ಪ್ರತಿಷ್ಠೆ ಬಿಡಿ, ಪುಸ್ತಕ ಕೊಡಿ
ಜೂನ್ ಬಂದರೂ ಮುಗಿಯದ ಪುಸ್ತಕ ವಿವಾದ
ಮಕ್ಕಳಿಗೆ ಯಾವುದನ್ನು ಬೋಧಿಸಬೇಕು ಎನ್ನುವ ಗೊಂದಲದಲ್ಲಿ ಶಿಕ್ಷಕರು
ರಂಜಿತ್ ಎಚ್.ಅಶ್ವತ್ಥ ಬೆಂಗಳೂರು
ಕಳೆದ ಎರಡು ವರ್ಷಗಳಿಂದ ಕರೋನಾ ನೆಪದಲ್ಲಿ ಶೈಕ್ಷಣಿಕ ವರ್ಷವನ್ನು ಕಳೆದುಕೊಂಡಿದ್ದ ವಿದ್ಯಾರ್ಥಿಗಳು, ಈ ವರ್ಷ ಖುಷಿಯಿಂದಲೇ ಶಾಲೆಗಳತ್ತ ಹೆಜ್ಜೆ ಹಾಕಿದರೆ, ಇದೀಗ ಪಠ್ಯದಲ್ಲಿ ಏನಿರಬೇಕೆಂಬ ಗೊಂದಲದಲ್ಲಿ ಪುಸ್ತಕವನ್ನೇ ನೀಡದಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಎರಡೂವರೆ ವರ್ಷಗಳ ಕಾಲ ಕರೋನಾ ಕಾರಣದಿಂದ ಮಕ್ಕಳಿಗೆ ಸರಿಯಾಗಿ ಶಾಲೆಗಳು ನಡೆದಿರಲಿಲ್ಲ. ಆದ್ದರಿಂದ ಈ ಬಾರಿ ೧೫ ದಿನಗಳ ಮುಂಚಿತವಾಗಿಯೇ ಶಾಲೆಯನ್ನು ಆರಂಭಿಸಿ, ಜೂನ್ 1ರಿಂದ ಪೂರ್ಣ ಪ್ರಮಾಣದಲ್ಲಿ ತರಗತಿ ಆರಂಭಿಸುವ ಉದ್ದೇಶವನ್ನು ಸರಕಾರ ಹೊಂದಿತ್ತು. ಇದಕ್ಕೆ ಪೂರಕ ಎನ್ನುವಂತೆ ಜೂನ್ 1ರ ವೇಳೆಗೆ ಪ್ರತಿ ವಿದ್ಯಾರ್ಥಿಗೂ ಪಠ್ಯಪುಸ್ತಕ ವಿತರಿಸುವ ಗುರಿಯನ್ನು ಇಲಾಖೆ ಹಾಕಿಕೊಂಡಿತ್ತು. ಆದರೀಗ ಶುರುವಾಗಿರುವ ಗೊಂದಲದಿಂದ ಪಠ್ಯಪುಸ್ತಕ, ಮುದ್ರಣಗೊಂಡಿದ್ದರೂ ಮಕ್ಕಳ ಕೈಸೇರದ ಪರಿಸ್ಥಿತಿ ನಿರ್ಮಿಸಿದೆ.
ಶಿಕ್ಷಣ ಇಲಾಖೆ ಮಾಹಿತಿ ಪ್ರಕಾರ ಈಗಾಗಲೇ ಶೇ.೭೫ಕ್ಕೂ ಹೆಚ್ಚರಷ್ಟು ಪಠ್ಯ ಪುಸ್ತಕ ಮುದ್ರಣ ಕಾರ್ಯ ಪೂರ್ಣಗೊಂಡಿದೆ. ಇದರಲ್ಲಿ ಶೇ.೬೦ರಷ್ಟನ್ನು ಬ್ಲಾಕ್ ಹಂತಕ್ಕೆ ತಲುಪಿಸಲಾಗಿದೆ. ಆದರೂ ಪಠ್ಯ ಪುಸ್ತಕ ಹಂಚಿಕೆ ಕಾರ್ಯ ಮಾತ್ರ ಆರಂಭಿಸಿಲ್ಲ. ಜೂನ್ ಮೂರನೇ ವಾರದ ವೇಳೆ ಹಂಚುವ ಲೆಕ್ಕಾಚಾರದಲ್ಲಿ ಇಲಾಖೆಯಿದೆ ಎನ್ನಲಾಗಿದೆ. ಇದನ್ನು ಗಮನಿಸಿದರೆ, ಪಠ್ಯ ಗೊಂದಲ ಪೂರ್ಣಗೊಂಡ ಬಳಿಕವೇ ಪಠ್ಯಪುಸ್ತಕ ಹಂಚಲು ಇಲಾಖೆ ನಿರ್ಧರಿಸಿದೆ ಎಂಬುದು ಸ್ಪಷ್ಟ. ಪಠ್ಯದಲ್ಲಿ ಏನಿರಬೇಕು? ಏನಿರಬಾರದು? ಎನ್ನುವ ಪರ-ವಿರೋಧ ಚರ್ಚೆಗಳು ಜೋರಾಗಿರುವುದರಿಂದ ಈ ಪುಸ್ತಕಗಳನ್ನು ವಿತರಿಸಲು ಸರಕಾರ ಹಿಂದೇಟು ಹಾಕು ತ್ತಿದೆ.
ಆದರೆ ಈಗಾಗಲೇ ಶಾಲೆಗಳು ಆರಂಭವಾಗಿರುವುದರಿಂದ ಸರಕಾರಿ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರಾಜಕೀಯಮೇಲಾಟದಲ್ಲಿ, ಮಕ್ಕಳಿಗೆ ಪಠ್ಯಪುಸ್ತಕ ನೀಡದೆ ದಿನದೂಡ್ತುರುವುದು ಸರಿಯಲ್ಲ. ಆದ್ದರಿಂದ, ಎಲ್ಲವನ್ನೂ ಬದಿಗಿಟ್ಟು ಮೊದಲು ಪಠ್ಯಪುಸ್ತಕವನ್ನು ವಿತರಿಸುವ ಕೆಲಸಕ್ಕೆ ಸರಕಾರ ಮುಂದಾಗಬೇಕು ಎಂಬುದು ಪೋಷಕರ ಒತ್ತಾಯ.
ಗೊಂದಲದಲ್ಲಿ ಮಕ್ಕಳು, ಶಿಕ್ಷಕರುಕೆಲವು ಸಾಹಿತಿಗಳು ತಮ್ಮ ಸಾಹಿತ್ಯವನ್ನು ಪಠ್ಯದಿಂದ ಕೈಬಿಡಬೇಕು ಎಂದು ಮುಖ್ಯಮಂತ್ರಿ, ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ. ಆದರೆ, ಶಿಕ್ಷಣ ಸಚಿವರು ಹಾಗೂ ಅಽಕಾರಿಗಳು, ಈಗಾಗಲೇ ಪಠ್ಯಪುಸ್ತಕ ಮುದ್ರಣ ಪೂರ್ಣಗೊಂಡಿರುವುದರಿಂದ, ಯಾವ ಪಠ್ಯವನ್ನೂ ಕೈಬಿಡುವ ಪ್ರಶ್ನೆಯೇ ಇಲ್ಲ ಎನ್ನುವ ಸ್ಪಷ್ಟ ಮಾತುಗಳನ್ನು ಹೇಳುತ್ತಿದ್ದಾರೆ. ಆದರೆ ಪಠ್ಯದಲ್ಲಿ ಕೆಲ ಬದಲಾವಣೆಯಾದರೂ ಅಚ್ಚರಿಯಿಲ್ಲ ಎನ್ನುವ ಮಾತುಗಳನ್ನು ಅನೇಕರು ಹೇಳುತ್ತಿರುವುದರಿಂದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಏನು ಮಾಡಬೇಕು ಎನ್ನುವ ಗೊಂದಲದಲ್ಲಿದ್ದಾರೆ. ಒಂದು ವೇಳೆ ಒತ್ತಡ ಹೆಚ್ಚಾಗಿ ಪಠ್ಯದ ಕೆಲವು ಅಂಶವನ್ನು ಕೈಬಿಟ್ಟರೆ ಅಥವಾ ಸೇರಿಸಿದರೆ ಅದನ್ನು ಓದಬೇಕು ಎನ್ನುವ ಗೊಂದಲವಿರುವುದರಿಂದ ಶಿಕ್ಷಕರಿಗೆ ಬೋಧಿಸಲು ಹಾಗೂ ಮಕ್ಕಳಿಗೆ ಅಭ್ಯಾಸ ಮಾಡಬೇಕೇ ಬೇಡವೇ ಎನ್ನುವ ಗೊಂದಲದಲ್ಲಿದ್ದಾರೆ. ಆದ್ದರಿಂದ ಪಠ್ಯಪುಸ್ತಕದಲ್ಲಿ ರಾಜಕೀಯ ಮಾಡದೇ, ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸುವ ಕೆಲಸವನ್ನು ಸರಕಾರಮಾಡಬೇಕಿದೆ ಎನ್ನುವ ಆಗ್ರಹ ಹೆಚ್ಚಾಗುತ್ತಿದೆ.
ಶಾಲಾ ಮಕ್ಕಳಿಗೆ ಬೋಧಿಸುವುದೇನು?ಶಾಲೆ ಆರಂಭವಾದ ೧೫ ದಿನಗಳ ಕಲಿಕಾ ಚೇತರಿಕಾ ಕಾರ್ಯಕ್ರಮವನ್ನು ನಡೆಸಲಾಯಿತು. ಇದೀಗ ವಿದ್ಯಾಪ್ರವೇಶದ ಮೂಲಕ ಇನ್ನೆರಡು ವಾರ ಶಾಲೆ ಯನ್ನು ನಡೆಸಲಾಗುವುದು. ಆದರೆ, ಅದಾದ ಬಳಿಕ ಪಠ್ಯಪುಸ್ತಕಗಳು ಕೈಸೇರಿಲ್ಲ ಎಂದರೆ ಏನು ಮಾಡಬೇಕು ಎನ್ನುವ ಆತಂಕದಲ್ಲಿ ಶಿಕ್ಷಕರಿದ್ದಾರೆ. ಹಿಂದೆ ಪಠ್ಯಪುಸ್ತಕ ಕೈಸೇರದಿದ್ದರೂ ಹಿಂದಿನ ವರ್ಷದ ಪುಸ್ತಕದ ಆಧಾರದಲ್ಲಿ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ವಿವಾದ ಸೃಷ್ಟಿಯಾಗಿರುವುದರಿಂದ ಪರಿಷ್ಕೃತ ಪುಸ್ತಕ ಕೈಸೇರುವ ತನಕ ಸಿಲೆಬೆಸ್ ಆರಂಭಿಸಲು ಅನೇಕ ಶಿಕ್ಷಕರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ಬಂಡೆದ್ದ ಸಾಹಿತಿಗಳುಮತ್ತೊಂದೆಡೆ ತಮ್ಮ ಲೇಖನ, ಪದ್ಯಗಳನ್ನು ಪಠ್ಯದಿಂದ ಕೈಬಿಡುವಂತೆ ಕೆಲವು ಸಾಹಿತಿಗಳು ಸರಕಾರವನ್ನು ಒತ್ತಾಯಿಸಿ ಪತ್ರ ಬರೆದಿದ್ದಾರೆ. ಗೊಂದಲ ಇರುವು ದರಿಂದ ಹಿಂದಿನ ಪಠ್ಯವನ್ನೇ ಮುಂದುವರಿಸುವಂತೆ ಒತ್ತಾಯಿಸಿ ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಎಡಪಂಥೀಯರ ಒತ್ತಾಯಕ್ಕೆ ಪ್ರತಿಯಾಗಿ ಬಲಪಂಥೀಯ ರಿಂದಲೂ ಅಭಿಯಾನ ಶುರುವಾಗಿದೆ.
ಬಿಸಿ ತುಪ್ಪವಾದ ಪಠ್ಯ ಪರಿಷ್ಕರಣೆಪರಿಷ್ಕೃತ ಪಠ್ಯವನ್ನೇ ಮಕ್ಕಳಿಗೆ ನೀಡಲು ಸರಕಾರ ನಿರ್ಧರಿಸಿದೆಯಾದರೂ ಅದಕ್ಕೆ ವ್ಯಕ್ತವಾಗುತ್ತಿರುವ ವಿರೋಧಗಳು ಸರಕಾರಕ್ಕೆ ಬಿಸಿ ತುಪ್ಪವಾಗಿದೆ.  ಈಗಾಗಲೇ ಪಠ್ಯ ಮುದ್ರಣವಾಗಿರುವುದರಿಂದ ಅದನ್ನು ಹಿಂತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ಸರಕಾರ ಇಲ್ಲ. ಹೊಸ ಪಠ್ಯಕ್ರಮ ಅನುಸರಿಸಿದರೆ ಎಡಪಂಥೀ ಯರ ಹೋರಾಟ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದರ ಜತೆಗೆ ಕುವೆಂಪು ಮತ್ತು ಬಸವಣ್ಣನವರ ವಿಚಾರದಲ್ಲಿ ಆಗಿರುವ ಗೊಂದಲವೂ ಸರಕಾರದ ತಲೆ ತಿನ್ನು ತ್ತಿದೆ.
ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಶೀಘ್ರ ತೀರ್ಮಾನ
ಉಡುಪಿ: ಪಠ್ಯಪುಸ್ತಕ ಪರಿಷ್ಕರಣೆಯ ವರದಿ ಪರಿಶೀಲನೆಯ ನಂತರ ಶೀಘ್ರದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಸಮಗ್ರ ವರದಿಯನ್ನು ಕೇಳಲಾಗಿದೆ. ಸ್ವಾಮೀಜಿಗಳು ಹಾಗೂ ಇತರರ ಅಭಿಪ್ರಾಯಗಳನ್ನು ಪರಿಗಣಿಸ ಲಾಗುವುದು. ಈ ಎಲ್ಲ ವಿಚಾರಗಳ ಬಗ್ಗೆ ಸಮಗ್ರ ವರದಿ ಹಾಗೂ ವಾಸ್ತವಾಂಶ ತಿಳಿಸುವಂತೆ ಶಿಕ್ಷಣ ಸಚಿವರಿಗೆ ಸೂಚನೆ ನೀಡಲಾಗಿದೆ. ಸಚಿವರು ಗುರುವಾರ ವರದಿ ನೀಡಲಿದ್ದಾರೆ. ಈ ವರದಿ ಪರಿಶೀಲಿಸಿದ ನಂತರ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಪಠ್ಯಗಳನ್ನು ವಾಪಸ್ಸು ಪಡೆಯುತ್ತೇವೆ ಎನ್ನುವಸಾಹಿತಿ ಗಳೊಂದಿಗೂ ಚರ್ಚಿಸಲಾಗುವುದು ಎಂದರು.
***
ಒಂದು ವರ್ಗದಿಂದ ಪಠ್ಯಪುಸ್ತಕದ ಮೂಲದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆದ್ದರಿಂದ ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂಬಸಮಜಾಯಿಸಿ ಬರುತ್ತಿದೆ. ವಾಸ್ತವಾಂಶದ ಬಗ್ಗೆ ವರದಿ ಪಡೆದು ನಾವು ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುತ್ತೇವೆ.-ಬಸವರಾಜ ಬೊಮ್ಮಾಯಿ ಸಿಎಂ