ಹಳ್ಳಿಗಳ ಕರೆಂಟ್ ಕಳ್ಳಾಟ ತಡೆಗೆ ಇ- ಬೆಳಕು ಎಂಬ ಪೊಲೀಸ್‌ !
4000 ಕೋಟಿ ಬಾಕಿ ಪಾವತಿಗೆ ಸರಕಾರ ದಿಟ್ಟ ಕ್ರಮ, ಇನ್ನು ಗ್ರಾಪಂ ವಿದ್ಯುತ್ ವ್ಯವಹಾರ ಆನ್‌ಲೈನ್‌ನಲ್ಲಿ
ವಿಶೇಷ ವರದಿ:ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ರಾಜ್ಯದ ಹಳ್ಳಿಗಳಲ್ಲಿ ಇನ್ನುಮುಂದೆ ಕರೆಂಟ್ ಕಳ್ಳಾಟ ನಡೆಯೋದಿಲ್ಲ. ವಿದ್ಯುತ್ ಕಣ್ಣಾಮುಚ್ಚಾಲೆಗೆ ಅವಕಾಶವೇ ಇಲ್ಲ. ಗ್ರಾಪಂನಲ್ಲಿ ನಡೆಯುವವಿದ್ಯುತ್ ಅಕ್ರಮ ಹಾಗೂ ಕರೆಂಟ್ ವಿಚಾರದ ಕಳ್ಳ-ಪೊಲೀಸ್ ಆಟಕ್ಕೆ ಜಾಗವೇ ಇಲ್ಲ.
ಏಕೆಂದರೆ ಹಳ್ಳಿಗಳಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ತಳಮಟ್ಟದ ಅಧಿಕಾರಿಗಳು ಮತ್ತು ಇಂಧನ ಇಲಾಖೆ ಸ್ಥಳೀಯ ಅಧಿಕಾರಿಗಳ ವಿದ್ಯುತ್ ಬಾಕಿ ಕಣ್ಣಾಮುಚ್ಚಾಲೆಯ ಕಳ್ಳಾಟಕ್ಕೆ ಸರಕಾರ ಅಂತ್ಯ ಹಾಡುತ್ತಿದೆ. ಇದಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇದಕ್ಕೆ ದೇಶದಲ್ಲೇ ಪ್ರಥಮ ಎನ್ನುವಂತೆ ಎಂಬ ಹೊಸ ವ್ಯವಸ್ಥೆ ಜಾರಿಗೊಳಿಸುತ್ತಿದೆ. ಇದರಲ್ಲಿ ವಿದ್ಯುತ್ ಆರಂಭಿಕ ಸಂಪರ್ಕದಿಂದ ಹಿಡಿದು ರದ್ದುಗೊಳಿಸುವ ವರೆಗಿನ ಎಲ್ಲ ಪ್ರಕ್ರಿಯೆಗಳು ಆನ್ ಲೈನ್ ನಲ್ಲೇ ನಡೆಯಲಿವೆ.
ಇದರಿಂದ ಇಡೀ ರಾಜ್ಯದ ಹಳ್ಳಿಗಳ ವಿದ್ಯುತ್ ಬಳಕೆ ಸಂಪೂರ್ಣ ಪಾರದರ್ಶಕವಾಗಲಿದ್ದು, ಇದರಿಂದ ಇಲಾಖೆಗೆ ವರ್ಷಕ್ಕೆ ರು.400 ಕೋಟಿ ಉಳಿತಾಯ ವಾಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲ ಇದರಿಂದ ಗ್ರಾಪಂಗಳಲ್ಲಿ ವಿದ್ಯುತ್ ಬಳಕೆ ಜವಾಬ್ದಾರಿ ಕೂಡ ಹೆಚ್ಚಾಗಲಿದೆ. ಜತೆಗೆ ಇಂಧನ ಇಲಾಖೆ ಅಧಿಕಾರಿ ಗಳಿಂದ ನ್ಯಾಯೋಚಿತ ವಿದ್ಯುತ್ ದರ ಸಂಗ್ರಹಕ್ಕೂ ನೆರವಾಗಲಿದೆ ಎಂದು ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ತಿಳಿಸಿದ್ದಾರೆ.
5000 ಕೋಟಿ ಮನ್ನಾ ಆಗಿದ್ದು ಹೇಗೆ?ರಾಜ್ಯದಲ್ಲಿ 5962 ಗ್ರಾಪಂಗಳದ್ದು, ಅಲ್ಲಿ ಬೀದಿ ದೀಪಗಳು, ಕೊಳವೆ ಬಾವಿಗಳು ಹಾಗೂ ಕುಡಿಯುವ ನೀರಿನ ಘಟಕಗಳು ಸೇರಿದಂತೆ ಸುಮಾರು 1.50 ಲಕ್ಷಕ್ಕೂ ಹೆಚ್ಚು ವಿದ್ಯುತ್ ಸಂಪರ್ಕಗಳಿವೆ. ಇವುಗಳ ಪೈಕಿ 50ಲಕ್ಷ ಸಂಪರ್ಕಗಳು ಬಳಕೆ ಆಗುತ್ತಲೇ ಇಲ್ಲ. ಆದರೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವಿದ್ಯುತ್ ಬಿಲ್ ಪಾವತಿ ಮಾಡುತ್ತಲೇ ಬರುತ್ತಿತ್ತು. ಇದರಿಂದ ಸರಕಾರಕ್ಕೆ ವಾರ್ಷಿಕ ಸುಮಾರು ರು.1000 ಕೋಟಿ ನಷ್ಟವಾಗುತ್ತಿತ್ತು. 2015ರಲ್ಲಿ ಒಮ್ಮೆ ಗ್ರಾಪಂಗಳ ಒಟ್ಟಾರೆ ವಿದ್ಯುತ್ ಬಾಕಿ ಸುಮಾರು 5000 ಕೋಟಿ ರು.ಗಳಷ್ಟಿತ್ತು.
ಉಳಿದುಕೊಂಡಿತ್ತು. ಇದನ್ನು ಅಂದಿನ ಸರ್ಕಾರ ಮನ್ನಾ ಮಾಡಿತ್ತು. ಆದರೂ ಇದರ ಬಡ್ಡಿ ಚಕ್ರಬಡ್ಡಿ ತೀರಿಸಲು ಎರಡು ವರ್ಷಗಳೇ ಬೇಕಾಯಿತು. ಆನಂತರ ಕೂಡ ಸಮಸ್ಯೆ ಮುಂದುವರೆದು ಸುಮಾರು 4000 ಕೋಟಿ ರು. ಬಾಕಿ ಇದೆ.
ಏನಿದು ವಿದ್ಯುತ್ ಬಾಕಿ ಸಮಸ್ಯೆ ?ಸರ್ಕಾರ ಗ್ರಾಮಪಂಚಾಯಿತಿಗಳಿಗೆ ನೀಡುವ ಶಾಸನಬದ್ಧ ಅನುದಾನದಲ್ಲಿ ರು.೪೦೦ ಕೋಟಿಗಳನ್ನು ಬಿಡುಗಡೆ ಮಾಡುತ್ತದೆ. ಇದರಲ್ಲಿ ಪಂಚಾಯತಿ ಗಳು ವಿದ್ಯುತ್ ಬಿಲ್ ಪಾವತಿಸಬೇಕಿತ್ತು. ಆದರೆ ಮಾಡಿಲ್ಲ. ಈಗ ಅನೇಕ ವರ್ಷಗಳ ಬಾಕಿ ರು.೪೦೦೦ ಕೋಟಿ ರೂ.ಇದೆ. ಇದನ್ನು ಸರ್ಕಾರ ಏಕಾಏಕಿ ಪಾವತಿಸುವ ಬದಲು ಅನಗತ್ಯ ಸಂಪರ್ಕಗಳನ್ನು ಕಡಿತಗೊಳಿಸುವುದು ಮತ್ತು ಉಳಿದಿರುವ ಬಿಲ್ಲುಗಳನ್ನು ವ್ಯವಸ್ಥಿತವಾಗಿ ಆನ್‌ಲೈನ್ ಮೂಲಕ ಪಾವತಿಸಲು ಮುಂದಾಗಿದೆ. ಅಂದರೆ ರು.೧.೫೦ ಲಕ್ಷಕ್ಕೂ ಹೆಚ್ಚು ನಂಬರ್ ಗಳಲ್ಲಿ ರು.೧ ಲಕ್ಷ ಆರ್. ಆರ್. ನಂಬರ್ ಗಳು ಮಾತ್ರ ಬಳಕೆ ಆಗುತ್ತಿದೆ.
ಉಳಿದ ಆರ್.ಆರ್. ನಂಬರ್ ಗಳ ಸಂಪರ್ಕದಲ್ಲಿ ಬಹುತೇಕ ನಿಷ್ಕ್ರಿಯಗೊಂಡಿವೆ. ಕೆಲವು ಸಂಪರ್ಕಗಳಿಗೆ ಮೀಟರ್ ಗಳನ್ನೇ ಹಾಕಿಲ್ಲ. ಆದರೂ ಬಿಲ್ ಬರುತ್ತಿವೆ. ಅನೇಕ ಸಂಪರ್ಕಗಳು ಅಧಿಕೃತವಾಗಿ ರದ್ದುಗೊಳ್ಳದ ಕಾರಣ ಬಿಲ್ ಬರುತ್ತಿದೆ. ಇದರಿಂದ ಸರ್ಕಾರಕ್ಕೆ
ರು.೪೦೦ ಕೋಟಿ ಹೊರಬೀಳುತ್ತಿವೆ. ಇದನ್ನು ತಪ್ಪಿಸಲು ಇ- ಬೆಳಕು ಬರುತ್ತಿದೆ.
ಇ- ಬೆಳಕುಮುಖ್ಯಾಂಶಗಳು? ಪಿಡಿಒಗಳು ಯಾವ ಸಂಪರ್ಕಗಳಿಗೆ ಮೀಟರ್ ಇದೆ ಎಂದು ಮಾಹಿತಿ ನೀಡಬೇಕು? ನಿಷ್ಕ್ರೀಯಗೊಂಡ ಆರ್‌ಆರ್ ನಂಬರ್ ಮಾಹಿತಿ ಅಪ್‌ಲೋಡ್ ಮಾಡಬೇಕು? ಅನಗತ್ಯ ಆರ್‌ಆರ್ ನಂಬರ್ ರದ್ದುಗೊಳಿಸಲು ಮಾಹಿತಿ ರವಾನಿಸಲು ಸೂಚನೆ? ಹೆಸ್ಕಾಂಗಳು ಶುಲ್ಕಗಳನ್ನು ಇ-ಬೆಳಕು ತಂತ್ರಾಂಶಕ್ಕೆ ರವಾನಿಸಬೇಕು? ಪಿಡಿಒಗಳು ಆನ್‌ಲೈನ್ ಮೂಲಕವೇ ಬಿಲ್ ಪಾವತಿಸಬೇಕು? ಈ ವ್ಯವಸ್ಥೆ ಮೊದಲು ಬೆಸ್ಕಾಂ ವ್ಯಾಪ್ತಿಯಲ್ಲಿ ಜಾರಿಯಾಗಲಿದೆ? ನಂತರ ಇತರ ಎಸ್ಕಾಂಗಳಲ್ಲೂ ಅನುಷ್ಠಾನವಾಗಲಿದೆ.
ಇ- ಬೆಳಕು ಎಂಬ ಹೊಸ ವ್ಯವಸ್ಥೆಯಿಂದ ಹಳ್ಳಿಗಳಲ್ಲಿ ವಿದ್ಯುತ್ ಬಳಕೆ ಮತ್ತು ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳು ಪಾರದರ್ಶಕವಾಗಿ, ಸರ್ಕಾರಕ್ಕೆಸಾಕಷ್ಟು ಹಣ ಕೂಡ ಉಳಿತಾಯವಾಗುತ್ತದೆ. ಇದರಿಂದ ಪಂಚಾಯತಿಗಳಲ್ಲಿ ಜವಾಬ್ದಾರಿ ಕೂಡ ಹೆಚ್ಚುತ್ತದೆ.-ಶಿಲ್ಪಾ ನಾಗ್ ಆಯುಕ್ತರು