ಸೆ.16ರಂದು ಸಿನಿಮಾ ಟಿಕೆಟ್‌ ಬೆಲೆ ರೂ. 75..!
ನವದೆಹಲಿ:ಸೆಪ್ಟೆಂಬರ್ 16ರಂದು ರಾಷ್ಟ್ರೀಯ ಸಿನಿಮಾ ದಿನವಾದ ಭಾರತದಲ್ಲಿ ದೇಶದಾದ್ಯಂತ ಚಲನಚಿತ್ರ ಟಿಕೆಟ್‌ಗಳ ಬೆಲೆಕೇವಲ ರೂ. 75 ಆಗಿರಲಿದೆ.
ದೇಶದಲ್ಲಿ ಥಿಯೇಟರ್‌ಗಳ ಯಶಸ್ವಿ ಪುನರಾರಂಭದ ಸಂಭ್ರಮದ ಹಿನ್ನೆಲೆಯಲ್ಲಿ ಈ ಒಂದು ದಿನದ ರಿಯಾಯಿತಿಯು 4,000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಲಭ್ಯವಿರು ತ್ತದೆ.
ಸಿನಿಮಾ ಪ್ರಿಯರನ್ನು ತಮ್ಮಿಷ್ಟದ ಚಿತ್ರ ಮಂದಿರಗಳಲ್ಲಿ ಸಂತೋಷದಿಂದ ಒಂದು ದಿನ ಕಳೆಯಲು ಈ ಕ್ರಮವು ಪ್ರೋತ್ಸಾಹಿಸು ತ್ತದೆ. ಪಿವಿಆರ್‌ , ಐನೆಕ್ಸ್‌, ಸಿನಿಪೊಲಿಸ್‌ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಪ್ರಮುಖ ಥಿಯೇಟರ್‌ಗಳೂ ಕೂಡ ಈ ಆಫರ್ ನೀಡಲಿವೆ. ಆದರೆ ವೆಬ್‌ಸೈಟ್‌ಗಳಲ್ಲಿ ಮಾಹಿತಿ ಹೊರಬಿದ್ದಿಲ್ಲ.
ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ (ಎಂಎಐ) ಸಿನಿಮಾ ಪ್ರದರ್ಶನ ವ್ಯವಹಾರವನ್ನು ಮತ್ತೆ ಕುದುರಿಸುವಂತೆ ಮಾಡಿದ ಚಲನಚಿತ್ರ ವೀಕ್ಷಕರಿಗೆ ಧನ್ಯವಾದ ಸೂಚಿಸುವ ಭಾಗವಾಗಿ ಈ ಆಫರ್ ಅನ್ನು ಘೋಷಿಸಿದೆ ಎನ್ನಲಾಗಿದೆ.
ರಾಷ್ಟ್ರೀಯ ಸಿನಿಮಾ ದಿನವು ಸಂಪೂರ್ಣವಾಗಿ ಹೊಸ ಕಾರ್ಯಕ್ರಮವಾಗಿದೆ. ಅಮೆರಿಕಾದಲ್ಲಿ ಈಗಾಗಲೇ ಎಎಂಸಿ ಹಾಗೂ ಸಿನಿಮಾರ್ಕ್‌ನಂತಹ ಥಿಯೇಟರ್‌ಗಳು ಈ ವಾರಾಂತ್ಯದಲ್ಲಿ 3 (ಸುಮಾರು ರೂ. 240) ಡಾಲರ್‌ಗೆ ಟಿಕೆಟ್ ದರವನ್ನು ಕಡಿತ ಗೊಳಿಸಿವೆ. ಯುಕೆಯಲ್ಲಿನ ಚಿತ್ರಮಂದಿರಗಳು ಸಹ ಇದನ್ನು ಅನುಸರಿಸುತ್ತಿವೆ.
ಈ ತಿಂಗಳ ಕೊನೆಯಲ್ಲಿ ಸೆಪ್ಟೆಂಬರ್ 16 ರಂದು ರಾಷ್ಟ್ರೀಯ ಸಿನಿಮಾ ದಿನದ ಆಚರಣೆಗೆ ಭಾರತೀಯ ಥಿಯೇಟರ್‌ಗಳು ಸೇರಿ ಕೊಳ್ಳಲಿವೆ.
ಆನ್‌ಲೈನ್ ಅಪ್ಲಿಕೇಶನ್‌ಗಳು ಅಥವಾ ವೆಬ್‌ಸೈಟ್‌ಗಳಿಂದ ಖರೀದಿಸಿದ ಮೇಲೆ ವಿಧಿಸಲಾಗುವ ಹೆಚ್ಚುವರಿ ತೆರಿಗೆಗಳನ್ನು ಮೊತ್ತವು ಒಳಗೊಂಡಿರುವುದಿಲ್ಲ ಎಂದು ಅದು ಹೇಳಿದೆ. ಉದಾಹರಣೆಗೆ ಭಾರತದಲ್ಲಿ ಬುಕ್‌ ಮೈ ಷೋ ಇನ್ನೂ ಹೆಚ್ಚುವರಿ ಇಂಟರ್ನೆಟ್ ಶುಲ್ಕಗಳು ಮತ್ತು ಜಿಎಸ್ಟಿಯನ್ನು ರೂ. 75 ಬೆಲೆಗೆ ಕೊಡಲಿವೆಯೇ ಎಂದು ತಿಳಿದಿಲ್ಲ.