  2024: ಯುವತಿಯರನ್ನು ಆಕರ್ಷಿಸಿದ ಓಣಂ ರೆಡಿಮೇಡ್‌ ಡಿಸೈನರ್‌ ವೇರ್ಸ್
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಓಣಂ ಹಬ್ಬದ ( ) ಸೀಸನ್‌ನಲ್ಲಿ ವೈವಿಧ್ಯಮಯ ಸ್ಟೈಲಿಶ್‌ ಆಗಿ ಕಾಣಿಸುವ ಡಿಸೈನರ್‌ವೇರ್‌ಗಳು (  2024) ಬಿಡುಗಡೆಗೊಂಡಿವೆ. ಯುವತಿಯರನ್ನು ಸಿಂಗರಿಸುತ್ತಿವೆ. ಓಣಂ ಸೀರೆ () ಬೇಡ ಅಥವಾ ಟ್ರೆಡಿಷನಲ್‌ ಆಗಿ ಉಡಲು ಕಷ್ಟ, ಇಲ್ಲವೇ ಸಮಯವಿಲ್ಲ ಎನ್ನುವ ಯುವತಿಯರಿಗೆಂದೇ ನಾನಾ ಬಗೆಯ ರೆಡಿಮೇಡ್‌ ಎಥ್ನಿಕ್‌ವೇರ್‌ಗಳು ( ) ಹಾಗೂ ಓಣಂ ಡಿಸೈನರ್‌ವೇರ್‌ಗಳೆಂದೇ ಹೆಸರು ಪಡೆದ ಔಟ್‌ಫಿಟ್‌ಗಳು ಮಾರುಕಟ್ಟೆಗೆ ಆಗಮಿಸಿವೆ. ಹೆಚ್ಚು ಸಮಯ ವ್ಯಯ ಮಾಡದೇ, ಯಾರೂ ಬೇಕಾದರೂ ಓಣಂ ಲುಕ್‌ ಪಡೆಯಬಹುದಾದಂತಹ ಈ ಉಡುಪುಗಳು ಸದ್ಯ ಟ್ರೆಂಡ್‌ () ಲಿಸ್ಟ್‌ಗೆ ಸೇರಿವೆ. ಅತಿ ಸುಲಭವಾಗಿ ಹಬ್ಬದ ಲುಕ್‌ ನೀಡುವಂತಹ ಈ ಡಿಸೈನರ್‌ವೇರ್‌ಗಳು ಸದ್ಯ ಹುಡುಗಿಯರ ಮನ ಗೆದ್ದಿವೆ ಎನ್ನುತ್ತಾರೆ ಕೇರಳ ಮೂಲದ ಡಿಸೈನರ್‌ಗಳಾದ ರಚಿತಾ ಹಾಗೂ ರಾಧಿಕಾ.
ಇದೀಗ ಹಿಂದಿನ ಕಾಲದಂತೆ ಓಣಂ ಸೀರೆಯೇ ಉಡಬೇಕೆಂಬ ಡ್ರೆಸ್‌ಕೋಡ್‌ ಈ ಹಬ್ಬದಲ್ಲಿಲ್ಲ. ಬದಲಿಗೆ ಓಣಂನ ಹಬ್ಬದ ಲುಕ್‌ನಲ್ಲಿ ಕಾಣಿಸಿಕೊಂಡರೇ ಸಾಕು! ಈ ಜನರೇಷನ್‌ನ ಹುಡುಗಿಯರು ಹಾಗೂ ಮಕ್ಕಳು ಈ ಹಬ್ಬಕ್ಕೆ ಮ್ಯಾಚ್‌ ಆಗುವಂತಹ ಡಿಸೈನರ್‌ವೇರ್‌ ಧರಿಸಿದರೇ ಸಾಕು! ಎಂಬ ಮನೋಭಾವ ಮನೆಯ ಹಿರಿಯರಲ್ಲಿ ಮೂಡಿರುವುದು, ಈ ಉಡುಗೆಗಳು ಹೆಚ್ಚು ಬೇಡಿಕೆ ಸೃಷ್ಠಿಸಿಕೊಳ್ಳಲು ಕಾರಣವಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಉದ್ದನೆಯ ಎಥ್ನಿಕ್‌ ಗೌನ್‌, ಬಾರ್ಡರ್‌ ಗೌನ್‌, ಓಣಂ ಡ್ರೆಸ್‌ಗಳಲ್ಲಿ ಲಾಂಗ್‌ ಲಂಗ, ಹಾಫ್‌ ವೈಟ್‌, ಕ್ರೀಮ್‌ ಬಣ್ಣದ ಗೋಲ್ಡನ್‌ ಬಾರ್ಡರ್‌ನ ಲಂಗ-ದಾವಣಿ, ಲೆಹೆಂಗಾ ಶೈಲಿಯ ಉಡುಗೆ, ತ್ರೀ ಪೀಸ್‌ ಓಣಂ ಔಟ್‌ಫಿಟ್ಸ್, ಅನಾರ್ಕಲಿ ಶೈಲಿಯ ಲಾಂಗ್‌ ಬಾರ್ಡರ್ ಲಂಗ, ಗೋಲ್ಡನ್‌ ಹಾಗೂ ಸಿಲ್ವರ್‌ ಝರಿಯ ಉದ್ದ-ಲಂಗ ಸೇರಿದಂತೆ ನಾನಾ ಬಗೆಯವು ಈ ಹಬ್ಬದ ಸೀಸನ್‌ನಲ್ಲಿ ಲಗ್ಗೆ ಇಟ್ಟಿವೆ. ಯುವತಿಯರನ್ನು ಮಾತ್ರವಲ್ಲ, ಚಿಕ್ಕ ಹೆಣ್ಣು ಮಕ್ಕಳನ್ನು ಆಕರ್ಷಿಸುತ್ತಿವೆ ಹಾಗೂ ಎಲ್ಲರಿಗೂ ಪ್ರಿಯವಾಗಿವೆ ಎನ್ನುತ್ತಾರೆ ಡಿಸೈನರ್‌ ಶ್ರೀ ವಾರಿಯರ್‌.
ಈ ಸುದ್ದಿಯನ್ನೂ ಓದಿ | : ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌; ರಿಲಯನ್ಸ್‌ ಫೌಂಡೇಷನ್‌ನಿಂದ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನ
ಈ ಉಡುಗೆಗಳಿಗೆ ಕಂಪ್ಲೀಟ್‌ ಎಥ್ನಿಕ್‌ ಲುಕ್‌ ನೀಡಿ.ಮೇಕಪ್‌ ಕೇರಳಿಯನ್ಸ್ ಲುಕ್‌ ನೀಡುವಂತಿರಲಿ.ಹೂವು ಮುಡಿದಲ್ಲಿ ಆಕರ್ಷಕವಾಗಿ ಕಾಣಿಸುವುದು.ಬಂಗಾರದ ಅಥವಾ ಟ್ರೆಡಿಷನಲ್‌ ಆಭರಣಗಳನ್ನು ಧರಿಸಿ.
(ಲೇಖಕಿ: ಫ್ಯಾಷನ್‌ ಪತ್ರಕರ್ತೆ)