ಕಿರುತೆರೆ ನಟಿ ವೈಶಾಲಿ ಟಕ್ಕರ್ ಆತ್ಮಹತ್ಯೆ
ನವದೆಹಲಿ:ಟಿವಿಯ ಹಿಂದಿ ಕಾರ್ಯಕ್ರಮಗಳಾದ ‘ಸಸುರಲ್ ಸಿಮಾರ್ ಕಾ’ ಮತ್ತು ‘ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ’ ಪಾತ್ರಗಳಿಗೆ ಹೆಸರುವಾಸಿಯಾಗಿರುವ ಕಿರುತೆರೆ ನಟಿ ವೈಶಾಲಿ ಟಕ್ಕರ್ (26) ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಇಂದೋರ್‌ನ ಸಹಾಯಕ ಪೊಲೀಸ್ ಕಮಿಷನರ್ ಎಂ ರೆಹಮಾನ್ ಅವರು ಆತ್ಮಹತ್ಯ ಮಾಡಿಕೊಂಡ ವೈಶಾಲಿ ಟಕ್ಕರ್ ಜಾಗದಲ್ಲಿ ಡೇತ್‌ ನೋಟ್‌ ಬರೆದಿಟ್ಟ ಪತ್ರವನ್ನು ಶಪಡಿಸಿಕೊಂಡಿದ್ದಾರೆ. ಡೆತ್‌ನೋಟ್‌ನಲ್ಲಿ ಅವಳು ಮಾಜಿ ಗೆಳೆಯನಿಂದ ಕಿರುಕುಳಕ್ಕೊಳಗಾಗಿದ್ದಾಳೆ ಎಂದು ಸೂಚಿಸುತ್ತದೆ ಎಂದು ವರದಿ ಮಾಡಿದೆ.
ಹಲವು ಕಿರುತೆರೆ ಕಾರ್ಯಕ್ರಮಗಳಿಂದ ‘ಬಿಗ್ ಬಾಸ್’ವರೆಗೆ ಛಾಪು ಮೂಡಿಸಿದ್ದ ನಟಿ ವೈಶಾಲಿ ಠಕ್ಕರ್ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ.
ಕಾರ್ಯಕ್ರಮ ‘ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ’ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ನಟಿ ವೈಶಾಲಿ ಠಕ್ಕರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ.
ವೈಶಾಲಿ ಠಕ್ಕರ್ ಹಲವು ವರ್ಷಗಳಿಂದ ಇಂದೋರ್‌ನಲ್ಲಿ ವಾಸಿಸುತ್ತಿದ್ದರು. ಅಲ್ಲಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  2015ರಲ್ಲಿ ‘ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ’ ಕಾರ್ಯಕ್ರಮದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿ ಸಿದ ನಂತರ ಅನೇಕ ಟಿವಿ ಶೋಗಳಲ್ಲಿ ಕೆಲಸ ಮಾಡಿದ್ದಾರೆ.