   : ಕಲರ್ ಕಲರ್ ಜೀನ್ಸ್‌ ಪ್ಯಾಂಟ್ಸ್! ಕಾಲೇಜು ಯುವತಿಯರ ಹೊಸ ಟ್ರೆಂಡ್
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಲರ್ಡ್ ಜೀನ್ಸ್ ಪ್ಯಾಂಟ್‌ಗಳು (  ) ಕಾಲೇಜು ಹುಡುಗಿಯರನ್ನು ಆಕರ್ಷಿಸುತ್ತಿವೆ. ಮೊದಲಿನಂತೆ ಒಂದಿಷ್ಟು ಕಲರ್‌ಗಳಲ್ಲಿ ಮಾತ್ರ ಲಭ್ಯವಿದ್ದ ಜೀನ್ಸ್ ಪ್ಯಾಂಟ್‌ಗಳು ಇದೀಗ ಕಲರ್‌ ರಿಸ್ಟ್ರಿಕ್ಷನ್‌ನ ಗಡಿ ದಾಟಿ ನಾನಾ ವರ್ಣಗಳಲ್ಲಿ ಬಿಡುಗಡೆಗೊಂಡಿವೆ. ಬ್ಲ್ಯೂ, ಬ್ಲ್ಯಾಕ್‌ ಹಾಗೂ ವೈಟ್‌ ಜೀನ್ಸ್ ಪ್ಯಾಂಟ್‌ಗಳ ಬದಲಾಗಿ ರೆಡ್‌, ಪಿಂಕ್‌, ಪೀಚ್‌, ಬ್ರೌನ್‌, ಪಿಸ್ತಾ ಸೇರಿದಂತೆ ಇದೀಗ ನಾನಾ ಬಗೆಯ ಕಲರ್‌ಫುಲ್‌ ಜೀನ್ಸ್ ಪ್ಯಾಂಟ್‌ಗಳು (   ) ಕಾಲೇಜು ಹುಡುಗಿಯರನ್ನು ಆಕರ್ಷಿಸುತ್ತಿವೆ.
ಕೆಪ್ರೀಸ್‌, ಲೋ -ವೇಸ್ಟ್‌ , ಸ್ಕಿನ್ನಿ, ಕಾರ್ಗೋಸ್‌ನ ಕಲರ್‌ಫುಲ್‌ ಜೀನ್ಸ್‌ ಪ್ಯಾಂಟ್‌ಗಳು ಬೂಟ್‌ ಕಟ್‌, ನ್ಯಾರೋ ಕಟ್‌, ಸ್ಟ್ರೈಟ್‌ ಕಟ್‌ ವಿನ್ಯಾಸದಲ್ಲಿಯೂ ದೊರೆಯುತ್ತಿವೆ.
ಕ್ಯಾಶುವಲ್‌ ಡ್ರೆಸ್‌ ಕೋಡ್‌ ಎಂದಾಕ್ಷಣಾ ಹೆಚ್ಚಾಗಿ ಹುಡುಗಿಯರು ಮೊರೆ ಹೋಗುವುದೇ ಜೀನ್ಸ್ ಪ್ಯಾಂಟ್‌ಗೆ ಎನ್ನುವ ಸ್ಟೈಲಿಸ್ಟ್ ರಿಯಾ ಪ್ರಕಾರ, ಇಂದು ಕಲರ್‌ ಜೀನ್ಸ್‌ ಪ್ಯಾಂಟ್‌ ಯಾವ ಮಟ್ಟಿಗೆ ಜಾದೂ ಮಾಡಿದೆ ಎಂದರೆ, ಬೆಂಗಳೂರು ಹುಡುಗಿಯರು ಮಾತ್ರವಲ್ಲ, ಚಿಕ್ಕ-ಪುಟ್ಟ ಪಟ್ಟಣಗಳ ಟಿನೇಜ್‌ ಹುಡುಗಿಯರು ಉದ್ಯೋಗಸ್ಥ ಮಹಿಳೆಯರು ಜೀನ್ಸ್‌ ಪ್ಯಾಂಟ್‌ ಪ್ರೇಮಿಗಳಾಗಿದ್ದಾರೆ.
ಮಂಡಿವರೆಗಿನ ಕೆಪ್ರೀಸ್‌, ಹೊಕ್ಕಳ ಮೇಲಕ್ಕೆ ಹಾಕುವ ಹೈ ವೇಸ್ಟ್‌ ರೈಸ್‌, ಹೊಕ್ಕಳ ಕೆಳಗೆ ಕೂರುವ ಮಿಡ್‌ ರೈಸ್‌, ಸೊಂಟ ಬಳಸುವ ಲೋ ರೈಸ್‌, ಶೂಗಳನ್ನು ಟಚ್‌ ಮಾಡುವ ಫುಲ್‌ ಲೆಂಥ್‌, ಶೂ ಮೇಲೆ ನೇತಾಡುವ ಕ್ರಾಪ್‌ ಪ್ಯಾಂಟ್‌, ತೆಳ್ಳಗೆ ಬಿಂಬಿಸುವ ಪೆಟ್ಟಿ ಸ್ಕಿನ್ನಿ, ಹಿಗ್ಗಿದರೂ-ಕುಗ್ಗಿದರೂ ಹೊಂದುವಂತಹ ಸ್ಪ್ರೇಚ್‌ ಕಲರ್ಡ್ ಜೀನ್ಸ್‌ ಪ್ಯಾಂಟ್‌ಗಳು ಚಾಲ್ತಿಯಲ್ಲಿವೆ.
ಬ್ಲ್ಯಾಕ್, ಡಾರ್ಕ್‌ ನೇವಿ ಬಣ್ಣಗಳು ಕುಳ್ಳಗಿರುವ ಕಾಲುಗಳನ್ನು ಉದ್ದನಾಗಿರುವಂತೆ ಬಿಂಬಿಸುತ್ತವೆ. ಕುಳ್ಳಗಿರುವವರು ರೆಗ್ಯುಲರ್‌ ರೈಸ್‌ ಜೀನ್ಸ್‌ ಬಳಸುವುದು ಓಕೆ. ಅಲ್ಟ್ರಾ -ಲೋ, ಲೋ-ರೈಸ್‌ ಜೀನ್ಸ್‌ ನಾಟ್‌ ಓಕೆ. ಶೂಗಳನ್ನು ಜೀನ್ಸ್‌ನಿಂದಲೇ ಕವರ್‌ ಮಾಡುವ ಮೂಲಕವೂ ಉದ್ದನಾಗಿ ಕಾಣಿಸಬಹುದು. ಬೂಟ್‌ ಕಟ್‌ ಜೀನ್ಸ್‌ ಕೂಡ ಓಕೆ. ಸ್ಕಿನ್ನಿ ಜೀನ್ಸ್‌ ನಾಟ್‌ ಓಕೆ. ಇನ್ನು ಬಾಟಮ್‌ ಫ್ಲೇರ್‌ ಕಟ್‌ ಇರುವ ಜೀನ್ಸ್‌ ಗೆ ಬೈ ಬೈ ಹೇಳಿದ್ರೆ ಒಳ್ಳೆದು.
ಈ ಸುದ್ದಿಯನ್ನೂ ಓದಿ |  : ನಿರುದ್ಯೋಗಿ ಯುವತಿಯರಿಗೆ ಗುಡ್‌ ನ್ಯೂಸ್‌; ಬ್ಯೂಟಿ ಪಾರ್ಲರ್ ಉಚಿತ ತರಬೇತಿಗೆ ಅರ್ಜಿ ಆಹ್ವಾನ
ಬ್ರಾಂಡೆಡ್‌ ಜೀನ್ಸ್‌ ಪ್ಯಾಂಟ್‌ಗಳು ಬಣ್ಣ ಬಿಡದು.ಕಳಪೆ ಗುಣಮಟ್ಟದ ಜೀನ್ಸ್‌ ಹೆಚ್ಚು ಧರಿಸುವುದರಿಂದ ಚರ್ಮದ ಅಲರ್ಜಿಗೆ ಒಳಗಾಗಬಹುದು.ಟ್ರಯಲ್‌ ರೂಂನಲ್ಲಿ ಧರಿಸಿ, ಫಿಟ್ಟಿಂಗ್‌ ಸರಿಯಾದ ನಂತರವೇ ಖರೀದಿಸಿ.ಯಾವುದೇ ಕಾರಣಕ್ಕೂ ಉಸಿರುಕಟ್ಟಿಸುವಷ್ಟು ಬಿಗಿಯಾದ ಕಲರ್ಡ್ ಜೀನ್ಸ್ ಪ್ಯಾಂಟ್‌ ಧರಿಸುವುದು ಬೇಡ.
(ಲೇಖಕಿ ಫ್ಯಾಷನ್‌ ಪತ್ರಕರ್ತೆ)