ಹಿರಿಯ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ
ಬೆಂಗಳೂರು:ಕನ್ನಡದ ಹಿರಿಯ ಗಾಯಕ ಶಿವಮೊಗ್ಗ ಸುಬ್ಬಣ್ಣ (84) ಅವರು, ಗುರುವಾರ ಅನಾರೋಗ್ಯದಿಂದ ನಿಧನರಾ ಗಿದ್ದಾರೆ.
ಅನಾರೋಗ್ಯದಿಂದ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖ ಲಾಗಿ, ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಚಿಕಿತ್ಸೆ ಫಲಿಸದೇ ನಿಧನರಾಗಿರುವುದಾಗಿ ತಿಳಿದು ಬಂದಿದೆ.
1938ರಲ್ಲಿ ಶಿವಮೊಗ್ಗ ಜಿಲ್ಲೆಯ ನಗರದಲ್ಲಿ ಗಣೇಶ್ ರಾವ್ ಮತ್ತು ರಂಗನಾಯಕಮ್ಮ ದಂಪತಿ ಪುತ್ರರಾಗಿ ಜನಿಸಿದ್ದರು. ಇವರ ತಾತ ಶಾಮಣ್ಣನವರು ಖ್ಯಾತ ಸಂಗೀತ ವಿದ್ವಾಂಸರು.
ಇವರ ಮೊಮ್ಮಗ ಆಗಿದ್ದ, ಶಿವಮೊಗ್ಗ ಸುಬ್ಬಣ್ಣ ಕೂಡ ಗಾಯಕರಾಗಿ ಗುರ್ತಿಸಿಕೊಂಡಿದ್ದರು. ಹಲವಾರು ಜನಪ್ರಿಯ ಹಾಡು ಗಳನ್ನು ಹಾಡಿದ್ದರು. ಇಂತಹ ಶಿವಮೊಗ್ಗ ಸುಬ್ಬಣ್ಣ ನಿಧನರಾಗಿದ್ದಾರೆ.