ಮೋಹನ್‌ ಲಾಲ್ ಅವರ ʼಮಾನ್ ಸ್ಟರ್‌ʼ ಸಿನಿಮಾಕ್ಕೆ ಗಲ್ಫ್ ದೇಶದಲ್ಲಿ ನಿಷೇಧ
ನವದೆಹಲಿ:ಇದೇ ಅ.21 ರಂದು ಮಲಯಾಳಂ ಸೂಪರ್‌ ಸ್ಟಾರ್‌ ಮೋಹನ್‌ ಲಾಲ್ ಅಭಿನಯದ ʼಮಾನ್ ಸ್ಟರ್‌ʼ ಸಿನಿಮಾ ತೆರೆಗೆ ಬರಲಿದೆ.  ವಿಶ್ವದೆಲ್ಲೆಡೆ 1,000 ಕ್ಕೂ ಹೆಚ್ಚಿನ ಥಿಯೇಟರ್‌ ನಲ್ಲಿ ಸಿನಿಮಾ ತೆರೆಗೆ ಬರಲಿದೆ.
ಆದರೆ, ಗಲ್ಫ್‌ ದೇಶದಲ್ಲಿ “ಮಾನ್ ಸ್ಟರ್‌ʼ‌ ಚಿತ್ರವನ್ನು ಬ್ಯಾನ್‌ ಮಾಡಲಾಗಿದೆ ಎಂದು ವರದಿಯಾಗಿದೆ.
ದೃಶ್ಯಂ ಸರಣಿಯ ಚಿತ್ರದ ಬಳಿಕ ಅವರ ಅಭಿನಯದಯಾವುದೇ ಸಿನಿಮಾ ಬಂದರೂ ಅದನ್ನು ಫಸ್ಟ್‌ ಡೇ ಫಸ್ಟ್‌ ಶೋ ನೋಡಲು ಪ್ರೇಕ್ಷಕರು ಕಾಯುತ್ತಿರುತ್ತಾರೆ.
ಕಾರಣ ಸಿನಿಮಾದಲ್ಲಿ ಎಲ್ ಜಿಬಿಟಿ ( ಸಲಿಂಗ ಕಾಮಿ) ವಿಷಯವನ್ನು ತೋರಿಸಲಾಗಿದೆ. ಆ ಕಾರಣದಿಂದ ಗಲ್ಫ್‌ ದೇಶದಲ್ಲಿ ಇಂಥ ವಿಷಯಗಳನ್ನು ತೋರಿಸಬಾರದೆನ್ನುವ ನಿಯಮಗಳಿದ್ದು, ಅದಕ್ಕಾಗಿ ಚಿತ್ರವನ್ನು ಬ್ಯಾನ್‌ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಒಂದು ವೇಳೆ ಮರು ಪರಿಶೀಲಿಸಿ ಚಿತ್ರವನ್ನು ಪ್ರದರ್ಶನಕ್ಕೆ ಅನುವು ಮಾಡಿ ಕೊಟ್ಟರೆ ಮುಂದಿನ ವಾರ ರಿಲೀಸ್‌ ಆಗಲಿದೆ ಎಂದು ವರದಿ ತಿಳಿಸಿದೆ.
ಮೋಹನ್‌ ಲಾಲ್‌ ಚಿತ್ರದಲ್ಲಿ ಲಕ್ಕಿ ಸಿಂಗ್‌ ಎನ್ನುವ ಪಾತ್ರವನ್ನು ಮಾಡಲಿದ್ದಾರೆ. ಇದೊಂದು ಥಿಲ್ಲರ್‌ ಇನ್​ವೆಸ್ಟಿಗೇಷನ್​ ಕಥಾ ಹಂದರವುಳ್ಳ ಸಿನಿಮಾ. ಚಿತ್ರವನ್ನು ವೈಶಾಖ್ ನಿರ್ದೇಶನ ಮಾಡಿದ್ದು, ಲಕ್ಷ್ಮಿ ಮಂಜು, ಸಿದ್ದಿಕ್, ಲೀನಾ, ಹನಿ ರೋಸ್, ಸುದೇವ್ ನಾಯರ್, ಕೆಬಿ ಗಣೇಶ್ ಕುಮಾರ್ ಮತ್ತು ಜಾನಿ ಆಯಂಟನಿ ನಟಿಸಿದ್ದಾರೆ.