 : ಮುದ್ದು ಮಗಳ ಮುಖ ರಿವೀಲ್‌ ಮಾಡಿದ ಮಿಲನಾ-ಡಾರ್ಲಿಂಗ್‌ ಕೃಷ್ಣ; ವಿಡಿಯೊ ಇಲ್ಲಿದೆ
ಬೆಂಗಳೂರು:ʼಲವ್‌ ಮಾಕ್‌ಟೇಲ್‌ʼ ( ) ಸರಣಿ ಚಿತ್ರಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮೋಡಿ ಮಾಡಿದ ಮಿಲನಾ ನಾಗರಾಜ್‌ ( ) ಮತ್ತು ಡಾರ್ಲಿಂಗ್‌ ಕೃಷ್ಣ ( ) ನಿಜ ಜೀವನದಲ್ಲಿಯೂ ಜೋಡಿಯಾಗಿ ಗಮನ ಸೆಳೆದಿದ್ದಾರೆ. ಹಲವು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಇವರು 2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇತ್ತೀಚೆಗೆ ಮಿಲನಾ ನಾಗರಾಜ್‌ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ಮಿಲನಾ ನಾಗರಾಜ್‌ ಮತ್ತು ಡಾರ್ಲಿಂಗ್‌ ಕೃಷ್ಣ ತಮ್ಮ ಮಗುವಿನ ಮುಖ ರಿವೀಲ್‌ ಮಾಡಿದ್ದಾರೆ. ಮನೆಯನ್ನು ಅಲಂಕರಿಸಿ ಮಗುವನ್ನು ಸ್ವಾಗತಿಸುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.
ʼʼನಮ್ಮ ಜೀವನದ ಹೊಸ ಪ್ರೀತಿ ಪರಿʼʼ, ʼʼನಮ್ಮ ಪುಟ್ಟ ಪ್ರಪಂಚಕ್ಕೆ ಸ್ವಾಗತ ಪರಿʼʼ ಎಂದು ಬರೆದುಕೊಂಡು ಇನ್‌ಸ್ಟಾಗ್ರಾಮ್‌ ಮೂಲಕ ಅಭಿಮಾನಿಗಳಿಗೆ ತಮ್ಮ ಮುದ್ದು ಕಂದಮ್ಮನನ್ನು ಪರಿಚಯಿಸಿದ್ದಾರೆ. ಈ ಪೋಸ್ಟ್‌ಗೆ ಅಭಿಮಾನಿಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಮಗು ಮುದ್ದಾಗಿದೆ. ದೃಷ್ಟಿ ತೆಗೀರಿ ಎಂದು ಹಲವರು ಸಲಹೆ ನೀಡಿದ್ದಾರೆ.
      (@)
ಸಂತಸ ಹಂಚಿಕೊಂಡಿದ್ದ ಡಾರ್ಲಿಂಗ್‌ ಕೃಷ್ಣ
ಡಾರ್ಲಿಂಗ್‌ ಕೃಷ್ಣ ಅವರು ಹೆಣ್ಣು ಮಗು ಆಗಬೇಕೆಂದೇ ಬಯಸಿದ್ದರಂತೆ. ಅದರಂತೆ ಮಿಲನಾ ಸೆಪ್ಟೆಂಬರ್‌ 5ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ವೇಳೆ ಕೃಷ್ಣ ಅವರು ತಮ್ಮ ಸಂತಸ ವ್ಯಕ್ತಪಡಿಸಿದ್ದರು. ʼʼಮಿಲನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಈ ತಾಯ್ತನದ ಪ್ರಯಾಣದಲ್ಲಿ ಮಿಲನಾ ಹಲವು ನೋವು, ತ್ಯಾಗಳನ್ನು ಎದುರಿಸಿದ್ದಾಳೆ. ಅವಳ ಬಗ್ಗೆ ಹೆಮ್ಮೆ ಇದೆ. ಜತೆಗೆ ಎಲ್ಲ ತಾಯಂದಿರಿಗೂ ಬಿಗ್‌ ಸೆಲ್ಯೂಟ್‌. ಮಹಿಳೆಯರ ಮೇಲೆ ನನಗಿದ್ದ ಗೌರವ ಈಗ ಇನ್ನೂ ಹೆಚ್ಚಾಗಿದೆ. ಹೆಣ್ಣು ಮಗಳ ತಂದೆಯಾಗಿದ್ದಕ್ಕೆ ನನಗೆ ಹೆಮ್ಮೆ ಇದೆ. ನಾನೊಬ್ಬ ಅದೃಷ್ಟವಂತ ತಂದೆʼʼ ಎಂದು ಡಾರ್ಲಿಂಗ್‌ ಕೃಷ್ಣ ಅವರು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದರು.
      (@darling_krishnaa)
2013ರಲ್ಲಿ ʼನಮ್‌ ದುನಿಯಾ ನಮ್‌ ಸ್ಟೈಲ್‌ʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಮಿಲನಾ 2021ರಲ್ಲಿ ಡಾರ್ಲಿಂಗ್‌ ಕೃಷ್ಣ ಅವರನ್ನು ವರಿಸಿದ್ದರು. ಇವರು 6 ವರ್ಷಗಳ ಕಾಲ ಪರಸ್ಪರ ಪ್ರೀತಿಸಿದ್ದರು. 2020ರಲ್ಲಿ ತೆರೆಕಂಡ ʼಲವ್‌ ಮಾಕ್‌ಟೆಲ್‌ʼ ಸಿನಿಮಾ ಮೂಲಕ ಈ ಜೋಡಿ ಜನಪ್ರಿಯವಾಗಿದೆ. ಡಾರ್ಲಿಂಗ್‌ ಕೃಷ್ಣ ನಿರ್ದೇಶನದ ಈ ಮೊದಲ ಸಿನಿಮಾಕ್ಕಾಗಿ ಮಿಲನಾ ಕೂಡ ಕೆಲಸ ಮಾಡಿದ್ದರು. ಡಾರ್ಲಿಂಗ್‌ ಕೃಷ್ಣ, ಮಿಲನಾ ಜತೆಗೆ ಅಮೃತ ಅಯ್ಯರ್‌, ಅಭಿಲಾಷ್‌, ರಚನಾ ಇಂದರ್‌ ಮತ್ತಿತರರು ನಟಿಸಿದ್ದರು. ಕೃಷ್ಣ ಅವರ ಆದಿ ಪಾತ್ರದ ಜೊತೆಗೆ ಮಿಲನಾ ಅವರ ನಿಧಿ ಪಾತ್ರ ಪ್ರೇಕ್ಷಕರ ಗಮನ ಸೆಳೆದಿತ್ತು.
ಸದ್ಯ ಮಿಲನಾ ನಟಿಸಿರುವ ʼಆರಾಮ್‌ ಅರವಿಂದ ಸ್ವಾಮಿʼ ಬಿಡುಗಡೆಗೆ ಸಿದ್ಧವಾಗಿದೆ. ಮೊದಲ ಬಾರಿಗೆ ಅನೀಶ್‌ ಜತೆಗೆ ತೆರೆ ಹಂಚಿಕೊಂಡ ಮಿಲನಾ ಇತ್ತೀಚೆಗೆ ಡಬ್ಬಿಂಗ್‌ ಮುಗಿಸಿದ್ದಾರೆ. ಡಾರ್ಲಿಂಗ್‌ ಕೃಷ್ಣ ಸದ್ಯ ʼಲವ್‌ ಮಿ ಆರ್‌ ಹೇಟ್‌ ಮಿʼ ಮತ್ತು ʼಫಾದರ್‌ʼ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಜತೆಗೆ ʼಲವ್‌ ಮಾಕ್‌ಟೇಲ್‌ 3ʼ ಚಿತ್ರಕ್ಕಾಗಿ ಸಿದ್ಧತೆ ನಡೆಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: : ಹೆಣ್ಣು ಮಗುವಿಗೆ ಜನ್ಮ ನೀಡಿದ ಮಿಲನಾ ನಾಗರಾಜ್‌; ಖುಷಿ ಹಂಚಿಕೊಂಡ ಡಾರ್ಲಿಂಗ್‌ ಕೃಷ್ಣ