ಹಾಸ್ಯನಟ ವಡಿವೇಲುಗೆ ಕರೋನಾ ಸೋಂಕು
ಚೆನೈ: ತಮಿಳು ಹಾಸ್ಯನಟ ವಡಿವೇಲು ಅವರಿಗೆ ಕೋವಿಡ್ -19 ಗೆ ಸೋಂಕು ತಗುಲಿದ್ದು, ಅವರನ್ನು ಚೆನ್ನೈನ ಪೋರೂರಿನ ಶ್ರೀರಾಮಚಂದ್ರ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯು ತ್ತಿದ್ದಾರೆ.
ವಡಿವೇಲು ಅವರ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು.
ವಡಿವೇಲು ತಮಿಳು ಚಿತ್ರರಂಗದ ಹಾಸ್ಯನಟರಲ್ಲಿ ಒಬ್ಬರು. ಅಭಿಮಾನಿಗಳು ಪ್ರೀತಿಯಿಂದ ವೈಗೈ ಪುಯಲ್ ಎಂದು ಕರೆಯುತ್ತಾರೆ. ಈಗ ನಾಯಿ ಶೇಖರ್ ರಿಟರ್ನ್ಸ್ ಎಂಬ ಚಿತ್ರದೊಂದಿಗೆ ಪುನರಾಗಮನಕ್ಕೆ ಸಜ್ಜಾಗಿದ್ದಾರೆ.
ವಡಿವೇಲು, ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಮತ್ತು ನಿರ್ದೇಶಕ ಸೂರಜ್ ನಾಯಿ ಶೇಖರ್ ರಿಟರ್ನ್ಸ್‌ನ ಪ್ರಿ-ಪ್ರೊಡಕ್ಷನ್ ಕೆಲಸಕ್ಕಾಗಿ ಲಂಡನ್ ಗೆ ಹೋಗಿದ್ದರು. ಲಂಡನ್‌ನಿಂದ ಹಿಂದಿರುಗಿದ ನಂತರ, ವಡಿವೇಲುಗೆ ಸೋಂಕು ತಗುಲಿದೆ.