ಐಷಾರಾಮಿ ಬದುಕಿಗಾಗಿ ಉಗ್ರ ಹಾದಿ
ಹೆಗ್ಗೆರೆ ರೇಣುಕಾರಾಧ್ಯ ಶಿವಮೊಗ್ಗ
ಜಿಲ್ಲಾ ಪೊಲೀಸರಿಂದ ಮಂಗಳವಾರ ಬಂಧಿತ ಶಿವಮೊಗ್ಗದ ಸೈಯದ್ ಯಾಸಿನ್ ಹಾಗೂ ಮಂಗಳೂರಿನ ಮಾಝಾ ಮುನೀರ್ ಅಹಮದ್ ಐಷಾರಾಮಿ ಜೀವನದ ಆಸೆಗೆ ಬಲೆ ಬಿದ್ದು ಉಗ್ರಗಾಮಿಗಳಾಗಲು ಮುಂದಾಗಿದ್ದ ಎಂಜಿನಿಯರಿಂಗ್ವಿದ್ಯಾರ್ಥಿಗಳು!
ಮಲೆನಾಡಿನಲ್ಲಿ ಬರುವ ದಿನಗಳಲ್ಲಿ ಬೃಹತ್ ಸ್ಫೋಟ ನಡೆಸಿ ನೂರಾರು ಜನರ ಮಾರಣಹೋಮ ಮಾಡಲು ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದ ತಂತ್ರಜ್ಞರು. ಇದಕ್ಕೆ ಹಣಕಾಸು ನೆರವು ಸಿಕ್ಕಿದ್ದು ಉಗ್ರಗಾಮಿ ಸಂಘಟನೆಯಿಂದ. ಇಸ್ಲಾಮಿಕ್ ಸ್ಟೇಟ್ಉಗ್ರ ಸಂಘಟನೆ(ಐಸಿಸ್)ಯ ಪರೋಕ್ಷ ಸಂಪರ್ಕದಲ್ಲಿಯೇ ಬಂಧಿತರಿಬ್ಬರೂ ಮುಂದಿನ ಹಂತದ ತರಬೇತಿಯಲ್ಲಿ ನಿರತ ರಾಗಿದ್ದರು.
ಇಂತಹ ಅನೇಕ ಸ್ಫೋಟಕ ಸಂಗತಿಗಳು ಪೊಲೀಸರ ತನಿಖೆಯಲ್ಲಿ ಬಹಿರಂಗಗೊಂಡಿವೆ. ಇವರೆಲ್ಲರನ್ನೂ ಹುರಿದುಂಬಿಸಿದ್ದು, ಮಾಸ್ಟರ್ ಮೈಂಡ್ ತೀರ್ಥಹಳ್ಳಿಯ ಸೊಪ್ಪೆ ಗುಡ್ಡೆಯ ನಿವಾಸಿ ಮಹಮದ್ ಶಾರಿಕ್ ಎಂಬುದು ಪೊಲೀಸ್ ಮೂಲಗಳ ಹೇಳಿಕೆ.
ಮೂರು ವರ್ಷಗಳ ತಯಾರಿ:ಮಹಮದ್ ಶಾರಿಕ್‌ಗೆ ಸೈಯದ್ ಯಾಸಿನ್ ಹಾಗೂ ಮುನೀರ್ ಅಹಮದ್ ಮೂರು ವರ್ಷಗಳಿಂದ ಪರಿಚಯ. ಈ ಮೂವರ ಪರಿಚಯ ಇನ್ನಷ್ಟು ಗಾಢವಾಗಿ ಬೆಳೆದದ್ದು ರಾಷ್ಟ್ರ ದ್ರೋಹದ ಚಿಂತನೆ ಎಂಬ ಒಂದೇಆಸಕ್ತಿಯ ಮೇಲೆ. ಯಾಸಿನ್ ಹಾಗೂ ಮುನೀರ್ಗೆ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಕುರಿತ ನಂಬಿಕೆ ನಿಧಾನವಾಗಿ ಗಾಢವಾಗುವಂತೆ ಮಾಡಿದ ಶಾರಿಕ್. ಅದಕ್ಕೆ ಸಂಬಂಧಿಸಿದ ಸಂಪರ್ಕಗಳನ್ನು ನೀಡುತ್ತ ಅವರನ್ನು ಅದರ ಬಲೆಯಲ್ಲಿ ನಿಧಾನವಾಗಿ ಬಿಳಿಸಿ ಕೊಂಡ. ನಂತರ ಅವರಿಗೆ ಐಷಾರಾಮಿ ಜೀವನದ ಕನಸನ್ನು ಬಿತ್ತಿ ತಿಂಗಳಿಗಿಷ್ಟು ಎಂದು ಹಣ ನೀಡುತ್ತ ಬಂದ.
ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಬಂದಾಗಲೆಲ್ಲ ಈತ ಅವರನ್ನು ವಿವಿಧ ಕೃತ್ಯಗಳನ್ನು ಹೇಗೆ ಎಸಗಬೇಕು ಎಂಬುದನ್ನು ಹೇಳಿಕೊಡುತ್ತಿದ್ದ. ಆದರೆ, ಮಾನಸಿಕವಾಗಿ ಅಂತಹ ಕೃತ್ಯಗಳಿಗೆ ಸಿದ್ಧರಿಲ್ಲ ಎಂಬುದು ಗೊತ್ತಾದ ಮೇಲೆ ಹಣ ನೀಡಿ ಅವರನ್ನು ಕೆಲಸ ಮಾಡುವಂತೆ ಪ್ರೇರೇಪಣೆ ಮಾಡಿದ್ದ ಎಂಬುದು ಮೂಲಗಳಿಂದ ಗೊತ್ತಾಗಿದೆ.
ಹಲವು ಕಡೆಗಳಲ್ಲಿ ಪರಿಶೀಲನೆ:ಮಂಗಳೂರು ಹಾಗೂ ಶಿವಮೊಗ್ಗ ನಗರದಲ್ಲಿ ಹಲವು ಕಡೆ ಬುಧವಾರ ವಿಶೇಷ ತನಿಖಾ ತಂಡ ದಾಳಿ ಮಾಡಿದೆ. ಮಂಗಳವಾರ ರಾತ್ರಿಯಿಂದಲೇ ಯಾಸಿನ್ ಗುರುತಿಸಿದ ಹಲವು ಮನೆಗಳ ಮೇಲೆ ದಾಳಿ ಮಾಡಲಾಗಿದೆ. ಆತನಿಗೆ ಪರಿಚಯ ಇದ್ದ ಹಾಗೂ ಅವನ ಸಂಪರ್ಕಕ್ಕೆ ಬಂದ ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ದಾಳಿಯಲ್ಲಿ ಕೆಲವರಮನೆಯಿಂದ ಸ್ಪೋಟಕಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅದನ್ನು ಯಾಸಿನ್ ತಂದಿಟ್ಟಿರಬಹುದು ಹಾಗೂ ಆತನಿಗೆ ಯಾರೆಲ್ಲಾ ಸಹಕಾರ ನೀಡಿದ್ದಾರೆ ಎಂಬ ವಿಚಾರವನ್ನು ಪರಿಶೀಲನೆ ನಡೆಸಿದ್ದಾರೆ.
ತಪ್ಪಿಸಿಕೊಂಡವನೇಕಿಂಗ್‌ಪಿನ್ತಪ್ಪಿಸಿಕೊಂಡಿರುವ ತೀರ್ಥಹಳ್ಳಿಯ ಮಹಮದ್ ಶಾರಿಕ್‌ನೇ ಸಂಚಿನ ಕಿಂಗ್‌ಪಿನ್. ಬಂಧಿತರಿಬ್ಬರಿಗೂ ಎಲ್ಲ ರೀತಿಯ ವ್ಯವಸ್ಥೆನೋಡಿಕೊಳ್ಳುತ್ತಿದ್ದ ಮನುಷ್ಯ. ಜತೆಗೆ ಕೇರಳ, ಹೈದರಬಾದ್ ಹಾಗೂ ಮುಂಬೈನಿಂದ ಆತ ತರಬೇತಿ ಪಡೆದಿದ್ದ ಅಂಶವನ್ನುಬಂಧಿತರಿಬ್ಬರು ಬಾಯ್ಬಿಟ್ಟಿದ್ದಾರೆ. ಹವಾಲ ಹಣದ ಮೂಲಕ ರಾಜ್ಯದ ನಾನಾ ಜಿಲ್ಲೆಯಲ್ಲಿ ಉಗ್ರಚಟುವಟಿಕೆಯ ಸ್ಲೀಪರ್ಸೆಲ್‌ಗಳನ್ನು ರಚನೆ ಮಾಡಿಕೊಂಡಿದ್ದು, ಇನ್ನೂ ಹಲವರು ನಾನಾ ಜಿಲ್ಲೆಯಲ್ಲಿ ಶಾರಿಕ್‌ನಂತೆ ಏಜೆಂಟರ್ ಕೆಲಸಮಾಡುತ್ತಿದ್ದಾರೆ ಎಂಬುದು ವಿಚಾರಣೆಯ ವೇಳೆ ಖಚಿತಪಟ್ಟಿದೆ.