  : ಭಾಷೆ-ಗಡಿಯ ಹಂಗಿಲ್ಲದೆ ಎಥ್ನಿಕ್‌ವೇರ್‌ನಲ್ಲಿ ಸೆಲೆಬ್ರಿಟಿಗಳ ಓಣಂ ಸಂಭ್ರಮ
-ಶೀಲಾ ಸಿ. ಶೆಟ್ಟಿ,ಬೆಂಗಳೂರು
ಸಾಂಪ್ರದಾಯಿಕ ಉಡುಗೆ ಹಾಗೂ ಸೀರೆಗಳಲ್ಲಿ ನಾನಾ ಕ್ಷೇತ್ರದ ತಾರೆಯರು ಹಾಗೂ ಸೆಲೆಬ್ರಿಟಿಗಳು ಓಣಂ ಹಬ್ಬವನ್ನು ಸಡಗರ –ಸಂಭ್ರಮದಿಂದ (  ) ಆಚರಿಸಿದರು. ಪ್ರತಿ ಬಾರಿಯಂತೆ ಈ ಬಾರಿಯೂ ವೈವಿಧ್ಯಮಯ ಟ್ರೆಡಿಷನಲ್‌ವೇರ್‌ನಲ್ಲಿ ಕಾಣಿಸಿಕೊಂಡ ಸೌತ್‌ ಇಂಡಿಯನ್‌ ತಾರೆಯರು (  ), ಅಷ್ಟ್ಯಾಕೆ? ಸ್ಯಾಂಡಲ್‌ವುಡ್‌ನ () ನಟ-ನಟಿಯರು ಹಾಗೂ ಫ್ಯಾಷನ್‌ () ಕ್ಷೇತ್ರದ ಮಾಡೆಲ್‌ಗಳು, ಡಿಸೈನರ್‌ಗಳು ತಮ್ಮದೇ ಆದ ಡಿಸೈನರ್‌ವೇರ್‌ನಲ್ಲಿ () ಕಾಣಿಸಿಕೊಂಡು, ಹಬ್ಬವನ್ನು ಆಚರಿಸಿದರು.
ಸ್ಯಾಂಡಲ್‌ವುಡ್‌ ನಟ ರಿಷಬ್‌ ಶೆಟ್ಟಿ ತಮ್ಮ ಪತ್ನಿ ಸಮೇತ ಓಣಂ ಲುಕ್‌ನಲ್ಲಿ ಕಾಣಿಸಿಕೊಂಡು ಸಂಭ್ರಮಿಸಿದರೆ, ನಟಿ ಶೃತಿ ಹರಿಹರನ್‌, ನಿತ್ಯಾ ಮೆನನ್‌, ಶಿಲ್ಪಾ ಮಂಜುನಾಥ್‌, ಇತಿ ಆಚಾರ್ಯ, ಭೂಮಿಕಾ, ಬಾಲ ನಟಿಯರಾದ ಅನ್ಯಾ ಶೆಟ್ಟಿ, ಅಂಕಿತಾ ಜಯರಾಂ ಹಾಫ್‌ ವೈಟ್‌, ಮಿಕ್ಸ್ ಮ್ಯಾಚ್‌ ಓಣಂ ಕಂಟೆಂಪರರಿ ಉಡುಗೆ ಹಾಗೂ ಟ್ರೆಡಿಷನಲ್‌ ಸೀರೆಗಳಲ್ಲಿ ಕಾಣಿಸಿಕೊಂಡರು.
ಇನ್ನು, ದಕ್ಷಿಣ ಭಾರತ ಚಿತ್ರರಂಗದ ನಟಿಯರಾದ ಪಾರೋ ನಾಯರ್‌, ಮಂಜು ವಾರಿಯರ್‌, ಪ್ರಿಯಾ ವಾರಿಯರ್‌, ಶಮ್ನಾ ಕಾಸೀಮ್‌, ಪ್ರಿಯಾಮಣಿ, ಭಾವನಾ, ಇತಿ ಆಚಾರ್ಯಾ, ಅನುಪಮಾ ಪರಮೇಸ್ವರನ್‌ ಸೇರಿದಂತೆ ಸಾಕಷ್ಟು ತಾರೆಯರು ಕೇರಳ ಮೂಲದ ಟ್ರೆಡಿಷನಲ್‌ವೇರ್‌ ಹಾಗೂ ಸೀರೆಯಲ್ಲಿ ಹಬ್ಬವನ್ನು ಸೆಲೆಬ್ರೇಟ್‌ ಮಾಡಿದರು.
ಸಾನಿಯಾ ಅಯ್ಯಪ್ಪನ್‌ ಸೇರಿದಂತೆ ಸಾಕಷ್ಟು ನಟಿಯರು ನೆರಿಯುಟ್ಟುಮ್‌ ಟು ಪೀಸ್‌ ಸೀರೆಯಲ್ಲಿ ಕಾಣಿಸಿಕೊಂಡರೆ, ಇತಿ, ನಿಖಿಲಾ ವಿಮಲ್‌, ಕಲ್ಯಾಣಿ ಹಾಗೂ ಅಮಲಾ ಪೌಲ್‌ನಂತವರು ಶ್ವೇತ ವರ್ಣದ ಹಾಗೂ ಐವರಿ ಶೇಡ್‌ನ ಗೋಲ್ಡನ್‌ ಬಾರ್ಡರ್‌ನ ಕಸವು ಹಾಗೂ ಕಾಟನ್‌ ಸೀರೆಯಲ್ಲಿ ಕಾಣಿಸಿಕೊಂಡರು.
ನಟರ ವಿಷಯಕ್ಕೆ ಬಂದಲ್ಲಿ, ಮಲಾಯಳಂ ಚಿತ್ರರಂಗದ ನಟರು ಮಾತ್ರವಲ್ಲ, ದಕ್ಷಿಣ ಭಾರತದ ಇತರೆ ಭಾಷೆಯ ನಟರು ಕೂಡ ಎಥ್ನಿಕ್‌ ಉಡುಗೆಯಲ್ಲಿ ಕಾಣಿಸಿಕೊಂಡರು.
ಈ ಸುದ್ದಿಯನ್ನೂ ಓದಿ | : 250 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ; ಅಪ್ಲೈ ಮಾಡುವ ವಿಧಾನ ಇಲ್ಲಿದೆ
ಮಾಡೆಲ್‌ ಸಿಯಾ, ರಾಕಿ, ದೀಪ್ತಿ ಮೋಹನ್‌, ಶುಭಾ, ಚಂದನಾ, ನೀಲಾಚಾರಿ, ಸಂತೋಷ್‌ ರೆಡ್ಡಿ, ಸಂಗೀತಾ ಹೊಳ್ಳ ಸೇರಿದಂತೆ ಸಾಕಷ್ಟು ರೂಪದರ್ಶಿಯರು ಹಾಗೂ ಡಿಸೈನರ್ಸ್ ತಮ್ಮದೇ ಆದ ಡಿಸೈನರ್‌ವೇರ್‌ನಲ್ಲಿ ಆಚರಿಸಿದರು.
(ಲೇಖಕಿ ಫ್ಯಾಷನ್‌ ಪತ್ರಕರ್ತೆ)