  : ಮಿಲಾನ್‌ ಫ್ಯಾಷನ್‌ ವೀಕ್‌‌‌ನಲ್ಲಿ ಹೀಗಿತ್ತು ನಟಿ ತಮನ್ನಾ ಬಾಟಿಯಾ ಲುಕ್‌!
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಿಲಾನ್‌ ಫ್ಯಾಷನ್‌ ವೀಕ್‌ನಲ್ಲಿ (  ) ಭಾಗವಹಿಸುವುದರ ಮೂಲಕ ಬಾಲಿವುಡ್‌ ನಟಿ ತಮನ್ನಾ ಬಾಟಿಯಾ ( ), ತಮ್ಮ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿದ್ದಾರಂತೆ. ಹೌದು. ಪ್ರತಿಷ್ಠಿತ ಮಿಲಾನ್‌ ಫ್ಯಾಷನ್‌ ವೀಕ್‌ನಲ್ಲಿ ಭಾಗವಹಿಸುವ ಕನಸು ಕೇವಲ ಮಾಡೆಲ್‌ಗಳಿಗೆ ಮಾತ್ರವಲ್ಲ, ನಟ-ನಟಿಯರಿಗೂ ಇರುತ್ತದೆ. ಅದರಲ್ಲೂ ತಮಗಿಷ್ಟವಾದ ಡಿಸೈನರ್‌ () ಅಥವಾ ಬ್ರಾಂಡ್‌ನ ಡಿಸೈನರ್‌ವೇರ್‌ ಧರಿಸಿ ವಾಕ್‌ ಮಾಡುವುದು ನಟಿಯರ ಅದೃಷ್ಠವೇ ಸರಿ!
ಒಮ್ಮೆಯಾದರೂ ಮಿಲಾನ್‌ ಫ್ಯಾಷನ್‌ ವೀಕ್‌ನಲ್ಲಿ ಪಾಲ್ಗೊಳ್ಳಬೇಕೆಂದು ಕನಸು ಹೊಂದಿದ್ದ ನಟಿ ತಮನ್ನಾ, ಅವರ ಈ ಕನಸು ಇದೀಗ ನನಸಾಗಿದೆ. ಇದನ್ನು ಖುದ್ದು ಅವರೇ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ಅಲ್ಲದೇ, ತಮ್ಮ ಫೇವರೇಟ್‌ ಡಿಸೈನರ್‌ ರಾಬೆರ್ಟೊ ಅವರ ಹೈ ಫ್ಯಾಷನ್‌ ಡಿಸೈನರ್‌ವೇರ್‌ನಲ್ಲಿ ಕಾಣಿಸಿಕೊಂಡು ಹೆಮ್ಮೆಯಿಂದ ಹೆಜ್ಜೆ ಹಾಕಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ನಂತರ ಮಿಲಾನ್‌ ಫ್ಯಾಷನ್‌ ವೀಕ್‌ನಲ್ಲಿ ಸುದ್ದಿಯಾಗಿರುವುದು ತಮನ್ನಾ. ಅದರಲ್ಲೂ ಅವರು ಧರಿಸಿರುವ ಔಟ್‌ಫಿಟ್‌ ಕೊಂಚ ನಿಬ್ಬೆರಗಾಗಿಸುವಂತಿತ್ತು. ವಿಭಿನ್ನವಾಗಿತ್ತು. ರಾಬೆರ್ಟೊ ಡಿಸೈನ್‌ನ ಈ ಡ್ರೆಸ್‌ ಫ್ಯಾಬ್ರಿಕ್‌, ಫೇಕ್‌ ಲೆದರ್‌ನಿಂದ ಡಿಸೈನ್‌ ಮಾಡಲಾಗಿತ್ತು. ಅಲ್ಲದೇ ಫೇಕ್‌ ಫರ್‌ ಕೂಡ ಈ ಡ್ರೆಸ್‌ ವಿನ್ಯಾಸಕ್ಕೆ ಬಳಸಲಾಗಿದೆ. ಅರ್ತಿ ಶೇಡ್‌ ಜತೆಗೆ ಬ್ರೌನ್‌ ಹಾಗೂ ವೈಟ್‌ ಅಬ್‌ಸ್ಟ್ರಾಕ್ಟ್‌ ಪ್ರಿಂಟ್ಸ್‌ ಇರುವಂತಹ ಜಂಪ್‌ಸೂಟ್‌ ಇದಾಗಿದ್ದು, ಎಕ್ಸ್‌ಕ್ಲೂಸೀವ್‌ ವಿನ್ಯಾಸ ಹೊಂದಿದೆ. ಇನ್ನು, ವೀ ನೆಕ್‌ಲೈನ್‌ ಜತೆಗೆ ತಮನ್ನಾರ ಫೆಮಿನೈನ್‌ ಲುಕ್‌ಗೆ ಈ ಔಟ್‌ಫಿಟ್‌ ಸಾಥ್‌ ನೀಡಿತ್ತು. ಇದು ತಮನ್ನಾ ಅವರನ್ನು ಸ್ಟ್ರಾಂಗ್‌ ವುಮೆನ್‌ನಂತೆ ಬಿಂಬಿಸಿತು ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಲೆಜೆಂಡರಿ ಡಿಸೈನರ್‌ ಡಿಸೈನ್‌ ಮಾಡಿದ ಔಟ್‌ಫಿಟ್‌ ಧರಿಸುವುದು ನನಗೆ ಹೆಮ್ಮೆಯ ವಿಚಾರ. ಅದರಲ್ಲೂ ರಾಬೆರ್ಟೊ ಅವರ ಒಂದೊಂದು ಡಿಸೈನ್‌ ಕೂಡ ಫ್ಯಾಷನ್‌ಲೋಕದಲ್ಲಿ ಮಾದರಿಯಾಗಿವೆ. ಅಂತಹ ಡಿಸೈನರ್‌ ಉಡುಗೆ ಧರಿಸಿದಾಗ ಆಕಾಶವೇ ಕೈಗೆ ಸಿಕ್ಕಿದಂತಾಯಿತು ಎಂದು ತಮನ್ನಾ ಸಂತಸದಿಂದ ಹೇಳಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ |  : ಕ್ರಿಕೆಟರ್ಸ್‌ ಫಾರ್‌ ಕನ್ಸರ್ವೇಶನ್ ಸಂಸ್ಥೆಯಿಂದ ನಾಳೆ ವನ್ಯಜೀವಿ ಸೇವಾ ಪ್ರಶಸ್ತಿಗಳ ವಿತರಣೆ
ಇನ್ನು, ತಮನ್ನಾ ಸಿನಿಮಾಗಳಲ್ಲಿ ಮಾತ್ರವಲ್ಲ, ಫ್ಯಾಷನ್‌ ಲೋಕದಲ್ಲಿಯೂ ಕೂಡ ಆಕರ್ಷಕವಾಗಿ ಕಾಣಿಸುತ್ತಿದ್ದಾರೆ. ಅದರಲ್ಲೂ ಮಿಲಾನ್‌ ಫ್ಯಾಷನ್‌ ವೀಕ್‌ನಲ್ಲಿ ವೆಸ್ಟರ್ನ್‌ ಮಾಡೆಲ್‌ಗಳಂತೆಯೇ ಕಾಣಿಸಿಕೊಂಡಿದ್ದಾರೆ. ಅವರ ಈ ಪ್ರಯೋಗಾತ್ಮಕ ಡಿಸೈನರ್‌ವೇರ್ ಅವರನ್ನು ವಿಭಿನ್ನವಾಗಿ ಬಿಂಬಿಸಿದೆ ಎಂದಿದ್ದಾರೆ ಫ್ಯಾಷನಿಸ್ಟ್‌ಗಳು.
(ಲೇಖಕಿ ಫ್ಯಾಷನ್‌ ಪತ್ರಕರ್ತೆ)