ಒಕ್ಕಲಿಗರ ನಿಗಮ ಅಭಿವೃದ್ದಿಗೆ ಕೃಷ್ಣ ಪಕ್ಷ
ಕೊಟ್ಟ ಕುದುರೆ ಏರಲಾಗದ ಶೂರ ಶಾಸಕ, ಕುಂಟುತ್ತಿರುವ ನಿಗಮ
ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಒಕ್ಕಲುತನವನ್ನೇ ನಂಬಿ ಬದುಕುತ್ತಿರುವ ಸಮುದಾಯದ ಅಭ್ಯುದಯಕ್ಕೆ ಬಿಜೆಪಿ ಸರಕಾರ ಸ್ಥಾಪಿಸಿದ್ದ ‘ಒಕ್ಕಲಿಗರ ಅಭಿವೃದ್ಧಿ ನಿಗಮ’ದ ಮೇಲೆ ಈಗ ‘ಕೃಷ್ಣ ಪಕ್ಷ’ ಆವರಿಸಿದ್ದು, ಕತ್ತಲು ಕವಿಯುತ್ತಿದೆ.
ರಾಜ್ಯ ಸರಕಾರ ನಿಗಮಕ್ಕೆ ನೂತನ ಕಚೇರಿ, ಸಿಬ್ಬಂದಿ ಹಾಗೂ ಕೋಟ್ಯಂತರ ರುಪಾಯಿ ಅನುದಾನ ಎಲ್ಲ ಮೂಲ ಸೌಕರ್ಯ ಒದಗಿಸಿದ್ದರೂ ನಿಗಮ, ನಿರಾಸಕ್ತಿಯಿಂದ ಅಕ್ಷರಶಃ ಕುಂಟುವಂತಾಗಿದೆ. ನಿಗಮಕ್ಕೆ ಸೌಲಭ್ಯ ಒದಗಿಸುವ ಕಾರ್ಯಗಳು ತೆವಳುತ್ತಿದ್ದು, ಇದರಿಂದ ನಿಗಮದ ಅಧ್ಯಕ್ಷರು ಈಗ ಸಮುದಾಯ ಮುಖಂಡರ ಬಾಯಲ್ಲಿ ‘ಅದಕ್ಷರು’ ಎಂದೇ ಖ್ಯಾತರಾಗು ತ್ತಿದ್ದಾರೆ.
ಇದರೊಂದಿಗೆ ಸಮದಾಯಕ್ಕೆ ಸಿಕ್ಕ ನಿಗಮದ ಪ್ರಥಮ ಸಾರಥಿಯೇ ಸೋತು ಶರಣಾ ದಂತಾಗಿದೆ. ಕಾರಣ ಅಧ್ಯಕ್ಷರಿಂದ ರಾಜ್ಯ ಪ್ರವಾಸ, ಮುಖಂಡರ ಸಭೆಗಳು, ಕ್ರಿಯಾ ಯೋಜನೆಗಳು, ಮುಖ್ಯಮಂತ್ರಿ ಆಹ್ವಾನಿಸಿ ರಾಜ್ಯಮಟ್ಟದ ಕಾರ್ಯಕ್ರಮ ಮಾಡುವ ಯಾವುದೇ ಪ್ರಯತ್ನಗಳು ನಡೆದಿಲ್ಲ
ಹೀಗಾಗಿ ಈ ಅಧ್ಯಕ್ಷರ ಬದಲು ಬೇರೆಯವರಿಗೆ ಹೊಣೆ ನೀಡಿದ್ದರೆ ನಿಗಮವನ್ನು (ಜತೆಗೇ ಆರಂಭವಾದ ಸವಿತಾ ಸಮಾಜ, ಉಪ್ಪಾರ, ವಿಶ್ವಕರ್ಮ, ಬ್ರಾಹ್ಮಣರ) ಅಭಿವೃದ್ಧಿ ನಿಗಮಗಳಿಗೆ ಸರಿಸಮನಾಗಿ ಅಭಿವೃದ್ಧಿ ಮಾಡಬಹುದಿತ್ತು ಎನ್ನುವ ಅಭಿಪ್ರಾಯ ನಾನಾ ಸಂಘಟನೆಗಳ ಮುಖಂಡರದು.
ಹೊಸ ನಿಗಮದ ನೋವೇನು ?:ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜಾತಿ, ಜನಾಂಗವಾರ ಅಭಿವೃದ್ಧಿ ಸಾಧಿಸಬೇಕೆನ್ನುವ ನಿಟ್ಟಿನಲ್ಲಿ ಅನೇಕ ನಿಗಮಗಳನ್ನು ಆರಂಭಿಸಲಾಯಿತು. ಆಗಲೇ ಒಕ್ಕಲಿಗರು, ವಿಶ್ವಕರ್ಮ, ಉಪ್ಪಾರ, ಬ್ರಾಹ್ಮಣ, ವೀರಶೈವ ಮತ್ತು ಲಿಂಗಾಯತ ಸೇರಿದಂತೆ ಹಲವಾರು ನಿಗಮಗಳುಉಗವಾದವು. ಸಾಕಷ್ಟು ಅನುದಾನವನ್ನೂ ನೀಡಿತ್ತು. ಹಾಗೆ ನೋಡಿದರೆ, ಒಕ್ಕಲಿಗರ ಅಭಿವೃದ್ಧಿ ನಿಗಮಕ್ಕೆ ಇತರ ನಿಗಮಗಳಿಗಿಂತ ಹೆಚ್ಚಿನ ಅನುದಾನವೇ ಸಿಕ್ಕಿದೆ.
ಜೆ.ಸಿ.ರಸ್ತೆಯ ಯುನಿಟಿ ಕಟ್ಟಡದಲ್ಲಿ ಕಚೇರಿಯನ್ನೂ ನೀಡಿದೆ. ಸಿಬ್ಬಂದಿಯನ್ನೂ ನೇಮಿಸಿದೆ. ಆದರೆ ನಿಗಮದ ಸಾರಥಿ ಮಾತ್ರ ಸದ್ದಿಲ್ಲದಂತಾಗಿzರೆ. ಇದರಿಂದಾಗಿ ಸರಕಾರ ನಿಗಮಕ್ಕೆ ಒದಗಿಸಿರುವ 500 ಕೋಟಿ ರು.ಗಳ ಅನುದಾನ ಕೃಷ್ಣಾರ್ಪಣವಾಗುವುದೇ ಎನ್ನುವ ಆತಂಕ ಸಮುದಾಯದ ನಾಯಕರದ್ದಾಗಿದೆ.
ಏನಿದು ಒಕ್ಕಲಿಗರ ನಿಗಮದಲ್ಲಿ ಕೃಷ್ಣಲೆಕ್ಕ ?ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್ ಗೌಡ ಹೇಳುವಂತೆ ನಿಗಮದ ಅಧ್ಯಕ್ಷರಾದರವರು ಇಷ್ಟೊತ್ತಿಗಾಗಲೇ ರಾಜ್ಯ ಪ್ರವಾಸ ಮಾಡಬೇಕಿತ್ತು. ಸಮುದಾಯದ ನಾಯಕರು ಹಾಗೂ ಸಂಘಟನೆಗಳ ಮುಖಂಡರ ಸಭೆ ಕರೆದು ಸಲಹೆಗಳನ್ನು ಕೇಳಿ ಚರ್ಚಿಸ ಬೇಕಿತ್ತು. ಆದರೆ ಅವರು ತಮ್ಮ ಪ್ರದೇಶ ಮತ್ತು ಕಚೇರಿಗೆ ಸೀಮಿತವಾದಂತೆ ಕಾಣುತ್ತಿದೆ. ಅವರು ಸರಕಾರದ ಗೂಟದ ಕಾರಿಗೇ ಸಂಭ್ರಮಪಟ್ಟಂತೆ ಗೋಚರವಾಗುತ್ತಿದೆ.
ಇನ್ನು ಒಕ್ಕಲಿಗ ಸಮುದಾಯದ ಸಂಘಟನೆಯ ನಾಯಕ ಬಿ.ಕೃಷ್ಣೇಗೌಡ ಅವರು, ನಿಗಮದಲ್ಲಿರುವ ಸದಸ್ಯರು, ನಿರ್ದೇಶಕರುಬರೀಶಾಸಕ್ಕೆ ಇದ್ದಾರೋ ಏನೋ ಗೊತ್ತಿಲ್ಲ. ನಿಗಮ ನಿರೀಕ್ಷಿತ ರೀತಿಯಲ್ಲಿ ಇಲ್ಲ. ಇದರ ಬಗ್ಗೆ ನಿಗಮದ ಅಧ್ಯಕ್ಷರ ಗಮನಕ್ಕೆ ತರುತ್ತೇವೆ ಎನ್ನುತ್ತಾರೆ. ಒಟ್ಟಾರೆ ನಿಗಮದ ಅಧ್ಯಕ್ಷರು ಇತ್ತ ಶಾಸಕರಾಗಿ ಕ್ಷೇತ್ರಕ್ಕೂ ಸಮಯ ಕೊಡುತ್ತಿಲ್ಲ. ನಿಗಮಕ್ಕೂ ನ್ಯಾಯ ಕೊಡುತ್ತಿಲ್ಲ. ಹಾಗಾದರೆ ನಿಗಮಕ್ಕೆ ಸರಕಾರ ನೀಡಿರುವ ೧೫೦ಕೋಟಿ ಕೃಷ್ಣಾರ್ಪಣವೇ ಎನ್ನುವುದು ಸಂಘಟನೆಗಳ ಪ್ರಶ್ನೆಯಾಗಿದೆ.
ಅಧ್ಯಕ್ಷರಾದ ಕೃಷ್ಣಪ್ಪ ಈತನಕ ಒಂದೂ ಸಭೆಯನ್ನೂ ಕರೆದಿಲ್ಲ. ಒಕ್ಕಲಿಗರ ಸಂಘಕ್ಕೆ ಸದಸ್ಯತ್ವ ದ ಪ್ರಾತಿನಿಧ್ಯ ನೀಡಿ ಎಂದು ಕೇಳಿರುವುದಕ್ಕೂ ಸ್ಪಂದಿಸಿಲ್ಲ. ನಿರೀಕ್ಷಿತ ರೀತಿಯಲ್ಲಿ ವೇಗವಾಗಿ ಕೆಲಸ ಮಾಡುತ್ತಿಲ್ಲ. ಇನ್ನಾದರೂ ಸರಿಪಡಿಸಿಕೊಳ್ಳಲಿ.– ಸಿ.ಎನ್.ಬಾಲಕೃಷ್ಣ ಶಾಸಕ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ