ಸರಕಾರದಲ್ಲಿ ಆಪ್ತ ಸಚಿವರ ಸೂಪರ್‌ ಆಡಳಿತ
ಸಿಎಂ ಮೇಲೆ ವಿಪರೀತಗೊಂಡ ಅಶೋಕ್, ಸುಧಾಕರ್ ಪ್ರಭಾವ
ಕಾರ್ಯವೈಖರಿಗೆ ಅಸಮಾಧಾನ
ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ರಾಜ್ಯಸಚಿವ ಸಂಪುಟ ಪುನಾರಚನೆ ಮಂದೆ ಹೋಗಿರು ವುದು ಸಂಪುಟದ ಬಹುತೇಕ ಸಚಿವರಲ್ಲೇ ನಿರಾಶೆ ತಂದಿದೆ! ಸಾಮಾನ್ಯ ವಾಗಿ ಸಂಪುಟ ಪುನಾರಚನೆ ಮಂದೆ ಹೋಗಿರುವುದರಿಂದ ಆಕಾಂಕ್ಷಿ ಶಾಸಕರು ನೊಂದು ಕೊಳ್ಳಬೇಕಿತ್ತು. ಸಚಿವ ಸ್ಥಾನದಲ್ಲಿರು ವವರಿಗೇ ಬೇಸರ ಏಕೆ? ಇದೇನು ಹೊಸ ವಿಚಿತ್ರ ಎಂದುಕೊಳ್ಳಬೇಡಿ.
ಹೌದು, ಇಲ್ಲೇ ಇರುವುದು ವಾಸ್ತವ. ಸರಕಾರದ ಕಾರ್ಯವೈಖರಿ ಬಗ್ಗೆ ಬಹುತೇಕ ಸಚಿವ ರಿಗೆ ಸಮಾಧಾನ ಇಲ್ಲ. ಅಂದರೆ ಕಂದಾಯ ಸಚಿವ ಆರ್.ಅಶೋಕ್ ಮತ್ತು ಆರೋಗ್ಯ ಸಚಿವ ಡಾ.ಸುಧಾಕರ್ ಅವರ ಅನಗತ್ಯ ಹಸ್ತಕ್ಷೇಪ, ಅತಿರೇಕದ ಆಡಳಿತದ ವಿರುದ್ಧ ಅನೇಕ ಸಚಿವರೇ ಬೆಂಕಿಯಾಗಿದ್ದಾರೆ. ಇದರಿಂದಾಗಿ ಸರಕಾರದ ಪ್ರಮುಖ ಸಚಿವರೇ ಅಸಮಾಧಾನ ಗೊಂಡಿದ್ದು, ಇವರೆಲ್ಲ ಸಂಪುಟ ಪುನಾರಚನೆ ಆಗಬೇಕಿತ್ತು ಎನ್ನುತ್ತಿದ್ದಾರೆ.
ಏಕೆಂದರೆ, ಸಂಪುಟ ಪುನಾರಚನೆಯಾಗಿದ್ದರೆ, ದಾರಿಗೆ ಸದಾ ಅಡ್ಡಿ ಬರುವ ಪ್ರಭಾವೀ ಸಚಿವರ ಬದಲಾವಣೆ ಸಾಧ್ಯವಿತ್ತು. ಕನಿಷ್ಠ ಖಾತೆಗಳಾದರೂ ಬದಲಾಗುತ್ತಿತ್ತು. ಆದರೆ ಪುನಾರಚನೆ ಆಗದೆ ತೊಂದರೆಯಾಗುತ್ತಿದೆಯಲ್ಲ ಎನ್ನುವ ಸಂಕಟ ಅವರದ್ದು. ಹೀಗಾಗಿ ಪ್ರಭಾವೀ ಸಚಿವರ ವಿರುದ್ಧ ಆಕ್ರೋಶಗಳನ್ನು ಹೊರ ಹಾಕಲು ಸಂಪುಟ ಸಹೋ ದ್ಯೋಗಿಗಳು ಸಚ್ಚಾಗಿದ್ದು, ಸದ್ಯ ಅವರು ಸಮಾನ ಮನಸ್ಕ ಸಮೂಹದಲ್ಲಿ ತಮ್ಮ ನೋವುಗಳನ್ನು ಹಂಚಿಕೊಳ್ಳುತ್ತಿದ್ದು, ಈ ಇಬ್ಬರೂ ಪ್ರಭಾವೀ ಸಚಿವರೇ ಸೂಪರ್ ಸಿಎಂ ಎನ್ನುವ ರೀತಿ ವರ್ತಿಸುತ್ತಿದಾರೆ ಎಂದು ಕಿಡಿಕಾರುತ್ತಿದ್ದಾರೆ. ಇನ್ನು ಶಾಸಕ ರಂತೂ ಈ ಇಬ್ಬರು ಸಚಿವರ ವಿರುದ್ಧ ಬಹಿರಂಗವಾಗಿಯೇ ಕೋಪ ಕಾರುತ್ತಿದ್ದು, ಎಲ್ಲ ಆಕ್ರೋಶಗಳನ್ನು ಹೊರ ಹಾಕಲು ಸಮಯ ಕಾಯು ತ್ತಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.
ನಿತ್ಯ ಕಿತ್ತಾಟ ನಡೆಯುತ್ತಿದೆ !ಸಚಿವದ್ವಯರ ನಿಯಂತ್ರಣ ಆಡಳಿತದ ವಿರುದ್ಧ ಸಹೋದ್ಯೋಗಿ ಸಚಿವ ಡಾ.ಅಶ್ವತ್ಥ ನಾರಾಯಣ್ ಈಗಾಗಲೇ ಮಾಗಡಿತಹಸೀಲ್ದಾರ್ ವಿಚಾರವಾಗಿ ಕೈಕೈ ಮಿಲಾಸುವ ಹಂತಕ್ಕೂ ಹೋಗಿದ್ದು, ಜಗಜ್ಜಾಹೀರಾಗಿತ್ತು. ಇದೇರೀತಿ ಬಿಬಿಎಂಪಿ ಬಜೆಟ್ವಿಚಾರದಲ್ಲಿ ಸಚಿವ ಮುನಿರತ್ನ ಸಲಹೆ ಪಡೆಯಲಾಗಿದೆ ಎಂದು ಸಚಿವ ಅಶೋಕ್ ಬಜೆಟ್ ಮಂಡನೆಯನ್ನೇ ಮುಂದೂಡಿಸಿದ್ದುಕೂಡ ಪಕ್ಷದೊಳಗೆ ಚರ್ಚೆಯಾಗಿದೆ.
ಇದೆಲ್ಲಕ್ಕಿಂತ ಮುಖ್ಯವಾಗಿ ಬಿಬಿಎಂಪಿ ಬಜೆಟ್ ವಿಷಯವಾಗಿ ಸಚಿವರಾದ ವಿ.ಸೋಮಣ್ಣ ಮತ್ತು ಮನಿರತ್ನ ಅವರು ಅಶೋಕ್ ವಿರುದ್ಧ ಮುಖ್ಯಮಂತ್ರಿ ಗಳ ಎದುರೇ ಕೂಗಾಡಿದ್ದು ಕೂಡ ಹೊಸ ವಿಚಾರ ವೇನಲ್ಲ. ಹೀಗೆ ಅನೇಕ ಸಂಗತಿಗಳು, ಶೀತಲ ಘರ್ಷಣೆ ಗಳು ನಡೆಯುತ್ತಿದ್ದು, ಕೆಲವು ಮಾತ್ರ ಬೆಳಕಿಗೆ ಬರು ತ್ತಿವೆ. ಇದೆಲ್ಲವನ್ನು ನಿಭಾಯಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹರಸಾಹಸ ಪಡುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳಿವೆ.
ಹಿರಿಯರ ಸ್ಥಿತಿಯೇಹೀಗೆ, ಶಾಸಕರಕಥೆ ಏನು?ಸರಕಾರದಲ್ಲಿನ ಈ ಬೆಳವಣಿಗೆಯಿಂದ ಅಶ್ವತ್ ನಾರಾಯಣ್ ಸೇರಿದಂತೆ ಅನೇಕ ಸಚಿವರು ಆಕ್ರೋಶಗೊಂಡಿದ್ದಾರೆ. ಇಬ್ಬರೇ ಸಚಿವರೇ ಮುಖ್ಯಮಂತ್ರಿಗಳ ಮೇಲೆ ಪ್ರಭಾವ ಬೀರುವುದಾದರೆ ನಾವೆಲ್ಲ ಏಕಿರಬೇಕೆನ್ನುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ. ಇನ್ನು ಶಾಸಕರ ಪರಿಸ್ಥಿತಿಯನ್ನು ಕೇಳುವಂತೆಯೇ ಇಲ್ಲ. ಬಹುತೇಕ ಶಾಸಕರ ಪತ್ರಗಳಿಗೆ, ಮನವಿಗಳಿಗೆ ಈ ಇಬ್ಬರೂ ಬಿಡುಗಾಸಿನ ಕಿಮ್ಮತ್ತನ್ನೂ ನೀಡುತ್ತಿಲ್ಲ ಎನ್ನುವ ದೂರಿದೆ. ಇದನ್ನು ಶಾಸಕಾರ ರೇಣುಕಾಚಾರ್ಯ,ರಾಜೂಗೌಡ, ಯತ್ನಾಳ್ ಅವರು ಸಾಕಷ್ಟು ಬಾರಿ ಬಹಿರಂಗವಾಗಿಯೇ ಹೇಳಿದ್ದಾರೆ. ಈ ಇಬ್ಬರೂ ಸಚಿವರು ಬಹುತೇಕ ಶಾಸಕರ ಫೋನ್ ಕರೆಗಳನ್ನೇ ಸ್ವೀಕರಿಸುತ್ತಿಲ್ಲ. ಕಚೇರಿಗೆ ಹೋದರೂ ಸಿಗುತ್ತಿಲ್ಲ. ಸಿಕ್ಕರೂ ಕೆಲಸ ಆಗುತ್ತಿಲ್ಲ ಎನ್ನುವುದು ಸಾಮಾನ್ಯ ದೂರುಗಳಾಗಿವೆ ಎಂದು ಶಾಸಕರು ಹೇಳಿದ್ದಾರೆ.
ಏನಿದು ನಿಯಂತ್ರಣರಾಜಕಾರಣ?ಸರಕಾರದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಮತ್ತು ಆರೋಗ್ಯ ಸಚಿವ ಸುಧಾಕರ್ ಅವರು ಪ್ರಭಾವಿಗಳು ಮುಖ್ಯಮಂತ್ರಿಗಳ ಹೆಸರಿನಲ್ಲಿ ಇವರೇ ವ್ಯವಸ್ಥೆ ನಿಯಂತ್ರಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಸಚಿವರ ಬಹುತೇಕ ಕೆಲಸಗಳು ಮತ್ತು ಅದಕ್ಕೆಸಂಬಂಽಸಿದ ಕಡತಗಳು ನಿರೀಕ್ಷಿತ ರೀತಿಯಲ್ಲಿ ಮುಂದೆ ಸಾಗುತ್ತಿಲ್ಲ.
ಚೆಕ್ ಡ್ಯಾಮ್ ’ ಮಾದರಿಯ ಸಚಿವದ್ವಯರು ಇಂಥ ವಿಳಂಬ್ಕೆ ಕಾರಣ ೧೦ ಕಡತಗಳಲ್ಲಿ ಕನಿಷ್ಠ ೬ ಕಡತಗಳು ಪಾಸ್ ಆಗುತ್ತಿಲ್ಲ.ಪ್ರಭಾವೀ ಸಚಿವರು ಸೂಕ್ಷ್ಮ ನಿಗಾ ವಹಿಸಿ ವಾಪಸ್ ಕಳಿಸುತ್ತಿದ್ದಾರೆ. ಖುದ್ದಾಗಿ ಮುಖ್ಯ ಮಂತ್ರಿ ಅವರನ್ನೇ ಭೇಟಿ ಮಾಡಿ ಕೇಳಿ ಕೊಂಡರೂ ಕಡತಗಳು ಮುಂದೆ ಹೋಗುತ್ತಿಲ್ಲ. ಸಚಿವರಾದ ಅಶ್ವತ್ಥ ನಾರಾಯಣ್, ವಿ.ಸೋಮಣ್ಣ, ಗೋವಿಂದ ಕಾರಜೋಳ, ಮುನಿರತ್ನ ಹಾಗೂ ಭೈರತೀ ಬಸವರಾಜ್, ಶಿಶಿಕಲಾ ಜೊಲ್ಲೆ ಅವರ ಕಡತಗಳು ವಿಳಂಬವಾಗುತ್ತಿವೆ.