ಸರಕಾರದ ಸುಪರ್ದಿಗೆ ಜೈಲಕ್ಷ್ಮೀ ಅರಮನೆ
ಅಭಿವೃದ್ಧಿ ಉದ್ದೇಶದೊಂದಿಗೆ ಸರಕಾರಿ ಕಚೇರಿಯಾಗಿಸಲು ಪ್ರತಾಪ್ ಯೋಜನೆ
ನಂಜನಗೂಡು ಪ್ರದ್ಯುಮ್ನ ಬೆಂಗಳೂರು
ಮೈಸೂರಿನ ಮಾನಸಂಗಂಗೋತ್ರಿಗೆ ಕಳಶಪ್ರಾಯವಾಗಿರುವ ಜಯಲಕ್ಷ್ಮೀ ಅರಮನೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದಸರಕಾರದ ಸುಪರ್ದಿಗೆ ನೀಡಲು ನಿರ್ಧರಿಸಲಾಗಿದೆ.
ಜಯಲಕ್ಷ್ಮೀ ಅರಮನೆ ನಿರ್ವಹಣೆ ಕೊರತೆಯಿಂದ ಶಿಥಿಲಾವಸ್ಥೆಗೆ ತಲುಪುವ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ಅರಮನೆ ಯನ್ನು ಸರಕಾರದ ಸ್ವಾಧೀನಕ್ಕೆ ಪಡೆದು ಅಭಿವೃದ್ಧಿಗೊಳಿಸುವ ಬಗ್ಗೆ ಸಂಸದ ಪ್ರತಾಪ್ ಸಿಂಹ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜತೆ ಸಮಾಲೋಚನೆ ನಡೆಸಿದ್ದು, ಇದಕ್ಕೆ ಇಲಾಖೆ ಸಮ್ಮತಿಸಿದೆ ಎಂದು ತಿಳಿದು ಬಂದಿದೆ.
ಮೈಸೂರು ಮಹಾರಾಜರ ಆಳ್ವಿಕೆ ವೇಳೆ ಮೈಸೂರಿನಲ್ಲಿ ಹಲವು ಅರಮನೆಗಳನ್ನು ನಿರ್ಮಿಸಿದ್ದು, ರಾಜಾಡಳಿತ ಮುಗಿದು ಸ್ವಾತಂತ್ರ್ಯ ಬಂದ ನಂತರ ಕೆಲವು ಅರಮನೆಗಳನ್ನು ಸರಕಾರ ತನ್ನ ಸುಪರ್ದಿಗೆ ಪಡೆದ ಸರಕಾರಿ ಕಚೇರಿಗಳನ್ನಾಗಿ ಬಳಸಿಕೊಳ್ಳ ಲಾಗಿದೆ. ಅದರಲ್ಲಿ ಇಂದಿನ ಸಿಎ-ಟಿಆರ್‌ಐ ಕಟ್ಟಡ ಕೂಡ ಒಂದು. ಆ ಪಟ್ಟಿಗೆ ಮಾನಸ ಗಂಗೋತ್ರಿಯ ಆವರಣದಲ್ಲಿರುವ ಜೈಲಕ್ಷ್ಮಿ ಅರಮನೆಯನ್ನೂ ಸೇರಿಸುವ ಸಿದ್ಧತೆಗಳು ನಡೆಯುತ್ತಿವೆ.
ಜೈಲಕ್ಷಮ್ಮಣ್ಣಿ ನಿವಾಸ:ಶ್ರೀ ನಾಲ್ವಡಿಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ತಮ್ಮ ಮೂರು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಅರಮನೆಗಳನ್ನು ಕಟ್ಟಿಸಿಕೊಟ್ಟಿದ್ದರು. ಅದರಲ್ಲಿ ಇಂದಿನ ಮಾನಸಗಂಗೋತ್ರಿಯಲ್ಲಿರುವ ಜಯಲಕ್ಷ್ಮಿ ಅರಮನೆ, ಅವರ ಹಿರಿಯಮಗಳಾದ ಜೈಲಕ್ಷಮ್ಮಣ್ಣಿ ಅವರಿಗೆಂದು ಕಟ್ಟಿಸಿಕೊಡಲಾಗಿತ್ತು. ನಂತರ ಕುವೆಂಪು ಮೈಸೂರು ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾಗಿದ್ದ ಸಂದರ್ಭದಲ್ಲಿ, ಮಾನಸಗಂಗೋತ್ರಿಯ ಅಭಿವೃದ್ಧಿ ದೃಷ್ಟಿಯಿಂದಾಗಿ ವಿಶ್ವವಿದ್ಯಾನಿಲಯಕ್ಕೆ ಈಅರಮನೆಯನ್ನು ೧೦ಲಕ್ಷ ರುಪಾಯಿಗೆ ಮಾರಾಟ ಮಾಡಲಾಯಿತು. ಅಂದಿನಿಂದ ಈ ಸ್ಥಳದಲ್ಲಿ ಜಾನಪದ ವಸ್ತುಸಂಗ್ರಹಾಲಯ, ಪುರಾತತ್ವ ವಸ್ತುಸಂಗ್ರಹಾಲಯ ಮತ್ತು ಜನರಲ್ ವಸ್ತು ಸಂಗ್ರಹಾಲಯವಾಗಿ ಮಾಡಲಾಗಿದೆ.
ಈ ವಸ್ತು ಸಂಗ್ರಹಲಯವು, ಅತ್ಯಂತ ಜನಪ್ರಿಯವಾಗಿದ್ದು, ೬೫೦೦ ಕ್ಕೂ ಹೆಚ್ಚು ವಸ್ತು ಪ್ರದರ್ಶನಗಳನ್ನು ಹೊಂದಿದೆ. ಇದನ್ನು ಏಷ್ಯಾದ ಜಾನಪದ ಕಲಾ ಪ್ರದರ್ಶನಗಳ ಅತಿದೊಡ್ಡ ಸಂಗ್ರಹವೆಂದು ಪರಿಗಣಿಸಲಾಗಿದೆ. ಜಾನಪದ ವಸ್ತುಸಂಗ್ರಹಾಲಯವುಮೈಸೂರು ಸುತ್ತಮುತ್ತಲಿನ ಪ್ರದೇಶದ ಹಳ್ಳಿಯ ಜೀವನ, ಸಾಂಪ್ರದಾಯಿಕ ಕರಕುಶಲ ಮತ್ತು ಜನರ ಕೆಲಸಗಳ ಉತ್ತಮ ಚಿತ್ರಣವನ್ನು ನೀಡುತ್ತದೆ.
ಶಿರಸಾಣಗಳು, ವೇಷಭೂಷಣಗಳು, ಬೊಂಬೆಗಳು, ಮನೆಗಳು ಮತ್ತು ದೇವಾಲಯಗಳ ಮಾದರಿಗಳು, ಗ್ರಾಮೀಣ ಆಭರಣಗಳು, ಲೋಹದ ಸಾಮಾನುಗಳು ಮತ್ತು ಗೃಹೋಪಯೋಗಿ ವಸ್ತುಗಳು ವಸ್ತು ಸಂಗ್ರಹಾಲಯದಲ್ಲಿ ಕೆಲವು ಪ್ರದರ್ಶನಗಳಾಗಿವೆ.ಪ್ರಸ್ತುತ ಈ ಅರಮನೆಯನ್ನು ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಕೇಂದ್ರ ಸರಕಾರದ ಅಧೀನಕ್ಕೆ ಒಳಪಡುವಂತೆ ಮಾಡುವನಿರ್ಧಾರವನ್ನು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
೨೦ವರ್ಷದಿಂದ ಕಟ್ಟಡಕ್ಕೆ ಸಂಬಂಧಿಸಿದಂತೆ ಯಾವುದೇ ನವೀಕರಣ ಕೆಲಸವಾಗಿರದ ಕಾರಣ ಮತ್ತು ನವೀಕರಣ ಮಾಡಿಸು ವಷ್ಟು ಹಣ ವಿಶ್ವವಿದ್ಯಾನಿಲಯದಲ್ಲೂ ಇಲ್ಲದಿರುವುದರಿಂದ, ನಂತರ ಸರಕಾರದ ವತಿಯಿಂದ ಸುಮಾರು ೨೮ ಕೋಟಿ ವೆಚ್ಚದಲ್ಲಿ ಈ ಕಟ್ಟಡವನ್ನು ನವೀಕರಿಸಿ, ಈ ಕಟ್ಟಡವನ್ನು ಸರಕಾರಕ್ಕೆ ೩೦ವರ್ಷಗಳ ಕಾಲ ಬೋಗ್ಯಕ್ಕೆ ನೀಡಿ. ಕಟ್ಟಡದ ಒಂದು ಭಾಗವನ್ನು ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ ಕಚೇರಿ ಮಾಡುವುದಾಗಿ ತೀರ್ಮಾನಿಸಲಾಗಿದೆ.
ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಇರುವ ಜಾಗದಲ್ಲೇ ಇರಲಿ. ಇಲ್ಲ ಅದಕ್ಕಾಗಿಯೇ ನೀಡಿರುವ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಮಾಡಲಿ. ಅದಕ್ಕೆ ಬೇಕಾದ ಹಣವನ್ನು ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಪಡೆಯಲಿ. ಪಾರಂಪರಿಕ ಕಟ್ಟಡವಾದ ಜೈಲಕ್ಷ್ಮಿ ಅರಮನೆ ಯಾವುದೇ ಕಾರಣಕ್ಕೂ ಸರಕಾರದ ಸುಪರ್ಧಿಗೆ ಒಳಪಡುಬಾರದು. ಈ ಬಗ್ಗೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗಮನ ಸೆಳೆಯುವ ಕೆಲಸ ಮಾಡುತ್ತೇನೆ. ಸಾಧ್ಯವಾದಲ್ಲಿ ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲೇರಲೂ ಸಿದ್ಧ.
-ಪ್ರೊ.ಪಿ.ವಿ. ನಂಜರಾಜ ಅರಸುಇತಿಹಾಸ ತಜ್ಞ, ಮೈಸೂರು
ಪ್ರತ್ಯೇಕ ಸ್ಥಳವೂ ನೀಡಲಾಗಿದೆ
ರಂಗಪ್ಪ ಅವರು ಉಪಕುಲಪತಿಗಳಾಗಿದ್ದ ಸಂದರ್ಭದಲ್ಲೇ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಗಾಗಿ ಪ್ರತ್ಯೇಕ ಸ್ಥಳವನ್ನು ನೀಡಲಾಗಿತ್ತು. ನಂತರ ಮಾನಸಗಂಗೋತ್ರಿಯಲ್ಲೇ ಸ್ಥಳಾವಕಾಶಕ್ಕಗಿ ಕೋರಿದ ಕಾರಣ, ವಿಶ್ವವಿದ್ಯಾನಿಲಯದ ಪರಾಂಗಣದವಿಶ್ವವಿದ್ಯಾನಿಲಯದ ಸಭಾಂಗಣದ ಪಕ್ಕದಲ್ಲೇ ೪ ಎಕ್ಕರೆ ಸ್ಥಳವನ್ನು ನೀಡಲಾಗಿದೆ.
ಸ್ಥಳೀಯರ ಆಕ್ರೋಶಅವಶ್ಯಕತೆ ಇದ್ದಲ್ಲಿ, ನೂತನವಾಗಿ ನಿರ್ಮಿಸಲಾಗಿರುವ ಜಿಲ್ಲಾಧಿಕಾರಿಗಳ ಕಚೇರಿ ಕಾಲಿ ಇದ್ದು, ಆ ಸ್ಥಳಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯನ್ನು ವರ್ಗಾವಣೆ ಮಾಡಿ, ಸರಕಾರದ ಕಟ್ಟಡವೇ ಆಗಿರುವ ಪ್ರಸ್ತುತ ಜಿಲ್ಲಾಧಿಕಾರಿ ಕಚೇರಿಯನ್ನು ಭಾರತೀಯಭಾಷೆಗಳ ಕೇಂದ್ರ ಸಂಸ್ಥೆಗೆ ನೀಡಲಿ. ಅಥವ ಈ ಸೆಂಸ್ಥೆಯ ಸೌಮತ ಕಟ್ಟಡದ ನಿರ್ಮಾಣಕ್ಕಾಗಿಯೇ ನೀಡಿರುವ ೪ಕ್ಕರೆ ಜಾಗದಲ್ಲಿ ನೂತನ ಕಟ್ಟಡವನ್ನೇ ನಿರ್ಮಾಣ ಮಾಡಲಿ ಎಂದು ಆಕ್ರೋಶ ವ್ಯಕ್ತವಾಗಿದೆ.
***
೨೦೦೧ ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಈ ಅರಮನೆಯನ್ನು ಇನೋಸಿಸ್ಮುಖ್ಯಸ್ಥೆ ಸುಧಾಮೂರ್ತಿ ಅವರು ಸಿಎಸ್‌ಆರ್ ಫಂಡ್‌ನಿಂದ ೨ಕೋಟಿ ವೆಚ್ಚದಲ್ಲಿ ನವೀಕರಿಸಿದರು.