 : ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಲೇಟೆಸ್ಟ್ ಫ್ಯಾಷನ್ ಲುಕ್ ಹೀಗಿದೆ!
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಾಯಲ್‌ ಬ್ಲ್ಯೂ ಕಲರ್‌ನ ಮೆನ್ಸ್ ಕೋ ಆರ್ಡ್ ಸೆಟ್‌ ಫ್ಯಾಷನ್‌ಗೆ ( ) ಬಿಗ್‌ಬಾಸ್‌ ವಿನ್ನರ್‌ (  ) ಹಾಗೂ ನಟ ಕಾರ್ತಿಕ್‌ ( )  ಸೈ ಎಂದಿದ್ದಾರೆ. ವೈಬ್ರೆಂಟ್‌ ಆಗಿ ಕಾಣಿಸುವ ರಾಯಲ್‌ ಬ್ಲ್ಯೂ ಕಲರ್‌ನ ಈ ಮೆನ್ಸ್ ಕೋ ಆರ್ಡ್ ಸೆಟ್‌ ಔಟ್‌ಫಿಟ್‌ ತಕ್ಷಣಕ್ಕೆ ನೋಡಲು ಕಾರ್ಪೆಂಟರ್‌ ಪ್ಯಾಂಟ್‌ ಜಾಕೆಟ್‌ ಕೋ ಆರ್ಡ್ ಸೆಟ್‌ ಎಂದೆನಿಸಿದರೂ, ಬಾಲಿವುಡ್‌ನಲ್ಲಿ ಇದನ್ನು ಮೆನ್ಸ್ ಬೈಕರ್‌ ಫ್ಯಾಷನ್‌ ಡ್ರೆಸ್‌ಕೋಡ್‌ನಲ್ಲಿ ಸೇರಿಸಲಾಗಿದೆ. ಒಂದಿಷ್ಟು ವಿನ್ಯಾಸ ಹಾಗೂ ಸ್ಟಿಚ್ಚಿಂಗ್‌ ಬದಲಾವಣೆಯು ಇಡೀ ಔಟ್‌ಫಿಟ್‌ ಹೆಸರು ಬದಲಿಸುತ್ತದೆ. ಹಾಗಾಗಿ ಆಯಾ ನಟರು ಧರಿಸುವ ಔಟ್‌ಫಿಟ್‌ ಹಾಗೂ ಅವರ ಸ್ಟೈಲಿಂಗ್‌ಗೆ ತಕ್ಕಂತೆ ಬದಲಾಗುತ್ತದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.
ಬಿಗ್‌ ಬಾಸ್‌ ವಿನ್ನರ್‌ ಕಾರ್ತಿಕ್‌ ತೀರಾ ಸಿಂಪಲ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ ಹೊಂದಿದ ನಟ. ರಿಯಾಲಿಟಿ ಶೋ ನಂತರ ತಮ್ಮ ಸ್ಟೈಲ್‌ ಹಾಗೂ ಫ್ಯಾಷನ್‌ ಲುಕ್‌ಗಳಲ್ಲಿ ಸಾಕಷ್ಟು ಬದಲಾವಣೆ ತಂದುಕೊಂಡಿದ್ದಾರೆ. ಒಂದಿಷ್ಟು ಹೊಸ ಡಿಸೈನರ್‌ವೇರ್‌ಗಳನ್ನು ಧರಿಸಿ, ಪ್ರಯೋಗಾತ್ಮಕ ಲುಕ್ಸ್ ಟ್ರೈ ಮಾಡುತ್ತಿದ್ದಾರೆ. ಇದು ಅಗತ್ಯ ಕೂಡ ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರು.
ಇನ್ನು, ಕಾರ್ತಿಕ್‌ ಕೂಡ ಅಷ್ಟೇ, ಇತ್ತೀಚೆಗೆ ಆಯಾ ಸಂದರ್ಭಕ್ಕೆ ಅನುಗುಣವಾಗಿ ಡ್ರೆಸ್‌ಕೋಡ್‌ಗಳಲ್ಲಿ ಆಕರ್ಷಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮೆನ್ಸ್ ಸ್ಟೈಲಿಸ್ಟ್ ಜೀತು ಅವರ ಪ್ರಕಾರ, ಇದು ಫ್ಯಾಷನ್‌ ಪ್ರಿಯ ಯುವಕರನ್ನು ಸೆಳೆಯಲು ಕಾರಣವಾಗಿದೆಯಂತೆ.
ರಾಯಲ್‌ ಬ್ಲ್ಯೂ ಕೋ ಆರ್ಡ್ ಸೆಟ್‌ನಲ್ಲಿ ಕಾರ್ತಿಕ್‌ ತಕ್ಷಣಕ್ಕೆ ರ‍್ಯಾಪರ್‌ನಂತೆ ಕಾಣಿಸುತ್ತಿದ್ದಾರೆ. ಹೆಚ್ಚೇನೂ ಸ್ಟೈಲಿಂಗ್‌ ಕಾನ್ಸೆಪ್ಟ್‌ ಬಳಸದೇ ಕೇವಲ ಔಟ್‌ಫಿಟ್‌ ಹಾಗೂ ಒಂದು ಸನ್‌ಗ್ಲಾಸ್‌ ಧರಿಸುವ ಮೂಲಕ ತಮ್ಮದೇ ಆದ ಫ್ಯಾಷನ್‌ ಸ್ಟೇಟ್‌ಮೆಂಟ್‌ನಲ್ಲಿ ಹ್ಯಾಂಡ್‌ಸಮ್‌ ಆಗಿ ಕಾಣಿಸುತ್ತಿದ್ದಾರೆ ಎಂದಿದ್ದಾರೆ ನೆಟ್ಟಿಗರು.
ಈ ಸುದ್ದಿಯನ್ನೂ ಓದಿ |  : ಮಿಲಾನ್‌ ಫ್ಯಾಷನ್‌ ವೀಕ್‌‌‌ನಲ್ಲಿ ಹೀಗಿತ್ತು ನಟಿ ತಮನ್ನಾ ಬಾಟಿಯಾ ಲುಕ್‌!
ಪರ್ಸರ್ನಾಲಿಟಿಗೆ ಹೊಂದುವಂತ ಕೋ ಆರ್ಡ್‌ ಸೆಟ್‌ ಧರಿಸಿ.ಸನ್‌ಗ್ಲಾಸ್‌ ಮಾರ್ಡನ್ ಟಚ್‌ ನೀಡುತ್ತದೆ.ಡ್ರೆಸ್‌ಕೋಡ್‌ಗೆ ತಕ್ಕಂತೆ ನಿಮ್ಮ ಸ್ಟೈಲಿಂಗ್‌ ಇರಲಿ.
(ಲೇಖಕಿ ಫ್ಯಾಷನ್‌ ಪತ್ರಕರ್ತೆ)