ಕನ್ನಡದಲ್ಲೇ ಧನ್ಯವಾದ ತಿಳಿಸಿದ ಜೂ.ಎನ್​ಟಿಆರ್
ಬಹುನಿರೀಕ್ಷಿತ ಆರ್‌.ಆರ್‌.ಆರ್‌ () ಸಿನಿಮಾ ಜನವರಿ 7 ರಂದು ರಿಲೀಸ್​ ಆಗಲಿದೆ. ಎಲ್ಲಾ ಭಾಷೆಯಲ್ಲೂ ತೆರೆ ಕಾಣುತ್ತಿರುವ ಈ ಚಿತ್ರ, ಕನ್ನಡದಲ್ಲೂ ಡಬ್ಬ್ ಆಗಿದ್ದು ಜನವರಿ 7 ಕರ್ನಾಟಕದ ಚಿತ್ರಮಂದಿರಗಳಲ್ಲೂ ರಿಲೀಸ್ ಆಗುತ್ತಿದೆ.​
ನಿರ್ದೇಶಕ ಎಸ್.ಎಸ್.ರಾಜಮೌಳಿ, ನಟ ರಾಮಚರಣ್, ಜೂ.ಎನ್​ಟಿಆರ್​, ನಟಿ ಆಲಿಯಾ ಭಟ್ ಸೇರಿದಂತೆ ಇಡೀ ಚಿತ್ರತಂಡ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.
ಆರ್​ಆರ್​ಆರ್ ಚಿತ್ರವು ಎಸ್​.ಎಸ್. ರಾಜಮೌಳಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಸಿನಿಮಾ. ಬಹುಕೋಟಿ ವೆಚ್ಚದ ಸಿನಿಮಾ 2022ರ ಜನವರಿ 7 ಪಂಚ ಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಚಿತ್ರದಲ್ಲಿ ಆಲಿಯಾ ಭಟ್​, ಅಜಯ್ ದೇವಗನ್​ ರಾಮ್​ಚರಣ್​ ಸೇರಿ ದಂತೆ ಹಲವು ತಾರೆಯರು ಕಾಣಿಸಿಕೊಂಡಿದ್ದಾರೆ.
ಚಿತ್ರದ ಟ್ರೇಲರ್​ ಬಿಡುಗಡೆಯಾಗಿದ್ದು ಎಲ್ಲಡೆ ಸಖತ್​ ರೆಸ್ಪಾನ್ಸ್​ ದೊರಕಿದೆ. ರಾಜಮೌಳಿ ನಿರ್ದೇಶನದಲ್ಲಿ ತಯಾರಾದ ಸಿನಿಮಾ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ಟ್ರೇಲರ್​ ನೋಡಿದ ಬಳಿಕ ಚಿತ್ರದ ಬಗ್ಗೆ ನಿರೀಕ್ಷೆ ಇನ್ನಷ್ಟು ಜಾಸ್ತಿ ಯಾಗಿದೆ.