ಸಪ್ತಪದಿ ತುಳಿದ ನಿರ್ದೇಶಕ ಎಸ್​.ನಾರಾಯಣ್​ ಪುತ್ರ ಪಂಕಜ್​- ರಕ್ಷಾ
ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್​ನಲ್ಲಿ ಮದುವೆ ಸಮಾರಂಭ ಏರ್ಪಡಿಸಲಾಗಿತ್ತು. ಮಾಜಿ ಸಚಿವ ಎನ್​.ಚೆಲುವರಾಯ ಸ್ವಾಮಿ ಸೇರಿದಂತೆ ಅನೇಕರು ಆಗಮಿಸಿದ್ದರು. ಸೋಶಿಯಲ್​ ಮೀಡಿಯಾ ಮೂಲಕ ನವ ದಂಪತಿಗೆ ಶುಭ ಹಾರೈಸುತ್ತಿದ್ದಾರೆ.
ಚಿತ್ರರಂಗದಲ್ಲಿ ಎಸ್​. ನಾರಾಯಣ್​ ನಟನಾಗಿ, ನಿರ್ದೇಶಕನಾಗಿ ಅವರು ಸ್ಯಾಂಡಲ್​ವುಡ್​ನಲ್ಲಿ ದೊಡ್ಡ ಮಟ್ಟದ ಖ್ಯಾತಿ ಗಳಿಸಿ ದ್ದಾರೆ. ಅವರ ಮೊದಲ ಪುತ್ರ ಪವನ್​ ನಿರ್ದೇಶನದಲ್ಲಿ ಆಸಕ್ತಿ ಹೊಂದಿದ್ದಾರೆ. ಎರಡನೇ ಪುತ್ರ ಪಂಕಜ್​ ಅವರು ಹಲವು ಸಿನಿಮಾ ಗಳಲ್ಲಿ ನಟಿಸಿದ್ದಾರೆ.
‘ಚೆಲುವಿನ ಚಿಲಿಪಿಲಿ’, ‘ದುಷ್ಟ’, ‘ದಕ್ಷ’, ‘ಒಡೆಯ’ ಮುಂತಾದ ಚಿತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.