ಅಮೆರಿಕ ವೀಸಾಕ್ಕೆ ಇನ್ನು ಎರಡು ವರ್ಷ ಕಾಯಬೇಕು !
ರಂಜಿತ್ ಎಚ್. ಅಶ್ವತ್ಥ ಬೆಂಗಳೂರು
ಕಳೆದ ವರ್ಷಕ್ಕಿಂತ ಶೇ.328 ಹೆಚ್ಚು ಅರ್ಜಿ ಸಲ್ಲಿಕೆ: ಹಲವು ದೇಶಗಳ ವೀಸಾಕ್ಕೂ ಕಾಯುವ ಸವಾಲು
ವೀಸಾಗೆ ದೆಹಲಿ, ಮುಂಬೈನಲ್ಲಿ ಸರತಿ ಅಮೆರಿಕದ ವೀಸಾವನ್ನು ನೀಡುವುದಕ್ಕೆ ಐದು ಕೇಂದ್ರಗಳಿವೆ. ಅದರಲ್ಲಿ ಮುಂಬೈ ಹಾಗೂ ದೆಹಲಿಯ ಕೇಂದ್ರದಲ್ಲಿ ಭಾರಿ ಸರತಿಯಿದೆ. ಮೂಲಗಳ ಪ್ರಕಾರ ಮುಂಬೈನ ಕೇಂದ್ರದಲ್ಲಿ 517 ಹಾಗೂದೆಹಲಿಯ ಕೇಂದ್ರದಲ್ಲಿ 581 ದಿನಗಳ ಕಾಲ ಕಾಯಬೇಕು. ಆದರೆ ವಿದ್ಯಾರ್ಥಿ ಗಳಿಗೆ ನೀಡುವ ವೀಸಾವನ್ನು ಸಾಧ್ಯವಾದಷ್ಟು ಶೀಘ್ರ  ಹಂಚುವ ಕಾರ್ಯವಾಗುತ್ತಿದೆ.
ನೀವು ಒಂದು ವೇಳೆ ಅಮೆರಿಕ ಪ್ರವಾಸಕ್ಕೆ ಅಥವಾ ಅಲ್ಲಿಯೇ ವಾಸಿಸುವ ಉದ್ದೇಶದೊಂದಿಗೆ ವೀಸಾ ಅಪ್ಲೇ ಮಾಡುವುದಿದ್ದರೆ, 2 ವರ್ಷದ ಮೊದಲೇ ಇದನ್ನು ಯೋಚಿಸಿ. ಇಲ್ಲದಿದ್ದರೆ, ವೀಸಾ ಸಿಗದೇ ನಿರಾಸೆಯಾಗುವುದರಲ್ಲಿ ಅನುಮಾನವೇ ಇಲ್ಲ.!
ಹೌದು, ಭಾರತದಲ್ಲಿ ಅಮೆರಿಕ ವೀಸಾ ಪಡೆಯಲು ಬೇಡಿಕೆ ಹೆಚ್ಚುತ್ತಿರುವ ಬೆನ್ನಲ್ಲೇ, ವೀಸಾಗೆ ಅರ್ಜಿ ಸಲ್ಲಿಸುವುದಕ್ಕೆ ದೊಡ್ಡ ಸರದಿಯೇ ಇದೆ. ಮಾಹಿತಿಯ ಪ್ರಕಾರ ಇಂದು ವೀಸಾಗೆ ಅರ್ಜಿ ಸಲ್ಲಿಸಿದರೆ ಸಂದರ್ಶನಕ್ಕೆ 2024ರ ವೇಳೆಗೆ ಸಮಯ ಸಿಗಲಿದೆ ಎಂದು ಅಮೆರಿಕದ ಅಽಕೃತ ವೆಬ್‌ಸೈಟ್ ತೋರಿಸುತ್ತಿದೆ.
ಭಾರತೀಯರ ವೇಟಿಂಗ್ ಟೈಮ್ ಸುಮಾರು ಒಂದೂವರೆ ವರ್ಷವಿದೆ. ಅಂದರೆ ಈಗ ಅರ್ಜಿ ಸಲ್ಲಿಸಿದರೆ 2024ರ ಮಾರ್ಚ್-ಏಪ್ರಿಲ್ ಅವಽಗೆ ನಮ್ಮ ಸರದಿ ಬರಲಿದೆ. ಟ್ರಾವೆಲ್ ಏಜೆನ್ಸಿಗಳ ತಜ್ಞರ ಪ್ರಕಾರ ಅಮೆರಿಕ ಮಾತ್ರವ ಲ್ಲದೇ, ಯುರೋಪ್‌ನ ಕೆಲವು ದೇಶಗಳ ವೀಸಾ ಪಡೆಯುವ ಅವಽಯೂ ಇದೇ ರೀತಿಯಿದೆ.
ಕರೋನಾದ ಬಳಿಕ ಅಮೆರಿಕ, ಯುರೋಪಿಯನ್ ದೇಶಗಳ ವೀಸಾಕ್ಕೆ ಬೇಡಿಕೆ ಶುರುವಾಗಿದೆ. ಬೇಡಿಕೆಗೆ ಅನುಗುಣವಾಗಿ ಶೀಘ್ರ ವೀಸಾ ಹಂಚಿಕೆಗೆ ಪ್ರಯತ್ನಿಸಲಾಗುತ್ತಿದೆ ಎನ್ನುವ ಮಾತುಗಳನ್ನು ಅಮೆರಿಕ, ಯುಕೆ ರಾಯಭಾರ ಕಚೇರಿಗಳುಹೇಳುತ್ತಿವೆ. ಅದರಲ್ಲಿಯೂ ಪ್ರವಾಸ ಹಾಗೂ ಆ ದೇಶದಲ್ಲಿ ವಾಸಿಸುವುದಕ್ಕೆ ನೀಡುವ ವೀಸಾವನ್ನು ಹಂಚಿಕೆ ಮಾಡುವಲ್ಲಿ ತಡವಾಗುತ್ತಿದೆ. ಆರೋಗ್ಯ ಸಂಬಂಧಿ ಅಥವಾ ಶೈಕ್ಷಣಿಕ ಸಂಬಂಧ ವೀಸಾವನ್ನು ಶೀಘ್ರ ನೀಡಲಾಗುತ್ತಿದೆ.
ಯುಕೆಗೂ ಭಾರಿ ಡಿಮ್ಯಾಂಡ್:ಬ್ರಿಟೀಷ್ ರಾಯಭಾರ ಕಚೇರಿಯ ಮೂಲಗಳ ಪ್ರಕಾರ, ಕರೋನಾದ ಬಳಿಕ ಅಮೆರಿಕ ರೀತಿಯಲ್ಲಿಯೇ ಯುಕೆ ವೀಸಾಗೂ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ಈ ಹಿಂದಿನ ವರ್ಷ 106000 ಜನರು ವೀಸಾಕ್ಕೆಅರ್ಜಿ ಸಲ್ಲಿಸಿದ್ದರು. ಆದರೆ 2021ರ ಏಪ್ರಿಲ್‌ನಿಂದ 2022ರ ಮಾರ್ಚ್ ಅವಧಿಯಲ್ಲಿ ಈ ಪ್ರಮಾಣ ಶೇ.328ರಷ್ಟು ಹೆಚ್ಚಾಗಿದೆ. ಇದೇ ರೀತಿ ಕೆನಡಾದ ವೀಸಾಗೂ ಬೇಡಿಕೆ ಹೆಚ್ಚಿದ್ದು, ಐದು ಲಕ್ಷ ಜನರಿಗೆ ವೀಸಾ ನೀಡಿದ್ದು, ಇನ್ನು ನಾಲ್ಕು ಜನರಿಗೆ ಶಾಶ್ವತ ಪೌರತ್ವ ನೀಡಲು ಅಲ್ಲಿನ ಸರಕಾರ ತೀರ್ಮಾನಿಸಿದೆ. ಇದನ್ನು ನೋಡಿದರೆ ಸುಮಾರು ಶೇ.32ರಷ್ಟು ಭಾರತೀಯರು ಕೆನಡಾ ವೀಸಾ ಪಡೆಯುವುದಕ್ಕೆ ಉತ್ಸುಕತೆ ತೋರಿದ್ದಾರೆ.
ಇತರ ಯುರೋಪ್ ದೇಶಗಳಿಗೂ:ಕೇವಲ ಅಮೆರಿಕ ಮಾತ್ರವಲ್ಲದೇ ಯುರೋಪ್ ದೇಶಗಳು ವೀಸಾ ನೀಡಲು ವಿಳಂಬ ಮಾಡುತ್ತಿದೆ. ಸ್ವೀಡನ್ ಹಾಗೂ ಸ್ವಿರ್ಜ್ಡ್‌ಲ್ಯಾಂಡ್ ಸಹ ವೀಸಾ ನೀಡುವಿಕೆಯಲ್ಲಿ ವಿಳಂಬ ಮಾಡುತ್ತಿದೆ. ಮೊದಲ ಬಾರಿ ವೀಸಾ ಪಡೆಯುವುದು ಕಷ್ಟವಾಗಿರುತ್ತದೆ. ಆದರೆ ಬಳಿಕ ನವೀಕರಣದ ಸಮಯದಲ್ಲಿ ಈ ರೀತಿ ವಿಳಂಬವಾಗುವುದಿಲ್ಲ. ಅದರಲ್ಲಿಯೂಅಲ್ಲಿಯೇ ಉಳಿದುಕೊಳ್ಳುವುದಕ್ಕೆ ವೀಸಾ ಅರ್ಜಿ ಸಲ್ಲಿಸಿದರೆ ಇನ್ನಷ್ಟು ತಡವಾಗುತ್ತದೆ ಎನ್ನುವ ಮಾತುಗಳನ್ನು ತಜ್ಞರು ಹೇಳಿದ್ದಾರೆ