ಟಿಪ್ಪು ಮಾತ್ರವೇ ಅಲ್ಲ, ಎಲ್ಲ ಅರಸರ ಬಗೆಗಿನ ವೈಭವೀಕರಣ ತೊಡೆದು ವಾಸ್ತವವನ್ನು ತಿಳಿಸುತ್ತೇವೆ
ರೋಹಿತ್ ಚಕ್ರತೀರ್ಥ-ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷ
ಪ್ರದೀಪ್‌ ಕುಮಾರ್‌ ಎಂ., ಬೆಂಗಳೂರು–  ಸಂದರ್ಶನ
ಶಾಲಾ ಪಠ್ಯ ಪುಸ್ತಕಗಳಲ್ಲಿ ಕೇವಲ ಟಿಪ್ಪು ವಿಚಾರದಲ್ಲಿ ಬದಲಾವಣೆಯನ್ನಷ್ಟೇ ಪ್ರಸ್ತಾಪಿಸಿಲ್ಲ, ಬದಲಾಗಿ ದೇಶವನ್ನು ಆಳಿದ ರಾಜರ ಕುರಿತಾಗಿ ಹಲವಾರು ಮಾರ್ಪಾಡುಗಳನ್ನು ಮಾಡುವಂತೆ ಸರಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಸ್ಪಷ್ಟವಾಗಿ ಹೇಳಿದ್ದಾರೆ. ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾಸಮಿತಿ ಟಿಪ್ಪು ಕುರಿತ ಅಧ್ಯಾಯಗಳನ್ನು ಪರಿಷ್ಕರಣೆ ಮಾಡಲು ಶಿಫಾರಸು ಮಾಡಿದೆ ಎಂಬ ಕಾರಣಕ್ಕೆ ಸಮಿತಿಯ ಕಾರ್ಯ ವೈಖರಿ ಬಗ್ಗೆ ಸಾಕಷ್ಟು ಟೀಕೆ, ಶಿಫಾರಸಿನ ಬಗ್ಗೆ ಸಾಕಷ್ಟು ವಿವಾದ ಹುಟ್ಟಿಕೊಂಡಿದೆ.
ಆದರೆ, ರಾಜರನ್ನು ವೈಭವೀಕರಿಸುವ ಬದಲು ಇತಿಹಾಸದ ವಾಸ್ತವವನ್ನು ಮಕ್ಕಳಿಗೆ ತಿಳಿಸುವಂತೆ ನಾವು ಶಿಫಾರಸು ಮಾಡಿದ್ದೇವೆ ಎಂದರು. ರಾಜ್ಯದಲ್ಲಿ ಮತ್ತೆ ಟಿಪ್ಪು ವಿಚಾರ ಮುನ್ನೆಲೆಗೆ ಬಂದಿರುವ ಹಿನ್ನೆಲೆಯಲ್ಲಿ ‘ವಿಶ್ವವಾಣಿ’ಗೆ ವಿಶೇಷ ಸಂದರ್ಶನ ನೀಡಿದಅವರು, ಪಠ್ಯಪುಸ್ತಕ ಪರಿಷ್ಕರಣೆ ಸೇರಿದಂತೆ ಹಲವು ವಿಚಾರಗಳ ಬಗೆಗೆ ಮಾತನಾಡಿ ದರು.
ಪಠ್ಯದಲ್ಲಿ ಟಿಪ್ಪು ಕುರಿತ ಅಧ್ಯಾಯ ಪರಿಷ್ಕರಿಸುವಂತೆ ಸಮಿತಿಯ ಶಿಫಾರಸು ವಿವಾದಕ್ಕೆ ಕಾರಣವಾಗಿದೆಯಲ್ಲವೇ?ಪಠ್ಯದಲ್ಲಿ ಟಿಪ್ಪು ಕುರಿತ ವಿಚಾರಗಳನ್ನು ಪರಿಷ್ಕರಣೆ ಮಾಡಬೇಕು, ಇಂಥವರನ್ನೇ ಗುರಿ ಮಾಡಿ ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡಬೇಕು ಎಂಬ ಯಾವುದೇ ಪ್ರತ್ಯೇಕ ನಿರ್ದೇಶನ ಸರಕಾರದಿಂದ ಸಮಿತಿಗೆ ಬಂದಿರಲಿಲ್ಲ. 6 ರಿಂದ 10ನೇ ತರಗತಿವರೆಗಿನ ಪಠ್ಯಪುಸ್ತಕಗಳನ್ನು ಆಮೂಲಾಗ್ರವಾಗಿ ಪರಿಷ್ಕರಣೆ ಮಾಡಬೇಕು. ಆಕ್ಷೇಪಾರ್ಹ, ಬೇರೆಯವರ ಮನಸ್ಸಿಗೆ ನೋವು ತರುವಂತಹ ಅಂಶಗಳನ್ನು ತೆಗೆಯಬೇಕು ಎಂಬ ಸೂಚನೆ ಇತ್ತು. ನಾವು ಕೂಡ ಅದರಂತೆ ಕೆಲಸ ಮಾಡಿದ್ದೇವೆ. ಟಿಪ್ಪು ಮಾತ್ರವಲ್ಲ, ಅನೇಕ ಅರಸರ ಕುರಿತಾದ ವೈಭವೀಕರಣದ ಮಾಹಿತಿಗಳನ್ನು ತೆಗೆದು ಮಕ್ಕಳಿಗೆ ವಾಸ್ತವಾಂಶ ತಿಳಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇವೆ.
ಹಾಗಿದ್ದರೆ ನಿಮ್ಮ ಶಿಫಾರಸಿನಲ್ಲಿ ಬೇರೆ ಯಾವೆಲ್ಲ ವಿಚಾರಗಳಿವೆ?ಟಿಪ್ಪು ಒಬ್ಬನೇ ಅಲ್ಲ, ಎಲ್ಲೆಲ್ಲಿ ದಾಳಿಕೋರರನ್ನು ವಿಜೃಂಬಿಸಿ ಬರೆಯಲಾಗಿದೆಯೋ ಅದೆಲ್ಲವನ್ನೂ ಕಡಿತಗೊಳಿಸಿ ನಿಜವಾದ ಇತಿಹಾಸ ನೀಡಬೇಕು ಎಂದು ಹೇಳಿದ್ದೇವೆ. ಉದಾಹರಣೆಗೆ ಬರಗೂರು ರಾಮಚಂದ್ರಪ್ಪ ಅವರು ಪರಿಷ್ಕರಣೆಯಲ್ಲಿ ಮಲ್ಲಿಕಾಫರ್ಒಬ್ಬ ಹೀರೋ ಎಂದು ಹೇಳಿದ್ದರು. ಆತನನ್ನು ದಕ್ಷಿಣ ಏಶ್ಯಾದಲ್ಲಿ ದಂಡಯಾತ್ರೆ ಮಾಡಿದ ಎಂದು ಬರೆದಿದ್ದರು. ಮೊಗಲ್ ಅರಸರಲ್ಲಿ ನಾಲ್ಕೈದು ವರ್ಷ ಆಳಿದವರನ್ನೂ ವೈಭವೀಕರಿಸಿ ಅವರೇನೋ ದೇಶಕ್ಕಾಗಿ ಸಾಧನೆ ಮಾಡಿದ್ದಾರೆ ಎಂಬಂತೆ ಹೇಳ ಲಾಗಿತ್ತು. ಇತಂಹದ್ದನ್ನೆಲ್ಲಾ ಸರಿಪಡಿಸಿ ಸತ್ಯವಾಗಿರುವುದನ್ನು ಹೇಳುವಂತೆ ಶಿಫಾರಸು ಮಾಡಿದ್ದೇವೆ. ಹೊಸ ಶಿಕ್ಷಣ ನೀತಿ-೨೦೨೦ ರ ಪಠ್ಯದಲ್ಲಿ ಇತಿಹಾಸವನ್ನು ಆಮೂಲಾಗ್ರವಾಗಿ ಬದಲಾವಣೆ ಮಾಡಬೇಕು ಎಂದೂ ತಿಳಿಸಿದ್ದೇವೆ.
ಭಗವದ್ಗೀತೆ ಅಳವಡಿಕೆ ಬಗ್ಗೆ ನೀವೇನು ಹೇಳುತ್ತೀರಿ?ಪಠ್ಯಕ್ರಮದಲ್ಲಿ ಭಗವದ್ಗೀತೆ ಸೇರಿಸುವುದು ಸರಕಾರಕ್ಕೆ ಬಿಟ್ಟ ವಿಚಾರ. ಯಾವ ರೀತಿ ಮತ್ತು ಯಾವ ಹಂತದಲ್ಲಿ ಭಗವದ್ಗೀತೆ ಯನ್ನು ಬೋಧಿಸಬೇಕು ಎಂಬುದನ್ನು ಮೊದಲು ನೋಡಬೇಕಾಗುತ್ತದೆ. ಈ ವಿಚಾರದಲ್ಲಿ ಸರಕಾರ ಏನೇ ನಿರ್ಧಾರ ಕೈಗೊಂಡ ರೂ ಅದು ರಾಜಕೀಯ ಬಣ್ಣ ಪಡೆದುಕೊಳ್ಳುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಹೀಗಾಗಿ ಸರಕಾರ ಈ ವಿಚಾರವನ್ನು ಸೂಕ್ಷ್ಮವಾಗಿ ನಿಭಾಯಿಸಬೇಕಾಗುತ್ತದೆ.
ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಟಿಪ್ಪು ವಿಚಾರಕ್ಕೆ ಮಾತ್ರ ಆದ್ಯತೆ ನೀಡಿ ಬೇರೆಯವರ ವಿಚಾರಗಳನ್ನು ಕೈಬಿಟ್ಟಿದೆ ಎಂಬಆರೋಪವಿದೆಯಲ್ಲಾ?ಸರಕಾರ ಸಮಿತಿಗೆ ನೀಡಿದ ನಿರ್ದೇಶನದಂತೆ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಕೆಲಸ ಮಾಡಿದೆ. ಸಮಿತಿಯಲ್ಲಿ ಇತಿಹಾಸ ತಜ್ಞರು, ಸಾಕಷ್ಟು ವರ್ಷಗಳಿಂದ ಶಾಲಾ-ಕಾಲೇಜುಗಳಲ್ಲಿ ಪಾಠ ಮಾಡಿದ ಶಿಕ್ಷಕರು, ಉಪನ್ಯಾಸಕರು ಇದ್ದಾರೆ. ಟಿಪ್ಪು ಮಾತ್ರವಲ್ಲ,೬ರಿಂದ ೯ನೇ ತರಗತಿವರೆಗಿನ ಇತಿಹಾಸ ಪಠ್ಯದಲ್ಲಿ ಯಾವೆಲ್ಲಾ ಅಂಶಗಳಿದ್ದವೋ ಅವೆಲ್ಲವನ್ನೂ ಸಮಿತಿಯ ಮುಂದೆ ಇಟ್ಟು, ಈಅಂಶಗಳು ಬೇಕೇ,ಬೇಡವೇ ಎಂದು ಚರ್ಚೆ ಮಾಡುತ್ತಿದ್ದೆವು.
ಟಿಪ್ಪು ವಿಚಾರ ಬಂದಾಗಲೂ ಅದನ್ನು ಸಮಿತಿ ಮುಂದೆ ಚರ್ಚೆ ಮಾಡಲಾಯಿತು. ಈ ಮಧ್ಯೆ ಟಿಪ್ಪು ವಿಚಾರವನ್ನು ಪಠ್ಯದಿಂದಕೈಬಿಡಬೇಕು ಎಂಬ ಬೇಡಿಕೆ ಇತ್ತು. ಈ ಬಗ್ಗೆ ಚರ್ಚಿಸಿದಾಗ, ಒಬ್ಬ ವ್ಯಕ್ತಿಯ ಚರಿತ್ರೆಯನ್ನು ಸಂಪೂರ್ಣ ಕೈಬಿಟ್ಟರೆ ಅದರಿಂದ ಇತಿಹಾಸ ಪೂರ್ಣವಾಗುವುದಿಲ್ಲ. ಅಂತರ ಉಳಿಯುತ್ತದೆ. ಟಿಪ್ಪು ವಿಚಾರ ಕೈಬಿಟ್ಟರೆ 1860ರಿಂದ 1890ರವರೆಗಿನ ಇತಿಹಾಸ ಏನು ಎಂದು ವಿದ್ಯಾರ್ಥಿಗಳು ಕೇಳಿದಾಗ ಆ ಅಂತರ ತುಂಬಿಸುವ ಜವಾಬ್ದಾರಿ ಶಿಕ್ಷಕರದ್ದಾಗಿರುತ್ತದೆ.
ಮಕ್ಕಳಿಗೆ ಅವರು ಏನೆಂದು ಉತ್ತರಿಸುತ್ತಾರೆ?
ಹೀಗಾಗಿ ಒಬ್ಬ ವ್ಯಕ್ತಿಯನ್ನು ಪಠ್ಯದಿಂದ ಕೈಬಿಡುವುದು ಸರಿಯಲ್ಲ. ಅನಗತ್ಯವಾದ, ಪಠ್ಯಕ್ಕೆ ಪೂರಕವಲ್ಲದ ಉತ್ಪ್ರೇಕ್ಷೆಗಳನ್ನು ಕಮ್ಮಿ ಮಾಡಲು ನಿರ್ಧರಿಸಲಾಯಿತು.
ಪಠ್ಯಪುಸ್ತಕದಲ್ಲಿ ಅರಸರ ವೈಭವೀಕರಣ ಎಂದರೆ?ಒಬ್ಬ ವ್ಯಕ್ತಿಯ ಆಳ್ವಿಕೆಯನ್ನು ವೈಭವೀಕರಿಸುವುದು, ಅನಗತ್ಯ ಅಂಶಗಳನ್ನು ಹೇಳಿ ಆತನನ್ನು ಹೀರೋ ಎಂದು ಬಿಂಬಿಸುವುದು,ಆತನ ಆಡಳಿತದ ಬಗ್ಗೆ ಹೇಳುವಾಗ ಯಾವುದೋ ಅನಗತ್ಯ ಭಾಗಗಳನ್ನು ಹೇಳುವುದು, ಸುಳ್ಳುಗಳ ಮೂಲಕ ವಿಶೇಷಣಗಳನ್ನು ಕೊಡುವುದು… ಹೀಗೆ. ಇದು ಕೇವಲ ಟಿಪ್ಪುವಿಗೆ ಸಂಬಂಧಿಸಿದ್ದು ಮಾತ್ರವಲ್ಲ, ಇತರ ಅರಸರ ವಿಚಾರದಲ್ಲೂ ಇತ್ತು. ಅದೆಲ್ಲ ವನ್ನೂ ಸರಿಪಡಿಸಲಾಗಿದೆ. ಟಿಪ್ಪು ಪಠ್ಯವನ್ನು ಮಾತ್ರ ಪರಿಷ್ಕರಣೆ ಮಾಡಬೇಕು ಎಂದು ನಾವು ಎಲ್ಲಿಯೂ ಹೇಳಿಲ್ಲ.
ಪಠ್ಯಪುಸ್ತಕ ಪರಿಷ್ಕರಣೆ ಎಂದರೆ ಕೆಲವು ಅರಸರ ಆಳ್ವಿಕೆ ಕುರಿತಮಾಹಿತಿಗಳನ್ನು ಮಾತ್ರ ಪರಿಷ್ಕರಣೆ ಮಾಡಿದರೆಮುಗಿಯುತ್ತದೆಯೇ?ನಮಗೆ ಪಠ್ಯದಲ್ಲಿ ಸಂಪೂರ್ಣ ಬದಲಾವಣೆ ಮಾಡಲು ಅವಕಾಶ ಇರಲಿಲ್ಲ. ಸಮಸ್ಯಾತ್ಮಕ ಭಾಗಗಳನ್ನು ಅಂದರೆ, ದಾಳಿಕೋರ ರನ್ನು ಹೀರೋಗಳಂತೆ ಬಿಂಬಿಸುವುದು, ಇನ್ನೊಬ್ಬರ ಮನಸ್ಸಿಗೆ ನೋವಾಗುವಂತ ಸಂಗತಿಗಳನ್ನು ಸರಿಪಡಿಸಿ ಎಂದುಸರಕಾರ ಹೇಳಿತ್ತು. ಆ ಕೆಲಸ ಮಾಡಿದ್ದೇವೆ.
ಕೇವಲ ಕೆಲವೊಂದು ವಿಚಾರಗಳಲ್ಲಿ ಬದಲಾವಣೆಮಾಡಿದರೆ ಪಠ್ಯಪುಸ್ತಕ ಪರಿಷ್ಕರಣೆ ಮುಗಿದಂತೆಆಯಿತೇ?ನಮಗೆ ಸರಕಾರ ನೀಡಿದ ಕಾಲಮಿತಿ ಮತ್ತು ಹೇಳಿದ ಅಂಶಗಳಲ್ಲಿ ಏನೆಲ್ಲಾ ಮಾಡಲು ಸಾಧ್ಯವೋ ಅದನ್ನು ಮಾಡಿದ್ದೇವೆ. ಇದರ ಜತೆಗೆ ಭಾರತದ ಇತಿಹಾಸ ಕುರಿತ ಪಠ್ಯದಲ್ಲಿ ಆಮೂಲಾಗ್ರ ಬದಲಾವಣೆ ಮಾಡಬೇಕು. ಪಠ್ಯಪುಸ್ತಕಗಳನ್ನು ಸಮಗ್ರವಾಗಿ ಪುನಾ ರಚನೆ ಮಾಡಿ ಅದರ ಸ್ವರೂಪವನ್ನು ಬದಲಿಸಬೇಕು. ಹೊಸ ಶಿಕ್ಷಣ ನೀತಿಯ ಪಠ್ಯದಲ್ಲಿ ಪಠ್ಯದಲ್ಲಿ ಈ ಕುರಿತು ಕ್ರಮ ಕೈಗೊಳ್ಳ ಬೇಕು ಎಂದು ಶಿಫಾರಸು ಮಾಡಲಾಗಿದೆ.
ಆಮೂಲಾಗ್ರ ಬದಲಾವಣೆ ಎಂದರೆಅದು ಯಾವ ರೀತಿಯಲ್ಲಿ?ಶಾಲಾ ಮಕ್ಕಳ ಪಠ್ಯದಲ್ಲಿ ಇತಿಹಾಸ ಎಂದರೆ ರಾಜರ ಇತಿಹಾಸಕ್ಕೆ ಸೀಮಿತವಾಗಿ. ಅವರ ರಾಜ್ಯ ವಿಸ್ತರಣೆ, ಆಳ್ವಿಕೆಯಂತಹ ಸಾಮಾನ್ಯ ಸಂಗತಿಗಳಷ್ಟೇ ಇದೆ. ರಾಷ್ಟ್ರಕೂಟ, ಕದಂಬರಿಂದ ಹಿಡಿದು ಎಲ್ಲಾ ಅರಸರ ಬಗ್ಗೆಯೂ ಒಂದೇ ರೀತಿಯ ಬೋಧನೆ ಗಳು ಪಠ್ಯಗಳಲ್ಲಿವೆ. ಅದರ ಬದಲು ರಾಜರ ಕಾಲದಲ್ಲಿ ಜನ ಸಾಮನ್ಯರ ಇತಿಹಾಸ ಹೇಗಿತ್ತು? ಅವರ ಜೀವನಶೈಲಿ ಹೇಗಿತ್ತು? ಯಾವ ರೀತಿ ಬದುಕುತ್ತಿದ್ದರು? ವಿಜ್ಞಾನದ ಇತಿಹಾಸ ಹೇಗಿತ್ತು? ಮುಂತಾದ ಬೇರೆ ಬೇರೆ ಆಯಾ ಮಗಳ ಇತಿಹಾಸವನ್ನು ಮಕ್ಕಳಿಗೆ ತಿಳಿಸಬೇಕು. ಈ ಬಗ್ಗೆ ಸಮಗ್ರ ವಿಶ್ಲೇಷಣೆ ನಡೆಸಬೇಕು ಎಂದು ಶಿಫಾರಸು ಮಾಡಿದ್ದೇವೆ.