   11 : ಮೊದಲ ದಿನವೇ ನಾಮಿನೇಷನ್ ಟ್ವಿಸ್ಟ್: 10 ಜನರಲ್ಲಿ 7 ಮಂದಿ ನಾಮಿನೇಟ್ ಮಾಡಿದ್ದು ಇವರೊಬ್ಬರನ್ನೇ!
ಬಿಗ್ ಬಾಸ್ ಕನ್ನಡ ಸೀಸನ್​ 11 (   11) ಅಂದುಕೊಂಡಂತೆ ದೊಡ್ಡ ಹೈಪ್ ಕ್ರಿಯೇಟ್ ಮಾಡುತ್ತಿದೆ. ಮೊದಲ ದಿನವೇ ಸ್ಪರ್ಧಿಗಳ ನಡುವೆ ದೊಡ್ಡ ಮಟ್ಟಿನ ಮಾತಿನ ಚಕಮಕಿ ಏರ್ಪಟ್ಟಿದ್ದು, ನಾಮಿನೇಷನ್ ಪ್ರಕ್ರಿಯೆ ಕೂಡ ನಡೆದಿದೆ. ಸ್ವರ್ಗವಾಸಿಗಳು ನರಕದಲ್ಲಿರುವ ಜನರನ್ನು ನೇರವಾಗಿ ನಾಮಿನೇಟ್ ಮಾಡಬೇಕು ಎಂಬ ಆಜ್ಞೆ ಬಿಗ್ ಬಾಸ್ ನೀಡಿದ್ದರು. ಅದರಂತೆ ಸ್ವರ್ಗದಲ್ಲಿರುವ 10 ಜನರ ಪೈಕಿ 7 ಮಂದಿ ಚೈತ್ರಾ ಕುಂದಾಪುರ ಅವರನ್ನು ನಾಮಿನೇಟ್ ಮಾಡಿದ್ದಾರೆ. ಹೀಗಾಗಿ ಮೊದಲ ವಾರ ಮನೆಯಿಂದ ಹೊರಹೋಗಲು ಚೈತ್ರಾ ಅವರು ನೇರವಾಗಿ ಆಯ್ಕೆ ಆಗಿದ್ದಾರೆ.
ಮೊದಲ ದಿನವೇ ಸ್ವರ್ಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ರಾ ಚೈತ್ರಾ?ಬಿಗ್ ಬಾಸ್ ಕನ್ನಡ ಸೀಸನ್ 11 | ಪ್ರತಿರಾತ್ರಿ 9:30#BiggBossKannada11#BBK11####ಕಲರ್‌ಫುಲ್‌‌ಕತೆ##"../TCoyoU4A9h
ಮೊದಲ ದಿನ ಬಿಗ್ ಬಾಸ್ ಸ್ವರ್ಗ ವಾಸಿಗಳಿಗೆ ವಿಶೇಷ ಸವಲತ್ತು ನೀಡಿದ್ದರು. ನರಕದಲ್ಲಿರುವ ಇಬ್ಬರು ಸ್ಪರ್ಧಿಗಳನ್ನು ಆಯ್ಕೆ ಮಾಡಿ ಅವರಿಂದ ಮನೆಗೆಲಸ ಮಾಡಿಸಬೇಕಾಗಿತ್ತು. ಇದಕ್ಕೆ ಚೈತ್ರಾ ಮತ್ತು ಗೋಲ್ಡ್ ಸುರೇಶ್ ಅವರನ್ನು ಆಯ್ಕೆ ಮಾಡಲಾಗಿತ್ತು. ಕ್ಲೀನಿಂಗ್ ಮಾಡುವಾಗ ಚೈತ್ರಾ ಅವರು ಸ್ವರ್ಗದಲ್ಲಿರುವವರ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ಸೇಬು ಹಣ್ಣನ್ನು ತಿಂದ ವಿಚಾರಕ್ಕೆ ಜಗಳ ನಡೆದಿದೆ.
ಹಾಗೆಯೆ ಸ್ವರ್ಗದಲ್ಲಿರುವವರು ಯಾವುದೇ ಕೆಲಸ ಮಾಡುವಂತಿಲ್ಲ ಎಂಬ ನಿಯಮವಿದ್ದರೂ ಲಾಯರ್‌ ಜಗದೀಶ್ ಟಾಯ್ಲೆಟ್ ಮತ್ತು ವಾಷ್ ಬೇಸಿನ್ ತೊಳೆದ ಕಾರಣ ಮತ್ತೊಂದು ಜಗಳ ನಡೆದಿದೆ. ಅತ್ತ ನರಕ ವಾಸಿಗಳಿಗೆ ಸ್ವರ್ಗದಿಂದ ಯಾವುದೇ ವಸ್ತು ಅಥವಾ ಏನನ್ನೂ ನೀಡಬಾರದು ಎಂಬ ನಿಯಮವಿದ್ದರೂ ಜಗದೀಶ್ ಅವರು ಬಿಸಿ ನೀರು ಕೊಟ್ಟಿದ್ದಾರೆ. ನಿಯಮವನ್ನು ಮುರಿದ ತಪ್ಪಿಗೆ ಬಿಗ್ ಬಾಸ್ ಸ್ವರ್ಗದಲ್ಲಿರುವವರಿಗೆ ನೀಡಿದ ಕೆಲವು ಗ್ರೋಸರಿ ಐಟಮ್​ಗಳನ್ನು ಹಿಂತೆಗೆದುಕೊಂಡಿದ್ದಾರೆ.
ಚೈತ್ರಾ ಹಾಗೂ ಲಾಯರ್ ಜಗದೀಶ್ ಹೊರತು ಪಡಿಸಿ ಉಳಿದ ಸ್ಪರ್ಧಿಗಳು ಮೊದಲ ದಿನ ಅಷ್ಟೊಂದು ಹೈಲೇಟ್ ಆಗಲಿಲ್ಲ. ಧನರಾಜ್ ಆಚಾರ್ ಅವರನ್ನು ಕನ್ಫೆಷನ್ ರೂಮ್​ಗೆ ಕರೆಸಿದ್ದ ಸಂದರ್ಭ ಬಿಗ್ ಬಾಸ್ ಅವರಿಗೆ ಎನರ್ಜಿ ತುಂಬುವ ಕೆಲಸ ಮಾಡಿದ್ದಾರೆ. ಸುದೀಪ್ ಅವರು ನೀವು ಜಿಂಕೆ ರೀತಿ ಇರಬೇಕು ಎಂದು ಹೇಳಿದ್ದರು. ನೀವು ಹಾಗೆಯೆ ಇರಿ, ಎಲ್ಲರನ್ನೂ ನಗಿಸುತ್ತಾ, ಖುಷಿ ಪಡಿಸುತ್ತಾ ಇರಿ ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ:   11: ಬಿಗ್‌ಬಾಸ್‌‌‌ನಲ್ಲಿ ಫ್ಯಾಷನ್‌ ಪ್ರಿಯರ ಮನಗೆದ್ದಿದೆ ಸುದೀಪ್‌ ಸೂಟ್‌! ಇದರ ದರ ಎಷ್ಟು?
ಒಟ್ಟಾರೆ ಬಿಗ್ ಬಾಸ್​ನಲ್ಲಿ ಮೊದಲ ದಿನ ಕೊಂಚ ವೈಲೆಂಟ್ ಆಗಿತ್ತು. ಎರಡನೇ ದಿನ ಸಾಕಷ್ಟು ಕುತೂಹಲ ಕೆರಳಿದ್ದು, ಬಿಗ್ ಬಾಸ್ ಏನು ಟಾಸ್ಕ್ ನೀಡುತ್ತಾರೆ ಎಂಬುದು ಕಾದು ನೋಡಬೇಕಿದೆ.