   11: ಮಾತಾಡೋಕೆ ಒಂದು ಲೆವೆಲ್ ಬೇಕು: ಬಿಗ್ ಬಾಸ್ ಮನೆಯಲ್ಲಿ ಎರಡನೇ ದಿನವೂ ಆರ್ಭಟಿಸಿದ ಚೈತ್ರಾ
ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ (    8) ಮೊದಲ ದಿನವೇ ಸ್ವರ್ಗವಾಸಿಗಳ ಕೆಂಗಣ್ಣಿಗೆ ಗುರಿಯಾದ ಚೈತ್ರಾ ಕುಂದಾಪುರ ( ) ನೇರವಾಗಿ ನಾಮಿನೇಟ್ ಆಗಿದ್ದಾರೆ. ಫೈರ್ ಬ್ರ್ಯಾಂಡ್ ಎಂದೇ ಫೇಮಸ್ ಆಗಿರುವ ಇವರು ಮೊದಲ ದಿನ ತಮ್ಮ ಮಾತುಗಳಿಂದಲೇ ಎದುರಾಳಿಯ ಬಾಯಿ ಮುಚ್ಚಿಸಿದ್ದರು. ಇದೀಗ ಎರಡನೇ ದಿನ ಕೂಡ ಚೈತ್ರಾ ಆರ್ಭಟ ಮುಂದುವರೆದಿದೆ. ಆದರೆ, ಈ ಬಾರಿ ಸ್ವರ್ಗದಲ್ಲಿ ಇರುವವರ ಜೊತೆಯಲ್ಲ, ಬದಲಾಗಿ ತಮ್ಮದೇ ತಂಡದ ನರಕವಾಸಿಗಳ ಜೊತೆ ಚೈತ್ರಾ ಸಿಡಿದೆದ್ದಿದ್ದಾರೆ.
ನರಕದಲ್ಲಿರುವ ಮಾನಸ ಹಾಗೂ ಚೈತ್ರಾ ನಡುವೆ ಮಾತಿನ ಚಕಮಕಿ ನಡೆದಿದೆ. ಕಲರ್ಸ್ ಕನ್ನಡ ಇಂದಿನ ಎಪಿಸೋಡ್ ಕುರಿತು ಪ್ರೊಮೋ ಬಿಡುಗಡೆ ಮಾಡಿದ್ದು, ಇದರಲ್ಲಿ ಚೈತ್ರಾ ಧ್ಯಾನ ಮಾಡುತ್ತಿದ್ದಾರೆ. ಆಗ ಮಾನಸ ಅವರು ‘ಈ ಧ್ಯಾನ ಮಾಡುವವರ ಮೇಲೆ ನನಗೆ ಡೌಟ್ ಇದೆ, ಅವರು ನಿದ್ದೆ ಮಾಡುತ್ತಿದ್ದಾರ ಅಂತ’ ಎಂದು ಹೇಳಿದ್ದಾರೆ. ಇಲ್ಲಿಂದ ಚೈತ್ರಾ-ಮಾನಸ ವಾಗ್ವಾದ ಶುರುವಾಗಿದೆ.
ಈ ಸುದ್ದಿಯನ್ನೂ ಓದಿ:ಮೊದಲ ದಿನವೇ ಸ್ವರ್ಗ ವಾಸಿಗಳಿಗೆ ನರಕ ದರ್ಶನ ತೋರಿದ ಚೈತ್ರಾ ಕುಂದಾಪುರ; ಕೌಂಟರ್ ಮೇಲೆ ಕೌಂಟರ್
ಚೈತ್ರಾ ಅವರು ಮಾನಸ ಅವರಿಗೆ ‘ನಿಮ್ದು ಎಷ್ಟಿದೆ ಅಷ್ಟು ನೋಡಿಕೊಳ್ಳಿ. ಮಾತಾಡೋಕೆ ಅದರ ಬಗ್ಗೆ ಒಂದು ಲೆವೆಲ್ ಬೇಕು. ನಾನು ಏನು ಮಾಡಿದ್ರು ಅದು ತಪ್ಪು ಅಂತ ಹೇಳಲು ಇವರು ಯಾರು?’ ಎಂದು ಖಡಕ್ ಆಗಿ ನೇರವಾಗಿ ನುಡಿದಿದ್ದಾರೆ. ಇದಿಂದ ಬೇಸರಗೊಂಡ ಮಾನಸ ‘ನನಗೆ ಜ್ಞಾನವಿಲ್ಲ, ನಾನು ಅಲ್ಪಜ್ಞಾನಿ. ಪ್ರಪಂಚದಲ್ಲಿ ಎಲ್ಲರು ಒಂದೇ ರೀತಿ ಜಡ್ಜ್ ಮಾಡಬೇಕು ಎಂದಿಲ್ಲ’ ಎಂದು ಹೇಳಿದ್ದಾರೆ. ಇದರಿಂದ ಮತ್ತೆ ಕೆರಳಿದ ಚೈತ್ರಾ ‘ಜ್ಞಾನ ಇಲ್ಲ ಅಂದ್ರೆ ಮಾತನಾಡಬಾರದು’ ಎಂದು ಸಿಡಿದಿದ್ದಾರೆ.
ನರಕಕ್ಕೆ ಕಿಚ್ಚು ಹಚ್ಚಿದ 'ಡೌಟ್'ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ 9:30#BiggBossKannada11#BBK11####ಕಲರ್‌ಫುಲ್‌‌ಕತೆ##../UO2S2XuC4a
ಇನ್ನು ಬಿಗ್ ಬಾಸ್ ಮನೆಯಲ್ಲಿ ಇಂದು ಎರಡನೇ ಹಂತದ ನಾಮಿನೇಷನ್ ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ ಬಿಗ್ ಬಾಸ್ ಟಾಸ್ಕ್ ನೀಡಿದ್ದಾರೆ. ನಾಮಿನೇಷನ್ ಪ್ರಕ್ರಿಯೆ ಮುಗಿದ ಬಳಿಕ ಸ್ವರ್ಗ ಮತ್ತು ನರಕದಲ್ಲಿರುವವರ ಮಧ್ಯೆ ಇಂದುಕೂಡ ಜಗಳ ನಡೆದಿದೆ. ಯಮುನಾ ಹಾಗೂ ಶಿಶಿರ್ ನಡುವೆ ದೊಡ್ಡ ವಾಗ್ವಾದ ನಡೆದಿದೆ. ಗೌತಮಿ ಅವರು ನಮ್ಮ ಜೊತೆ ಮಾತನಾಡಲು ಬಂದರೆ ಏನು ತಪ್ಪು? ಎಂದು ಶಿಶಿರ್ ಅವರು ಯಮುನಾ ಅವರಿಗೆ ಪ್ರಶ್ನಿಸಿದ್ದಾರೆ. ಇದಕ್ಕೆಲ್ಲ ಉತ್ತರ ಕೊಡುವ ಹಾಗಿಲ್ಲ ನಾನು, ಇದನ್ನೆಲ್ಲ ಕೇಳಲು ನೀವು ಯಾರು? ಎಂದು ಯಮುನಾ ಅವರು ಮರು ಪ್ರಶ್ನಿಸಿದ್ದಾರೆ. ಒಟ್ಟಾರೆ ಎರಡನೇ ದಿನವೂ ಬಿಗ್ ಬಾಸ್ ಮನೆಯಲ್ಲಿ ಕೋಲಹಲ ಉಂಟಾದಂತಿದೆ.