯತ ಲಿಂಗಸೂಗೂರು
ಕೃಷಿ ಅಧಿಕಾರಿಗಳು ಯಾವುದೇ ಯೋಜನೆ ಬಂದರು ತಮ್ಮ ಎಜೇಂಟರ್ ಮೂಲಕ ಮೊದಲು ತಮಗೆ ಬೇಕಿರುವ ನಕಲಿ ಖಾತೆಗಳ ಮೂಲಕ ಅರ್ಜಿ ಸಲ್ಲಿಸಿ, ನಂತರ ನಿಜವಾದ ಫಲಾನುಭವಿಗಳಿಗೆ ನಿಗದಿತ ಅರ್ಜಿಗಳು ಬಂದಿದ್ದು ನಿಮ್ಮ ಅರ್ಜಿಗಳು ಪರಿಗಣಿಸುವುದಿಲ್ಲ ಎಂದು ಹೇಳಿ ಸರ್ಕಾರದ ಯೋಜನೆಗಳ್ಳನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ.
ವೆಂಕಟೇಶಕರ್ನಾಟಕ ರೈತ ಸಂಘಹಾಗೂ ಹಸಿರು ಸೇನೆ ಅಧ್ಯಕ್ಷ ಲಿಂಗಸೂಗೂರು