ಬಂದೂಕು ಹಿಡಿದು ಭಯ ಹುಟ್ಟಿಸಬಹುದು !
ರಕ್ತ ಕ್ರಾಂತಿಯಾಗುವಷ್ಟು ಅನ್ಯಾಯವಾಗಿಲ್ಲ, ಮಲೆನಾಡು ಅರ್ಥವೇ ಆಗಲಿಲ್ಲವೇ ನಕ್ಸಲರಿಗೆ?
ವಿಶೇಷ ವರದಿ:ಹೆಗ್ಗೆರೆ ರೇಣುಕಾರಾಧ್ಯ ಶಿವಮೊಗ್ಗ
ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ಚಾಚಿಕೊಂಡಿರುವ ಪಶ್ಚಿಮ ಘಟ್ಟದಲ್ಲಿನ ದಟ್ಟ ಅರಣ್ಯಗಳ ಹೇಗಿದ್ದವು ಎಂಬುದು ಅಲ್ಲಿನ ಅರಣ್ಯವಾಸಿಗಳಿ ಗಷ್ಟೇ ಗೊತ್ತಿತ್ತು. ಅದರ ಜೀವ ವೈವಿಧ್ಯತೆಯ ನಡುವೆ ನೂರಾರು ವರ್ಷಗಳಿಂದ ಬೆಳೆದು ಬಂದ ಸಾಂಸ್ಕೃತಿಕ ತಂಪನೆಯ ವಾತಾವರಣ ಉತ್ತರಕರ್ನಾಟಕದ ಸುಡುಬಿಸಿಲಿನ ಝಳಕ್ಕಿಂತ ಭಿನ್ನವಾಗಿತ್ತು. ನಕ್ಸಲ್ ಚಳವಳಿ ಅದನ್ನು ಗುರುತಿಸುವಲ್ಲಿ ನೇರಾನೇರ ಎಡವಿತ್ತು.
ಚಿಕ್ಕಮಗಳೂರಿನ ಕುದರೆಮುಖ ಅರಣ್ಯದ ಅದಿವಾಸಿಗಳ ಪರವಾಗಿ ಎದ್ದ ಧ್ವನಿಯೊಂದು ಭಿನ್ನವಾದ ವಿರೋಧ ವನ್ನು ಎತ್ತಿ ಹಿಡಿಯುತ್ತದೆ ಎಂಬ ಸಣ್ಣ ಅಂಶವನ್ನು ಸ್ಥಳೀಯರು ಗುರತಿಸಿರಲಿಲ್ಲ. ಆದಕ್ಕೆ ಮುಖ್ಯ ಕಾರಣ ಅವರಿದ್ದ ಬವಣೆಗಳೇ ಬೇರೆಯಾಗಿದ್ದವು. ಅದಿವಾಸಿಗಳನ್ನು ಒಕ್ಕಲೆಬ್ಬಿಸುವ ಸರಕಾರದ ಕ್ರಮಕ್ಕೆ ವಿರೋಧ ವಾಗಿದ್ದ ಚಳವಳಿಯೊಂದು ಮಲೆನಾಡಿನ ಭೂ ಮಾಲೀಕರು ಮತ್ತು ಕಾರ್ಮಿಕ ವರ್ಗದವರನ್ನು ಹೇಗೆ ಶೋಷಣೆಮಾಡುತ್ತಿದ್ದಾರೆ ಎಂಬ ಅಂಶವನ್ನು ಸರಿಯಾಗಿ ವಿಶ್ಲೇಷಣೆ ಮಾಡದೇ ಹೋಗಿದ್ದು ಪರ್ಯಾಸ.
ಕುದುರೆಮುಖ ಸುತ್ತಮುತ್ತ ಜನರ ಬವಣೆಗಳು ಬೇರೆ ಬೇರೆಯಾಗಿದ್ದರೆ, ದಟ್ಟ ಅರಣ್ಯದ ಅಂಚಿನಲ್ಲಿದ್ದ ಗ್ರಾಮಗಳ ಜನರ ಸಮಸ್ಯೆಗಳೇ ಭಿನ್ನವಾಗಿದ್ದವು. ಆಗಿನ್ನೂ ಉದಾರೀಕರಣದ ಭಾಗವಾಗಿರದ ಈ ಗ್ರಾಮಗಳಲ್ಲಿ ಒಂದಿಷ್ಟು ಸ್ವಹಿತಾಸಕ್ತಿ ಸಂಘರ್ಷಗಳು ನಡೆಯುತ್ತಲೇ ಇದ್ದವು.
ಸಣ್ಣ ಹಿಡುವಳಿದಾರರ ಹಾಗೂ ದೊಡ್ಡ ಹಿಡುವಳಿದಾರರ ನಡುವೆ ಆಗಾಗ ಸಂಘರ್ಷ ನಡೆಯುತ್ತಲೇ ಇತ್ತಾ ದರೂ, ಅದು ಎಂದಿಗೂ ರಕ್ತಕ್ರಾಂತಿ ಯಾಗುವಷ್ಟು ದ್ವೇಷವಾಗಿ ಪರಿಣಮಿಸಿರಲಿಲ್ಲ. ಹಾಗೆಯೇ ಕಾಡಿನಂಚಿನ ಗ್ರಾಮಗಳು ಸರಕಾರದ ಅವಕೃಪೆಯಿಂದಾಗಿ ಮೂಲ ಸೌಕರ್ಯಗಳನ್ನು ಹೊಂದಿರಲಿಲ್ಲ ಎಂಬುದು ಬಹಳ ಮುಖ್ಯ ಸಮಸ್ಯೆಯಾಗಿತ್ತು.
ಇಂತಹ ಕೆಲ ವಿಚಾರಗಳನ್ನು ಇಟ್ಟುಕೊಂಡು ವ್ಯವಸ್ಥೆಯನ್ನು ಸರಿಪಡಿಸುವುದಕ್ಕೆ ಹೋರಾಟ ಆರಂಭಿಸಿದ ನಕ್ಸಲ್‌ರಿಗೆ ಆರಂಭಿಕವಾಗಿ ಜನರ ಬೆಂಬಲ ಗಳು ದೊರೆತವಾದರೂ, ಆ ನಕ್ಸಲ್ ತಂಡದೊಳಗಿನ ಬಂದೂಕಿನ ಬಗ್ಗೆ ಜನರಿಗೆ ಒಂದಿಷ್ಟು ಭಯಗಳಂತೂ ಇದ್ದೇ ಇತ್ತು. ನಕ್ಸಲ್ ವಿಚಾರ ಧಾರೆಯು ವ್ಯವಸ್ಥೆಯನ್ನು ಸರಿಪಡಿಸುತ್ತದೆ ಎಂಬ ಭಾವನೆಯನ್ನು ಗಟ್ಟಿಯಾಗಿ ತುಂಬುವಲ್ಲಿ ಚಳವಳಿಯ ಸೂಕ್ತ ತಯಾರಿ ವಿಫಲವಾಗಿದ್ದರಿಂದ ಅಲ್ಲಿನ ಜನರ ಬವಣೆ ನಿವಾರಿಸಲು ಬಂದ ಬಂದೂಕುಧಾರಿಗಳ ಮೇಲಿನ ವಿಶ್ವಾಸ ಬೆಳೆಯಲೇ ಇಲ್ಲ.
ರಸ್ತೆ, ವಿದ್ಯುತ್ ಇಲ್ಲದ ಗ್ರಾಮಗಳು:1996 ರಿಂದಲೂ ಚಿಕ್ಕಮಗಳೂರು, ಶೃಂಗೇರಿ, ಕೊಪ್ಪ ಹಾಗೂ ಸುತ್ತಮುತ್ತಲ ಕಾಡಿನಂಚಿನ ಗ್ರಾಮಗಳಿಗೆ ಯಾವ ಸೌಕರ್ಯವನ್ನು ಸರಕಾರ ಕಲ್ಪಿಸುವಲ್ಲಿ ವಿಫಲವಾಗಿದ್ದು ಸುಳ್ಳೇನಾಗಿರಲಿಲ್ಲ. ಶಿವಮೊಗ್ಗದ ತೀರ್ಥಹಳ್ಳಿ, ಹೊಸನಗರ, ಸಾಗರ ಹೀಗೆ ಅರಣ್ಯದೊಳಕ್ಕೆ ಸಾಗುವ ಅನೇಕ ಗ್ರಾಮಗಳಿಗೆ ತಲುಪಲು ಸೂಕ್ತ ರಸ್ತೆಯೂ ಇರಲಿಲ್ಲ. ಆಸ್ಪತ್ರೆಗಳಿಲ್ಲದೆ ಎಷ್ಟು ಮಂದಿ ಇದ್ದ ಊರಿನಲ್ಲಿಯೇ ತಮ್ಮ ಯಾತ್ರೆ ಮುಗಿಸಿದಉದಾಹರಣೆಗಳು ಸಾವಿರಾರು. ಇಂತಹ ಸಂದರ್ಭದಲ್ಲಿ ಸಹಜವಾಗಿ ಅಲ್ಲಿನ ಮಂದಿ ಸರಕಾರಕ್ಕೆ ಹಿಡಿಶಾಪ ಹಾಕುತ್ತಲೇ ತಮ್ಮ ದಿನಬೆಳಗು ಮುಗಿಸು ತ್ತಿದ್ದರು. ಇದ್ದ ಸೌಕರ್ಯದಲ್ಲಿಯೇ ಬದುಕು ಮುಗಿದು ಹೋಗುತ್ತಿತ್ತು.
ಮೂಲ ಸೌಕರ್ಯವೇ ಇಲ್ಲದ ಮೇಲೆ ಚುನಾವಣೆಗಳಲ್ಲಿ ಜನಪ್ರತಿನಿಧಿಗಳು ಯಾಕೆ ಆಯ್ಕೆಯಾಗಬೇಕು ಮತ್ತು ಅವರ ಜವಾಬ್ದಾರಿಗಳೇನು ಎಂಬುದನ್ನು ಪ್ರಶ್ನೆ ಮಾಡುತ್ತಿದ್ದ ನಕ್ಸಲ್ ಚಳವಳಿ ಜನರನ್ನು ಜಾಗೃತಗೊಳಿಸುವ ಕೆಲಸಕ್ಕೆ ಮುಂದಾಯಿತು. ನಿಜವಾಗಿಯೂ ಸರಕಾರದ ಯೋಜನೆಗಳು ಜನರಿಗೆತಲುಪಬೇಕಾದ್ದು ತಲುಪುತ್ತಿಲ್ಲ ಎಂಬ ವಿಚಾರ ಮನವರಿಕೆ ಮಾಡಿಕೊಡಲು ಮುಂದಾಯಿತು.
ಇವೆಲ್ಲವನ್ನು ಅವರ ಗುಂಪು ಜನರನ್ನು ಸೇರಿಸಿ ಹೇಳುವ ಬದಲಿಗೆ ಕಾಡಿನಂಚಿನ ಒಂಟಿ ಮನೆಗಳನ್ನು ಗುರುತಿಸಿ ಅಲ್ಲಿಗೆ ಭೇಟಿ ಕೊಟ್ಟು ಅವರಿಗೆ ಹೇಳುವಪ್ರತ್ಯೇಕ ಪ್ರಯತ್ನಗಳು ಹಾಗೂ ತಮ್ಮ ಚಳವಳಿಗೆ ಆ ಜನರ ಬೆಂಬಲವನ್ನು ಪಡೆಯುವಂತಹ ಮನವೊಲಿಕೆಯ ಕೆಲಸಗಳು ಅಲ್ಲಿನ ಜನರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿತ್ತು.
ಭಯದ ವಾತವರಣ:ಬಹುತೇಕರಿಗೆ ಬಂದೂಕು ಹಿಡಿದು ಸರಕಾರದ ವ್ಯವಸ್ಥೆಯನ್ನು ಸರಿಪಡಿಸಬಹುದು ಎಂಬ ನಕ್ಸಲ್ ತಂಡದ ಪಾಠಗಳು ಹಿಡಿಸ ಲಿಲ್ಲ. ಬದಲಿಗೆ ಅವರ ಬಳಿ ಬವಣೆ ಹೇಳಿಕೊಂಡರೆ ಇನ್ನೇನಾಗುತ್ತದೆಯೋ ಎಂಬ ಭಯದ ವಾತವರಣ ನಿಧಾನವಾಗಿ ಮೂಡತೊಡಗಿತು. ಇದು ಬವಣೆ ಹೊತ್ತವರ ಹೆಗಲ ಮೇಲೆ ಬಂದೂಕು ಇಟ್ಟು ವ್ಯವಸ್ಥೆಗೆ ಗುರಿ ಇಡುವ ನಕ್ಸಲ್ರ ಗುರಿಯ ಬಗ್ಗೆ ಅಪನಂಬಿಕೆ ಬಲವಾಗ ತೊಡಗಿದಾಗ ಅದರಲ್ಲಿಯೇ ಕೆಲವರು ನಕ್ಸಲ್ ಇರುವಿಕೆಯನ್ನು ಪೊಲೀಸರಿಗೆ ಮಾಹಿತಿ ನೀಡುವ ಕೆಲಸಕ್ಕೆ ಬಳಸಿಕೊಳ್ಳತೊಡಗಿದರು.
ಇದು ಸಹಜವಾಗಿ ಇಲ್ಲಿನ ಸಮಸ್ಯೆಗಳನ್ನು ನೀಗಿಸಲು ಜನಧ್ವನಿಯಾಗಿ ಕೆಲಸ ಮಾಡಲು ಬಂದರೆ, ಇವರೇ ಸರಕಾರಕ್ಕೆ ತಮ್ಮ ಬಗ್ಗೆ ಮಾಹಿತಿ ನೀಡು ತ್ತಿದ್ದಾರೆ ಎಂಬ ಕೋಪಕ್ಕೆ ಕಾರಣವಾಗಿ ತಮ್ಮ ವಿರುದ್ಧ ಮಾಹಿತಿ ನೀಡುವವರನ್ನು ಗುರುತಿಸುವ ಕೆಲಸಕ್ಕೆ ನಕ್ಸಲ್ ತಂಡ ಮುಂದಾಯಿತು. ಜೊತೆಗೆ ಪೊಲೀಸರ ಹುಡುಕಾಟ ಹೆಚ್ಚಾದಾಗ ಅರಣ್ಯದಲ್ಲಿಯೇ ಕಣ್ಮರೆಯಾಗುವ ಅನಿವಾರ್ಯತೆಯನ್ನು ಸೃಷ್ಟಿ ಮಾಡಿಕೊಂಡಿತು.
ಇದು ನಕ್ಸಲ್ ಚಳವಳಿ ಮಲೆನಾಡಿನಲ್ಲಿ ಕಾಲೂರಲು ಬಂದ ಮುಖ್ಯ ಉದ್ದೇಶವನ್ನು ಹಾಳು ಮಾಡಿತ್ತು. ಯಾವ ಉದ್ದೇಶ ಇಟ್ಟುಕೊಂಡು ಚಳವಳಿ ಯನ್ನು ಮಲೆನಾಡಿನ ಸೆರಿಗೆಗೆ ವಿಸ್ತರಣೆ ಮಾಡಿಕೊಂಡಿದ್ದರೋ, ಆ ಉದ್ದೇಶ ಮರೆತು ಹೋಗಿ ಸ್ಥಳೀಯರನ್ನೇ ಗುರಿ ಮಾಡಿಕೊಳ್ಳುವ ಕೆಲಸಕ್ಕೆ ಇಳಿದಾಗ ಬಂಧೂಕುಧಾರಿಗಳಿಗೆ ಇಲ್ಲಿನ ಜನ ಹೆದರ ತೊಡಗಿದರು.