ಸರ್ವ್ ಮಾಡಲಿದ್ದಾಳೆ ರೋಬೋ ಸುಂದರಿ
ನಂಜನಗೂಡು ಪ್ರದ್ಯಮ್ನ
ಬೆಂಗಳೂರು:ವಿಮಾನಗಳಲ್ಲಿ ಸುಂದರವಾದ ‘ಮಿಟಾಯಿ ರಾಣಿ’ಯರನ್ನು ನೋಡುತ್ತೇವೆ. ಆದರೆ ಇನ್ನು ಮುಂದೆ ಇಂಥದ್ದೇ ಆದರೆ, ಆಧುನಿಕ ರೋಬೋ ಮಿಟಾಯಿ ರಾಣಿಯನ್ನು ಸಾಂಸ್ಕೃತಿಕ ನಗರಿ ಮೈಸೂರಿನ ಸಿದ್ಧಾರ್ಥ ಹೋಟೆಲ್‌ನಲ್ಲೂ ನೋಡಬಹುದಾಗಿದೆ.
ಹೌದು, ಮೈಸೂರಿನ ಜಯಚಾಮರಾಜೇಂದ್ರ ವೃತ್ತದ ಬಳಿ ಇರುವ, ಪ್ರಸಿದ್ಧ ಹೋಟೆಲ್‌ಗಳಲ್ಲಿ ಒಂದಾದ ಹೊಟೇಲ್ ಸಿದ್ಧಾರ್ಥಗೆ ಭೇಟಿ ನೀಡುವ ಗ್ರಾಹಕರಿಗೆ ಸೇವೆ ನೀಡಲು ಸುಂದರ ರೋಬೋ ಬೆಡಗಿಯನ್ನು ತರಲಾಗಿದೆ. ಬರುವ ಗ್ರಾಹಕರು ಮತ್ತು ಪ್ರವಾಸಿಗರಿಗೆ ಸಾಂಪ್ರದಾಯಿಕ ಮೈಸೂರು ಕೆಂಪು ರೇಷ್ಮೆ ಸೀರೆ ಉಟ್ಟು ಸೇವೆ ನೀಡಲಿದ್ದಾಳೆ. ಈಗಾಗಲೇ ಈ ರೋಬೋ ಸುಂದರಿಗೆ ಎಲ್ಲ ರೀತಿಯ ಪ್ರಾಯೋಗಿಕ ತರಬೇತಿಯನ್ನೂ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಮೈಸೂರಿನ ಮೊದಲ ಬಾರಿಗೆ ಈ ವಿನೂತನ ಪ್ರಯತ್ನ ಮಾಡಲಾಗಿದ್ದು, ಕೋವಿಡ್‌ನಿಂದಾಗಿ ಜನರು ಸಾಮಾಜಿಕ ಅಂತರ ಮತ್ತು ಶುದ್ಧ ಆಹಾರ ಬಯಸುತ್ತಾರೆ. ಇದಕ್ಕೆ ಉತ್ತಮ ಉಪಾಯವೆಂದರೆರೋಬೊ ಮಾತ್ರ ಎಂಬ ಹಿನ್ನಲೆಯಲ್ಲಿ ವಿನೂತನ ಪ್ರಯತ್ನಕ್ಕೆ ಮುಂದಾಗಲಾಗಿದೆ ಎನ್ನುತ್ತದೆ ಹೋಟೆಲ್ ಆಡಳಿತ ಮಂಡಳಿ.
ದೆಹಲಿಯಿಂದ ೨.೫೦ ಲಕ್ಷ ರೂ.ವೆಚ್ಚದಲ್ಲಿ ತರಿಸಲಾದ ಈ ರೋಬೋ, ಮಾನವನ ಆದೇಶದ ಮೇರೆಗೆ ಕೆಲಸ ಮಾಡುತ್ತದೆ. ಜತೆಗೆ ರೋಬೋ ಸಂಚಾರ ಕ್ಕಾಗಿ ಕಿಚನ್‌ನಿಂದ ಪ್ರತಿ ಟೇಬಲಗಳ ಬಳಿಗೂ ಆಯಸ್ಕಾಂತದ ಪಟ್ಟಿ (ಮ್ಯಾಗ್ನೆಟಿಕ್ ಸ್ಟ್ರೈಪ್) ಅಳವಡಿಸಲಾಗಿದ್ದು, ಕಮಾಂಡ್ ನೀಡಿದ ಸ್ಥಳಕ್ಕೆ ತೆರಳಿ ಸರ್ವ್ ಮಾಡಲಿದೆ.
ಆಹಾರವನ್ನು ಗ್ರಾಹಕರ ಟೇಬಲ್‌ಗೆ ತಲುಪಿಸುವುದಲ್ಲದೇ ಮೇನು ತಿಳಿಸಿ, ಆರ್ಡರ್ ಪಡೆದು, ಕಿಚನ್‌ಗೆ ಸಂದೇಶ ರವಾನಿಸುತ್ತದೆ. ಟೇಬಲ್ ಸ್ವಚ್ಛತೆಗೂ ಈಕೆ ನೆರವಾಗಲಿದ್ದು, ತಟ್ಟೆ, ಲೋಟಗಳನ್ನು ವಾಷಿಂಗ್ ಏರಿಯಾಗೆ ತಲುಪಿ ಸುತ್ತದೆ.
ಇನ್ನೂ ಪ್ರಾಯೋಗಿಕ ಹಂತದಲ್ಲಿರುವ ರೋಬೋಗೆ, ಮೈಸೂರು ನಗರದ ಸುತ್ತ ಮುತ್ತಲಿನ ಪ್ರಾವಾಸಿ ತಾಣಗಳು, ಇತಿಹಾಸ, ಬಸ್ ವ್ವವಸ್ಥೆ, ಅರಮನೆ, ರೈಲು ನಿಲ್ದಾಣ ಸೇರಿದಂತೆ ಹತ್ತು ಹಲವು ಮಾಹಿತಿಗಳನ್ನೂಅಳವಡಿಸುವು ದಾಗಿ ತಿಳಿಸುತ್ತಾರೆ ಹೋಟೆಲ್‌ನ ಐಟಿ ವಿಭಾದ ಮುಖ್ಯಸ್ಥ ಉಮೇಶ್.
ರಾಜ್ಯದಲ್ಲಿ ನಡೆದಿತ್ತು: ಹೋಟೆಲ್‌ಗಳಲ್ಲಿ ಸರ್ವಿಸ್ ಕೆಲಸಕ್ಕೆ ರೋಬೋ ತಂತ್ರಜ್ಞಾನವನ್ನು ಬಳಸುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಶಿವಮೊಗ್ಗದ ಪ್ರಸಿದ್ಧ ಹೋಟೆಲೊಂದರಲ್ಲಿ ಮತ್ತು ಬೆಂಗಳೂರಿನ ಇಂದಿರಾನಗರದ ರೋಬೋಟ್ ರೆಸ್ಟೋರೆಂಟ್‌ಗಳಲ್ಲಿ ಬಳಸಲಾಗುತ್ತಿದೆ.
ಇನ್ನು ಐದು ರೊಬೋಗಳನ್ನು ಅಳವಡಿಸುವ ಚಿಂತನೆ. ೧೦ ಕೆ.ಜಿ ಭಾರವನ್ನು ಹೊರುವ ಸಾಮರ್ಥ್ಯ ಹೊಂದಿದೆ. ನಾಲ್ಕು ಗಂಟೆ ಚಾರ್ಚ್ಮಾಡಿದರೆ ಎಂಟು ಗಂಟೆ ಸೇವೆ. ವಾಯ್ಸ ಕಮಾಂಡ್ ಮೂಲಕ ಕಾರ್ಯನಿರ್ವಹಣೆ.