: ದೊಡ್ಡಬಳ್ಳಾಪುರ ಉಪವಿಭಾಗಾ ಧಿಕಾರಿ ನಾಟ್ ರೀಚಬಲ್, ಸಾರ್ವಜನಿಕರ ಗೋಳು ಕೇಳೋರ್ಯಾರು?
ವರದಿ:ಅರಸನಕುಂಟೆ ಗುರುಪ್ರಸಾದ್
ಒಂದು ಕಡೆ ಸಿಎಂ ಸಿದ್ದರಾಮಯ್ಯ ನವರ ಮೂಡ ವಿಚಾರದಲ್ಲಿ ರಾಜ್ಯ ರಾಜಕಾರಣದಲ್ಲಿ ತಲ್ಲಣ ಶುರುವಾಗಿದ್ದು ಸಿದ್ದರಾಮಯ್ಯ ರಾಜೀನಾಮೆಗೆ ಮೈತ್ರಿ ಪಕ್ಷ ಪಣ ತೊಟ್ಟು ನಿಂತ್ರೆ ಇತ್ತ ಮುನಿರತ್ನ ಶಾಸಕ ಸ್ಥಾನವನ್ನ ವಜಾಗೊಳಿಸಿ ಎಂದು ಕಾಂಗ್ರೆಸ್‌ ಸೇರಿದಂತೆ ವಿವಿಧ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸುತ್ತಿವೆ.
ರಾಜಕಾರಣಿಗಳು ಬ್ಯುಸಿಯಾಗಿರುವುದು ಅಧಿಕಾರಿಗಳಿಗೆ ಕಡಿವಾಣ ಇಲ್ಲದಂತಾಗಿರಿವುದಕ್ಕೆ ಸಾಕಷ್ಟು ಸ್ಪಷ್ಟ ನಿದರ್ಶನಗಳು ಕಂಡುಬರುತ್ತಿವೆ. ಈ ರೀತಿ ಸಮಸ್ಯೆ ಆಗಿರುವುದಕ್ಕೆ ಒಂದು ಉದಾಹರಣೆ ಅಂದ್ರೆ ಬೆಂಗಳೂರು ಗ್ರಾಮಾಂತರ ಕಂದಾಯ ಇಲಾಖೆ ಆಡಳಿತ ವ್ಯವಸ್ಥೆ.
ಜಿಲ್ಲೆಯಲ್ಲಿ ಯಾವುದೇ ಅಧಿಕಾರಿಗಳಿಗೆ ಹಗ್ಗ ಮೂಗುದಾರ ಹಾಕುವವರು ಇಲ್ಲದಂತಾಗಿದ್ದಾರೆ. ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗಾಶ್ರೀ ರೈತರು ಮತ್ತು ಜನಸಾಮಾನ್ಯರ ಕೈಗೆ ಸಿಗದ ನಕ್ಷತ್ರ ವಾಗಿದ್ದರೆ ಎಂದು ಜನಸಾಮಾನ್ಯರು ಆರೋಪಿಸುತ್ತಿದ್ದಾರೆ.
ರೈತರು ತಮ್ಮ‌ ಕೆಲಸ ಕಾರ್ಯಗಳಿಗೆ ಉಪವಿಬಾಗಧಿಕಾರಿಗಳ ಕಚೇರಿಗೆ ಅಲೆದಲೆದು ಹತ್ತಾರು ಜೊತೆ ಚಪ್ಪಲಿಗಳು ಸವೆದರು ರೈತರ ಕೆಲಸ ಮಾತ್ರ ನಡೆಯುತ್ತಿಲ್ಲ. ಜಿಲ್ಲೆಯಲ್ಲಿ ರೈತರ ಮನವಿಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ದಂತಾಗಿದೆ.
ಕಚೆರಿಗೆ ತೆರಳಿ ಎ. ಸಿ.ಮೇಡಂ ಗೆ ಫೋನ್ ಮಾಡಿ ತಿಳಿದುಕೊಳ್ಳೋಣ ಎಂದು ಹೆಂಗೋ ಪಾಡು ಬಿದ್ದು ಮೇಡಮ್ಮೊರ ನಂಬರ್ ತಗೊಂಡ್ರೆ ಮೇಡಮ್ಮೊರು ಫೋನ್ ತೆಗ್ಯೋದೆ ಇಲ್ವಂತೆ.
ಬೈ ಚಾನ್ಸ್ ಎದುರಿಗೆ ಸಿಕ್ಕಿ “ಏನ್ ಮೇಡಂ‌ ಸಿಗೋದು ಇಲ್ಲ, ಫೋನ್ ಮಾಡಿದ್ರು ಪಿಕ್ ಮಾಡಲ್ಲ” ಅಂದ್ರೆ “ನಾನು ಅನೌನ್ ನಂಬರ್ಸ್ ರಿಸೀವ್ ಮಾಡಲ್ಲ” ಅಂತ ಒಂದೇ ಮಾತಿಗೆ ಹೊಡೆದು ಬಿಸಾಕ್ತಾರೆ. ಎಂದು ಸಾರ್ವಜನಿಕ ರೊಬ್ಬರು ದೂರಿದ್ದಾರೆ.
ಇವರೊಬ್ಬರೆ ಅಲ್ಲ ಇವರಂತಹ ಹಲವು ಅಧಿಕಾರಿಗಳು ರೈತರ ಮನವಿಗಳಿಗೆ ಸ್ಪಂದಿಸುತ್ತಿಲ್ಲ, ಅಧಿಕಾರಿಗಳಿಗೆ ಫೋನ್ ಮಾಡುದ್ರೆ ಫೋನ್ ಎತ್ತಲ್ಲ, ಇದು ಜನಸಾಮಾನ್ಯರ ದಿನ ನಿತ್ಯದ ಅಳಲು. ಇನ್ಮುಂದೆ ಯಾದರು ಉಪವಿಭಾಗಾಧಿಕಾರಿ ಮೇಡಂ ದುರ್ಗಾಶ್ರೀ ರವರು ಸ್ಪಂದಿಸಲಿ.
ಇದನ್ನೂ ಓದಿ: : ಕೋಚ್​ ಹುದ್ದೆಯಿಂದ ವಜಾಗೊಂಡಿಲ್ಲ; ದೊಡ್ಡ ಗಣೇಶ್‌ ಸ್ಪಷ್ಟನೆ