ನಿಗಮ, ಮಂಡಳಿ ಅಧ್ಯಕ್ಷರ ಅಧಿಕಾರಕ್ಕೆ ಭಾರೀ ಕತ್ತರಿ ?
ಹಿಂದುಳಿದ ವರ್ಗಗಳ ನಿಗಮಗಳಿಗೆ ಮೊದಲ ಆಪರೇಷನ್
ಸದ್ಯದಲ್ಲೇ ಇತರ ನಿಗಮಗಳಿಗೂ ಕಾದಿದೆ ಮಾರಿ ಹಬ್ಬ
ಅಧ್ಯಕ್ಷರ ಅಧಿಕಾರದ ಮೇಲೆ ಅಧಿಕಾರಿಗಳ ಕಣ್ಣು
ವಿಶೇಷ ವರದಿ:ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ರಾಜ್ಯ ಸರಕಾರದ 6 ತಿಂಗಳ ಸಾಧನೆಯ ಕೊಡುಗೆಯೋ ಅಥವಾ ಮತ್ತೇನೋ ಎಂಬಂತಾಗಿದೆ. ಕೆಲವು ಅಧ್ಯಕ್ಷರ ಅಧಿಕಾರಕ್ಕೆ ಕತ್ತರಿ ಹಾಕಲಾಗಿದೆ. ಅದರಲ್ಲೂ ವಿಶೇಷವಾಗಿ ಹಿಂದುಳಿದ ವರ್ಗಗಳ ಇಲಾಖೆ ವ್ಯಾಪ್ತಿಗೆ ಬರುವ ೮ ನಿಗಮಗಳ ಅಧ್ಯಕ್ಷರ ವಿವೇಚನೆ ಅಽಕಾರಕ್ಕೆ ಸರಕಾರ ಮೊದಲ ಕತ್ತರಿ ಪ್ರಯೋಗ ಮಾಡಿದೆ.
ಇದಕ್ಕೆ ಸಂಬಂಧಿಸಿದಂತೆ ಸರಕಾರದಿಂದ ಮೌಖಿಕ ಆದೇಶ ಮಾತ್ರ ಹೋಗಿದ್ದು, ಸದ್ಯದಲ್ಲೇ ಲಿಖಿತ ಆದೇಶ ಹೊರಬೀಳಲಿದೆ. ಇದರಿಂದ ಸರಕಾರದ ವಿರುದ್ಧ ನಿಗಮಗಳ ಅಧ್ಯಕ್ಷರಿಂದಲೇ ಆಕ್ರೋಶ ವ್ಯಕ್ತವಾಗುತ್ತಿದ್ದು, ನಿಗಮಗಳ ಅಧ್ಯಕ್ಷರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ನ್ಯಾಯ ಕೇಳಲು ಯತ್ನಿಸಿದ್ದಾರೆ. ಮೊದಲೇ ನಿಗಮಗಳಿಗೆ ಅನುದಾನವಿಲ್ಲ. ಇದರ ಮಧ್ಯೆ ಇರುವ ಶೇ.5ಷ್ಟು ವಿವೇಚನಾಧಿಕಾರ ವನ್ನೂ ಕತ್ತರಿಸಿದರೆ ನಿಗಮ ಗಳು ಏಕಿರಬೇಕು. ಅದರ ಬದಲು ನಿಗಮಗಳನ್ನೇ ಮುಚ್ಚುವುದು ಸೂಕ್ತ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬೆಳವಣಿಗೆಯಿಂದ ಹಲವು ನಿಗಮ, ಮಂಡಳಿ ಅಧ್ಯಕ್ಷರ ಸ್ಥಾನಗಳ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳಲ್ಲಿ ಆತಂಕ ಶುರವಾಗಿದ್ದು, ಇಂಥ ನಿಗಮಗಳ ಅಧ್ಯಕ್ಷರ ಹುದ್ದೆಯನ್ನು ಯಾವ ಪುರುಷಾರ್ಥಕ್ಕೆ ಕಟ್ಟಪಟ್ಟು ಪಡೆಯ ಬೇಕೆನ್ನುವ ನಿರಾ ಶೆಯೂ ಆಕಾಂಕ್ಷಿಗಳಲ್ಲಿ ಆವರಿಸಿದೆ. ಆದರೆ ಈ ವಿಚಾರ ಸಿಎಂ ಬೊಮ್ಮಾಯಿ ಅವರ ಗಮನಕ್ಕೆ ಬಾರದೆ ನಡೆಯುತ್ತಿದ್ದು,ಅಽಕಾರಲಾಬಿ ಈ ನಿಟ್ಟಿನಲ್ಲಿ ಹೆಚ್ಚು ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂದು ನಿಗಮಗಳ ಅಧ್ಯಕ್ಷರು ದೂರಿದ್ದಾರೆ.
ಏನಿದು ಅಧ್ಯಕ್ಷ ಕೋಟಾ ಸಮಸ್ಯೆೆ?:ರಾಜ್ಯ ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ದೇವರಾಜ ಅರಸು, ಸವಿತಾ ಸಮಾಜ, ಅಲೆಮಾರಿ, ಮಡಿ ವಾಳ, ವಿಶ್ವಕರ್ಮ, ಆರ್ಯ ವೈಶ್ಯ, ಉಪ್ಪಾರ, ನಿಜಶರಣ ಅಂಬಿಗರ ಚೌಡಯ್ಯ ಸೇರಿ 8 ನಿಗಮ ಗಳಿವೆ. ಇವುಗಳ ಮೂಲಕ ಆಯಾ ಸಮಾಜದ ಬಡವರಿಗೆ ಅನೇಕ ಸೌಲಭ್ಯಗಳನ್ನು ಸರಕಾರ ನೀಡುತ್ತ ಬಂದಿದೆ. ಇದರ ಪೈಕಿ ಸದ್ಯ ಗಂಗಾ ಕಲ್ಯಾಣ, ವಿದ್ಯಾಭ್ಯಾಸಕ್ಕೆೆ ನೆರವು ಹಾಗೂ ಇತರೆ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲು ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಹೀಗೆ ಆಯ್ಕೆ ಮಾಡುವಾಗ ನಿಗಮಗಳ ಅಧ್ಯಕ್ಷರು ಶೇ.5 ರಷ್ಟು ಫಲಾನುಭವಿಗಳನ್ನು ಆಯ್ಕೆ ಮಾಡುತ್ತಾರೆ. ಇದು ಹಿಂದಿನಿಂದಲೂ ಕಲ್ಪಿಸಲಾಗಿರುವವಿವೇಚನಾಧಿಕಾರ. ಇದೇ ರೀತಿ ಇಲಾಖೆ ಸಚಿವರು ಶೇ.5ರಷ್ಟು ಫಲಾನುಭವಿಗಳನ್ನು ಆರಿಸುತ್ತಾರೆ. ಉಳಿದಂತೆ ಶೇ.90 ಫಲಾನುಭವಿಗಳನ್ನು ಶಾಸಕರು ಆಯ್ಕೆ ಮಾಡುತ್ತಾರೆ. ಆದರೆ ಇತ್ತೀಚಿಗೆ ನಡೆದ ಸಭೆಯಲ್ಲಿ ಫಲಾನುಭವಿಗಳ ಆಯ್ಕೆ ವಿಚಾರವಾಗಿ ಚರ್ಚಿಸುವಾಗ ಅಧ್ಯಕ್ಷರು ತಮ್ಮಿಚ್ಚೆಯಂತೆ ಆಯ್ಕೆ ಮಾಡುವುದು ಬೇಡ, ಅವರ ವಿವೇಚನಾ ಕೋಟಾಗೆ ಅವಕಾಶ ನೀಡಲಾಗುವುದು ಎಂದು ಸರಕಾರದ ಉನ್ನತ ಅಧಿಕಾರಿಗಳು ನಿಗಮಗಳ ಮುಖ್ಯಸ್ಥರಿಗೆಮೌಖಿಕವಾಗಿ ಸೂಚಿಸಿದ್ದಾರೆ. ಆದರೆ ಇನ್ನು ಮುಂದುವರಿದು ಇಲಾಖೆ ಸಚಿವರಿಗೆ ಇರುವ ಶೇ.5 ವಿವೇಚನೆ ಕೋಟಾ ರದ್ದುಪಡಿಸುವ ನಿಟ್ಟಿನಲ್ಲೂ ಚಿಂತಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕತ್ತರಿ ಪರಿಣಾಮ ಏನಾಗಬಹುದು?ಸರಕಾರದಲ್ಲಿ ಸಚಿವ ಸ್ಥಾನ ಹಾಗೂ ಇತರೆ ಉನ್ನತ ಅವಕಾಶ ಸಿಗದಿರುವ ಪಕ್ಷದ ನಿಷ್ಠರಿಗೆ ನಿಗಮಗಳಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಆದರೆ ನಿಗಮ ದಲ್ಲಿ ಅಧ್ಯಕ್ಷರಿಗಿರುವ ಅಧಿಕಾರ ವನ್ನೇ ಕಸಿದುಕೊಂಡರೆ, ಅಧ್ಯಕ್ಷ ಸ್ಥಾನದ ಅಗತ್ಯವಾದರೂ ಏನು ಎನ್ನುವ ಪ್ರಶ್ನೆ ಶುರುವಾಗುತ್ತದೆ. ಇದೆಲ್ಲಕ್ಕಿಂತ ಕ್ಷೇತ್ರಗಳಲ್ಲಿ ಶಾಸಕರು ಎಲ್ಲ ಜಾತಿ ಜನಾಂಗಕ್ಕೂ ಅವಕಾಶ ನೀಡುವಲ್ಲಿ ವಿಫಲವಾದಾಗ ಸಂಬಂಧಿಸಿದ ಸಮಾಜದವರು ತಮ್ಮ ನಿಗಮದ ಅಧ್ಯಕ್ಷರಲ್ಲಿ ಸಮಸ್ಯೆ ಹೇಳಿಕೊಂಡು ಸೌಲಭ್ಯ ಪಡೆಯುವ ಅವಕಾಶವಿದೆ. ಆಗ ಅಧ್ಯಕ್ಷರು ನೇರವಾಗಿ ತಮ್ಮ ವಿವೇಚನಾಧಿಕಾರ ಬಳಸಿ ನೈಜ ಅರ್ಹರಿಗೆ ನ್ಯಾಯ ಕೊಡಿಸುತ್ತಾರೆ. ಇಲ್ಲಿ ಆ ಅಧಿಕಾರಕ್ಕೂ ಧಕ್ಕೆಯಾದರೆ ನಿಗಮ, ಮಂಡಳಿಗಳ ಔಚಿತ್ಯದ ಬಗ್ಗೆಯೇ ಹೆಚ್ಚಿನ ಚರ್ಚೆಗಳು ನಡೆಯುತ್ತದೆ. ಆಗ ನಿಗಮಗಳಿಗೆ ಆಕಾಂಕ್ಷಿಗಳು ಆಸಕ್ತಿಯನ್ನೂ ತೋರಿಸುವುದಿಲ್ಲ. ಪರಿಣಾಮ ಅನೇಕ ನಿಗಮಗಳನ್ನು ಮುಚ್ಚುವ ಅನಿವಾರ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
***
ನಿಗಮಗಳಲ್ಲಿ ಅಧ್ಯಕ್ಷರಿಗೆ ವಿವೇಚನೆ ಪ್ರಜಾಪ್ರಭುತ್ವದ ಆಶಯದಂತೆ ಆಡಳಿತಾತ್ಮಕ ಅಧಿಕಾರ ನೀಡಬೇಕಾಗುತ್ತದೆ. ರಾಜ್ಯದ ಪ್ರವಾಸ ಮಾಡಿಫಲಾನುಭವಿಗಳನ್ನು ಸಮಸ್ಯೆಗಳನ್ನು ಕೇಳವಾಗ ಅವರು ಯಾರ‍್ಯಾರನ್ನೂ ಆಯ್ಕೆ ಮಾಡುವಂತಿಲ್ಲ. ಅವರಿಗೆ ವಿವೇಚನೆ ಅಧಿಕಾರವೇ ಇಲ್ಲವೆಂದರೆ ಅವರ ಹುದ್ದೆಗೆ ಅಗೌರವ ತೋರಿಸಿದಂತಾಗುತ್ತದೆ.
-ರಘು ಕೌಟಿಲ್ಯ ಹಿಂದುಳಿದ ವರ್ಗಗಳ ಸಮಾಜದಮುಖಂಡರು, ನಿಗಮದ ಮಾಜಿ ಅಧ್ಯಕ್ಷರು