 : ಬ್ಲ್ಯಾಕ್‌ ಶೀರ್‌ ಸೀರೆಯಲ್ಲಿ ನಟಿ, ಮಾಜಿ ಮಿಸ್‌ ಕರ್ನಾಟಕ ಶಿಲ್ಪಾ ಮಂಜುನಾಥ್‌ ಗ್ಲಾಮರಸ್‌ ಲುಕ್!
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ಯಾಂಡಲ್‌ವುಡ್‌ ನಟಿ ( ), ಮಾಜಿ ಮಿಸ್‌ ಕರ್ನಾಟಕ ಶಿಲ್ಪಾ ಮಂಜುನಾಥ್‌ ( ) ಬ್ಲ್ಯಾಕ್‌ ಶೇಡ್‌ನ ಪಾರದರ್ಶಕ ಸೀರೆಯಲ್ಲಿ ಮಿಂಚಿದ್ದಾರೆ. ಪಾರ್ಟಿವೇರ್‌ ನೆಟ್ಟೆಡ್‌ ಫ್ಯಾಬ್ರಿಕ್‌ನ ಬ್ಲ್ಯಾಕ್‌ ಶೇಡ್‌ ಹೊಂದಿರುವ ಈ ಅತ್ಯಾಕರ್ಷಕವಾದ ಟ್ರಾನ್ಸಪರೆಂಟ್‌ ಶೀರ್‌ ಸೀರೆ, ನಟಿ ಶಿಲ್ಪಾ ಮಂಜುನಾಥ್‌ ( ) ಅವರನ್ನು ಗ್ಲಾಮರಸ್‌ ಆಗಿ ಬಿಂಬಿಸಿದೆ.
ಅಂದಹಾಗೆ, ನಟಿ ಶಿಲ್ಪಾ ಮಂಜುನಾಥ್‌ ಮೂಲತಃ ಮಾಡೆಲ್‌. ಎಂಜಿನಿಯರಿಂಗ್‌ ವ್ಯಾಸಂಗ ಮಾಡುವಾಗಲೇ ಮಿಸ್‌ ಕರ್ನಾಟಕ ಆಗಿದ್ದವರು. ನಂತರ ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದರು. ಇದೀಗ ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆಗಾಗ್ಗೆ ಫ್ಯಾಷೆನಬಲ್‌ ಆಗಿ ಕಾಣಿಸಿಕೊಳ್ಳುವ ಇವರು, ಕೇವಲ ಗ್ಲಾಮರಸ್‌ ಔಟ್‌ಫಿಟ್‌ಗಳಲ್ಲಿ ಮಾತ್ರವಲ್ಲ, ಸಾಂಪ್ರದಾಯಿಕ ಉಡುಗೆಗಳಲ್ಲೂ ಕಾಣಿಸಿಕೊಂಡು ಅಭಿಮಾನಿಗಳನ್ನು ಸೆಳೆಯುತ್ತಿರುತ್ತಾರೆ.
ನನಗಂತೂ ಸೀರೆಗಳು ಮೊದಲಿನಿಂದಲೂ ಇಷ್ಟ. ಆದರೆ, ಹೆಚ್ಚಾಗಿ ವೆಸ್ಟರ್ನ್‌ ಔಟ್‌ಫಿಟ್‌ಗಳಲ್ಲಿ ನಾನು ಕಾಣಿಸಿಕೊಳ್ಳುತ್ತಿರುತ್ತೇನೆ. ಇನ್ನು, ಸಂದರ್ಭಕ್ಕೆ ತಕ್ಕಂತೆ ಉಡುಗೆ-ತೊಡುಗೆಗಳ ಆಯ್ಕೆ ಮಾಡುತ್ತೇನೆ. ಪ್ರತಿಯೊಂದರಲ್ಲೂ ಹೊಸತನ್ನು ಬಯಸುವ ನನಗೆ ಫ್ಯಾಷನ್‌ ಹಾಗೂ ಸ್ಟೈಲಿಂಗ್‌, ನಾಣ್ಯದ ಎರಡು ಮುಖಗಳಿದ್ದಂತೆ ಎನ್ನುತ್ತಾರೆ.
ಇನ್ನು, ನಾನು ಧರಿಸಿರುವ ಈ ಬ್ಲ್ಯಾಕ್‌ ಸೀರೆಗೆ ಈಗಾಗಲೇ ಸಾಕಷ್ಟು ಪ್ರಶಂಸೆಯ ಸುರಿಮಳೆ ಸಿಕ್ಕಿದೆ. ಸೀರೆಯಲ್ಲೂ ಗ್ಲಾಮರಸ್‌ ಆಗಿ ಕಾಣಿಸಬಹುದು ಎಂಬುದನ್ನು ಮತ್ತೆ ಪ್ರೂವ್‌ ಮಾಡಿದೆ ಎನ್ನುತ್ತಾರೆ.
ಇಂದಿನ ದಿನಗಳಲ್ಲಿ ಸಾಕಷ್ಟು ಟ್ರೆಂಡಿಯಾಗಿರುವ ಶೀರ್‌ ನೆಟ್ಟೆಡ್‌ ಸೀರೆಗಳು ಈ ಸೀಸನ್‌ನ ಪಾರ್ಟಿವೇರ್‌ ಕೆಟಗರಿಯಲ್ಲಿವೆ. ನೋಡಲು ಗ್ಲಾಮರಸ್‌ ಲುಕ್‌ ನೀಡುತ್ತವೆ ಎನ್ನುವ ಶಿಲ್ಪಾ ಅವರು ಓದುಗರಿಗೆ ಒಂದಿಷ್ಟು ಟಿಪ್ಸ್ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ |  : ಸೀಸನ್‌ ಫ್ಯಾಷನ್‌ಗೆ ಎಂಟ್ರಿ ನೀಡಿದ ಬ್ಲೇಜರ್‌ ಸ್ಕರ್ಟ್ ಫ್ಯಾಷನ್‌!
ಅವರವರ ಪರ್ಸನಾಲಿಟಿಗೆ ತಕ್ಕಂತೆ ಸೀರೆಯ ಆಯ್ಕೆ ಮಾಡಬೇಕು.ಸೀರೆ ಪಾರದರ್ಶಕವಾಗಿರುವುದರಿಂದ ಬಾಡಿ ಟೈಪ್‌ಗೆ ತಕ್ಕಂತೆ ಆಯ್ಕೆ ಮಾಡಬೇಕು.ಗ್ಲಾಮರಸ್‌ ಲುಕ್‌ಗಾಗಿ ವೆಸ್ಟರ್ನ್‌ ಕಾನ್ಸೆಪ್ಟ್ ಬ್ಲೌಸ್‌ ಮ್ಯಾಚ್‌ ಮಾಡಬೇಕು.ಸೀರೆಗೆ ತಕ್ಕಂತೆ ಪೇಟಿಕೋಟ್‌ ಹಾಗೂ ಬ್ಲೌಸ್‌ ಮ್ಯಾಚ್‌ ಮಾಡಬೇಕು.ಮೊದಲೇ ಟ್ರಯಲ್‌ ನೋಡಿ ಉಡುವುದು ಉತ್ತಮ.
(ಲೇಖಕಿ ಫ್ಯಾಷನ್‌ ಪತ್ರಕರ್ತೆ)